IPL 2024: ಬಿಸಿಸಿಐ ವಿಶೇಷ ಗುತ್ತಿಗೆ ಪಟ್ಟಿಯಲ್ಲಿ ಮಯಾಂಕ್ ಯಾದವ್
TV9 Web | Updated By: ಝಾಹಿರ್ ಯೂಸುಫ್
Updated on:
May 02, 2024 | 8:06 AM
Mayank Yadav: ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗದ ಚೆಂಡೆಸೆದ ದಾಖಲೆ ಮಯಾಂಕ್ ಯಾದವ್ ಹೆಸರಿನಲ್ಲಿದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 156.7 kmph ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ 4ನೇ ಬೌಲರ್ ದಾಖಲೆಯನ್ನು ಮಯಾಂಕ್ ನಿರ್ಮಿಸಿದ್ದಾರೆ..
1 / 5
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ನಿಖರ ದಾಳಿಯೊಂದಿಗೆ ಗಮನ ಸೆಳೆದಿರುವ ಯುವ ವೇಗಿ ಮಯಾಂಕ್ ಯಾದವ್ ಅವರನ್ನು ವಿಶೇಷ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ನೀಡಲು ಬಿಸಿಸಿಐ ಮುಂದಾಗಿದೆ ವರದಿಯಾಗಿದೆ. ಈ ಒಪ್ಪಂದದೊಂದಿಗೆ ಮಯಾಂಕ್ಗೆ ಉತ್ತಮ ಬೌಲರ್ ಆಗಲು ಬಿಸಿಸಿಐ ಕಡೆಯಿಂದ ಎಲ್ಲಾ ರೀತಿಯ ನೆರವು ಸಿಗಲಿದೆ.
2 / 5
ಅಂದರೆ ಈ ಹಿಂದೆ ಬಿಸಿಸಿಐ ಐವರು ಬೌಲರ್ಗಳೊಂದಿಗೆ ವಿಶೇಷ ಗುತ್ತಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಉಮ್ರಾನ್ ಮಲಿಕ್, ಯಶ್ ದಯಾಳ್, ಆಕಾಶ್ ದೀಪ್, ವಿಧ್ವತ್ ಕಾವೇರಪ್ಪ ಮತ್ತು ವೈಶಾಕ್ ವಿಜಯ್‌ಕುಮಾರ್ ಅವರನ್ನು ಈ ಪಟ್ಟಿಗೆ ಆಯ್ಕೆ ಮಾಡಿದ್ದರು.
3 / 5
ಇದೀಗ ಈ ಪಟ್ಟಿಗೆ 6ನೇ ವೇಗಿಯಾಗಿ ಮಯಾಂಕ್ ಯಾದವ್ ಅವರನ್ನು ಸಹ ಪರಿಗಣಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಮೂಲಕ ದೇಶೀಯ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡಿರುವ ವೇಗದ ಬೌಲರ್ಗಳಿಗೆ ಉತ್ತೇಜನ ನೀಡಲು ಬಿಸಿಸಿಐ ಮುಂದಾಗಿದೆ.
4 / 5
ಈ ಬಾರಿಯ ಐಪಿಎಲ್ನಲ್ಲಿ 4 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮಯಾಂಕ್ ಯಾದವ್ ಒಟ್ಟು 7 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರ ನಡುವೆ ಗಾಯಗೊಂಡ ಪರಿಣಾಮ ಅವರು ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಕೇವಲ 4 ಮ್ಯಾಚ್ಗಳ ಮೂಲಕ ಬಿಸಿಸಿಐ ವಿಶೇಷ ಗುತ್ತಿಗೆ ಒಪ್ಪಂದ ಪಡೆಯುವಲ್ಲಿ ಯುವ ವೇಗಿ ಯಶಸ್ವಿಯಾಗಿದ್ದಾರೆ.
5 / 5
ಅಂದಹಾಗೆ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗದ ಚೆಂಡೆಸೆದ ದಾಖಲೆ ಮಯಾಂಕ್ ಯಾದವ್ ಹೆಸರಿನಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 155.8 kmph ವೇಗದಲ್ಲಿ ಚೆಂಡೆಸೆದಿದ್ದ ಮಯಾಂಕ್ ಆ ಬಳಿಕ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 156.7 kmph ವೇಗದಲ್ಲಿ ಬೌಲಿಂಗ್ ಮಾಡಿ ಮಿಂಚಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ 4ನೇ ಬೌಲರ್ ಎನಿಸಿಕೊಂಡಿದ್ದಾರೆ.