IPL 2024: ಕೈ ಕೊಟ್ಟ ಬೌಲರ್ಗಳು: ಸಂಕಷ್ಟಕ್ಕೆ ಸಿಲುಕಿದ CSK ತಂಡ..!
IPL 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಸಿಎಸ್ಕೆ ತಂಡವು ಈವರೆಗೆ 10 ಪಂದ್ಯಗಳನ್ನಾಡಿದೆ. ಈ ಹತ್ತು ಪಂದ್ಯಗಳಲ್ಲಿ 5 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಎಸ್ಆರ್ಹೆಚ್ ತಂಡಗಳು ಕೂಡ 10 ಅಂಕಗಳನ್ನು ಹೊಂದಿದ್ದು, ಈ ಮೂಲಕ ಪ್ಲೇಫ್ ರೇಸ್ನಲ್ಲಿದೆ. ಹೀಗಾಗಿ ಸಿಎಸ್ಕೆ ತಂಡವು ಮುಂದಿನ 4 ಪಂದ್ಯಗಳಲ್ಲಿ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ ಹಂತಕ್ಕೇರಲಿದೆ.