IPL 2024: RCB ಸೋಲಿಗೆ ಅಚ್ಚರಿಯ ಕಾರಣ ನೀಡಿದ ಫಾಫ್ ಡುಪ್ಲೆಸಿಸ್

| Updated By: ಝಾಹಿರ್ ಯೂಸುಫ್

Updated on: Apr 07, 2024 | 9:02 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಅನ್ನು ಸೋಲಿನೊಂದಿಗೆ ಆರಂಭಿಸಿದ್ದ ಆರ್​ಸಿಬಿ ಇದೀಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತಿದ್ದ ಆರ್​ಸಿಬಿ, ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸೋಲಿನ ಸರಮಾಲೆ ಮುಂದುವರೆದಿದೆ. ಆಡಿರುವ 5 ಪಂದ್ಯಗಳಲ್ಲಿ ಆರ್​ಸಿಬಿ ನಾಲ್ಕನೇ ಬಾರಿ ಸೋಲನುಭವಿಸಿದೆ. ಅದರಲ್ಲೂ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 183 ರನ್​ ಬಾರಿಸಿದರೂ ಆರ್​ಸಿಬಿ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

2 / 6
ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ (113) ಅಜೇಯ ಶತಕ ಬಾರಿಸಿದ್ದರು. ಈ ಶತಕದ ನೆರವಿನಿಂದ ಆರ್​ಸಿಬಿ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 183 ರನ್ ಪೇರಿಸಿತು.

3 / 6
184 ರನ್​ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ (100) ಅಜೇಯ ಶತಕ ಸಿಡಿಸಿದರು. ಈ ಸೆಂಚುರಿಯೊಂದಿಗೆ 19.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್​ಗಳಿಂದ ಜಯ ಸಾಧಿಸಿತು.

4 / 6
ಈ ಸೋಲಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್, ನಾವು ಈ ಪಂದ್ಯದಲ್ಲಿ ಕನಿಷ್ಠ 190 ರನ್​ಗಳನ್ನು ಕಲೆಹಾಕಬೇಕಿತ್ತು. ಆದರೆ ಕೊನೆಯಲ್ಲಿ ಎಡವಿದ್ದೆವು. 10 ರಿಂದ 15 ರನ್​ಗಳು ಕಡಿಮೆಯಾಯಿತು. ಆರ್​ಸಿಬಿ ಸೋಲಿಗೆ ಇದು ಒಂದು ಕಾರಣ ಎಂದರು.

5 / 6
ಇನ್ನು ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದನ್ನು ಹೊರಗಳಿದ ಫಾಫ್, ಕ್ಯಾಮರೋನ್ ಗ್ರೀನ್ ಅಥವಾ ದಿನೇಶ್ ಕಾರ್ತಿಕ್ ಆಗಮನದಿಂದ ನಾವು ದೊಡ್ಡ ಮೊತ್ತಗಳಿಸಬಲ್ಲೆವು ಅಂದುಕೊಂಡಿದ್ದೆವು. ಆದರೆ ಪಿಚ್ ಟ್ರಿಕಿ ಆಗಿದ್ದ ಕಾರಣ ಆಡಲು ಸಾಧ್ಯವಾಗಿರಲಿಲ್ಲ. ಸ್ಪಿನ್ನರ್‌ಗಳನ್ನು ಎದುರಿಸುವುದು ಕಷ್ಟಕರವಾಗಿತ್ತು.  ಸಾಕಷ್ಟು ಚೆಂಡುಗಳು ಬ್ಯಾಟ್‌ನ ಕೆಳಭಾಗಕ್ಕೆ ಬಡಿಯುತ್ತಿದ್ದವು ಎಂದು ಫಾಫ್ ಹೇಳಿದ್ದಾರೆ.

6 / 6
ಇನ್ನು ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿತ್ತು ಎಂಬುದನ್ನು ಒಪ್ಪಿಕೊಂಡ ಫಾಫ್ ಡುಪ್ಲೆಸಿಸ್, ನಮ್ಮ ಸೋಲಿಗೆ ಮುಖ್ಯ ಕಾರಣ ಇಬ್ಬನಿ. ಸೆಕೆಂಡ್ ಇನಿಂಗ್ಸ್ ವೇಳೆ "ಇಬ್ಬನಿ" ಇದ್ದ ಕಾರಣ ಬೌಲಿಂಗ್ ನಡೆಯಲಿಲ್ಲ ಎಂದರು. ಹೀಗಾಗಿ ಸೋಲಬೇಕಾಯಿತು. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಆರ್​​ಸಿಬಿ ಕಂಬ್ಯಾಕ್ ಮಾಡಲಿದೆ ಎಂದು ಫಾಫ್ ಡುಪ್ಲೆಸಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.