IPL 2024: RCB ಸೋಲಿಗೆ ವಿರಾಟ್ ಕೊಹ್ಲಿ ಕಾರಣ: ತಿರುಗಿ ಬಿದ್ದ ಫ್ಯಾನ್ಸ್..!

| Updated By: ಝಾಹಿರ್ ಯೂಸುಫ್

Updated on: Apr 07, 2024 | 7:35 AM

IPL 2024: ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಈ ಶತಕದ ಬೆನ್ನಲ್ಲೇ ಕಿಂಗ್ ಕೊಹ್ಲಿಯ ಇನಿಂಗ್ಸ್ ಬಗ್ಗೆ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಏಕೆಂದರೆ 200 ಕ್ಕಿಂತ ಮೇಲೆ ರನ್​ ಗಳಿಸಬಹುದಾಗಿದ್ದ ಪಿಚ್​ನಲ್ಲಿ ಕೊಹ್ಲಿ ಅತ್ಯಂತ ಸ್ಲೋ ಸೆಂಚುರಿ ಸಿಡಿಸಿದ್ದಾರೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024)​ ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 4 ರಲ್ಲಿ ಸೋತಿದೆ. ಈ ಹಿಂದೆ ಸಿಎಸ್​ಕೆ, ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧ ಮಕಾಡೆ ಮಲಗಿದ್ದ ಆರ್​ಸಿಬಿ ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) RCB ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

2 / 7
ಇದಕ್ಕೆ ಮುಖ್ಯ ಕಾರಣ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿರುವುದು. ಅಂದರೆ ಐಪಿಎಲ್​ ಇತಿಹಾಸದಲ್ಲಿ 8 ಶತಕ ಬಾರಿಸಿ ದಾಖಲೆ ಬರೆದಿರುವ ಕೊಹ್ಲಿ ಇದೇ ಮೊದಲ ಬಾರಿಗೆ ಅತ್ಯಂತ ನಿಧಾನಗತಿಯಲ್ಲಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 67 ಎಸೆತಗಳನ್ನು ಎಂಬುದು ವಿಶೇಷ.

3 / 7
ಅಂದರೆ ಶತಕ ಪೂರೈಸಲು ಕೊಹ್ಲಿ ಒಟ್ಟು 11.1 ಓವರ್​ಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಐಪಿಎಲ್​ನಲ್ಲಿ ನಿಧಾನಗತಿಯಲ್ಲಿ ಶತಕ ಸಿಡಿಸಿ ಕಳಪೆ ದಾಖಲೆ ಬರೆದಿದ್ದ ಮನೀಶ್ ಪಾಂಡೆ ಅವರ ಕೆಟ್ಟ ರೆಕಾರ್ಡ್​ ಅನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಈ ಹೀನಾಯ ದಾಖಲೆಯ ಬೆನ್ನಲ್ಲೇ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಅಪಸ್ವರಗಳು ಕೇಳಿ ಬರಲಾರಂಭಿಸಿದೆ.

4 / 7
ಏಕೆಂದರೆ ಬ್ಯಾಟಿಂಗ್ ಪಿಚ್ ಆಗಿದ್ದರೂ, ಮೊದಲ ಇನಿಂಗ್ಸ್​ನಲ್ಲಿ ಯಾವುದೇ ಒತ್ತಡ ಇಲ್ಲದಿದ್ದರೂ ವಿರಾಟ್ ಕೊಹ್ಲಿ ಶತಕ ಪೂರೈಸಲು 67 ಎಸೆತಗಳನ್ನು ತೆಗೆದುಕೊಂಡಿದ್ದು ಆರ್​ಸಿಬಿ ತಂಡದ ರನ್​ ಗತಿಯ ಮೇಲೆ ಪರಿಣಾಮ ಬೀರಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಚೇಸಿಂಗ್​ನ ಒತ್ತಡದಲ್ಲೂ 58 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.

5 / 7
ಆದರೆ ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್​ನಿಂದಾಗಿ ಆರ್​ಸಿಬಿ ತಂಡವು 200ರ ಗಡಿದಾಟಲು ಸಾಧ್ಯವಾಗಿಲ್ಲ. ಅದರಲ್ಲೂ ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್​ರಂತಹ ಹೊಡಿಬಡಿ ದಾಂಡಿಗರಿದ್ದರೂ ಕೊಹ್ಲಿ ಕೊನೆಯ ಓವರ್​ಗಳ ವೇಳೆ ವೇಗದಿಂದ ಆಡದಿರುವುದು ಆರ್​ಸಿಬಿ ತಂಡದ ಒಟ್ಟು ಸ್ಕೋರ್​ ಮೇಲೆ ಪರಿಣಾಮ ಬೀರಿದೆ ಎಂದು ಕೆಲ ಅಭಿಮಾನಿಗಳ ವಾದ.

6 / 7
ಒಂದು ವೇಳೆ ಅಂತಿಮ 5 ಓವರ್​ಗಳ ವೇಳೆ ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರೆ ಆರ್​ಸಿಬಿ ತಂಡದ ಮೊತ್ತ 200ರ ಗಡಿದಾಟುತ್ತಿತ್ತು. ಆದರೆ ಕೊನೆಯ 2 ಓವರ್​ಗಳಲ್ಲಿ ಆರ್​ಸಿಬಿ ಕಲೆಹಾಕಿದ್ದು ಕೇವಲ 18 ರನ್​ಗಳು ಮಾತ್ರ. ಅದರಲ್ಲೂ ಕೊಹ್ಲಿ 19ನೇ ಓವರ್​ನಲ್ಲಿ ತಮ್ಮ ಶತಕ ಪೂರೈಸಲು ಹೆಚ್ಚಿನ ಒತ್ತು ನೀಡಿದ್ದರು. ಇದರಿಂದ ಆರ್​ಸಿಬಿ ತಂಡದ ರನ್​ ಗತಿಯು ಇಳಿಕೆಮುಖವಾಯಿತು ಎಂಬ ವಾದವನ್ನು ಮುಂದಿಡುತ್ತಿದ್ದಾರೆ.

7 / 7
ಒಟ್ಟಿನಲ್ಲಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಇದೀಗ ಸ್ಲೋ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ಅನಗತ್ಯ ದಾಖಲೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಸ್ಲೋ ಸೆಂಚುರಿ ಬೆನ್ನಲ್ಲೇ ಕೊಹ್ಲಿ ಇನಿಂಗ್ಸ್ ವಿರುದ್ಧ ಪರ ವಿರೋಧ ಚರ್ಚೆಗಳು ಶುರುವಾಗಿದೆ.