Hardik Pandya: ಹೋಗಿ ಬೌಂಡರಿ ಲೈನ್​ನಲ್ಲಿ ನಿಲ್ಲು: ನಾನಾ? ಹೌದು, ನೀನೇ..!

| Updated By: ಝಾಹಿರ್ ಯೂಸುಫ್

Updated on: Mar 25, 2024 | 6:55 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ಗುಜರಾತ್ ಟೈಟಾನ್ಸ್ ತಂಡ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 168 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 162 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 6 ರನ್​ಗಳ ಜಯ ಸಾಧಿಸಿದೆ.

1 / 6
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 5ನೇ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.

2 / 6
ಅದರಂತೆ ಚೆಂಡನ್ನು ಕೈಗೆತ್ತಿಕೊಂಡ ಹಾರ್ದಿಕ್ ಪಾಂಡ್ಯ ಮೊದಲ ಓವರ್ ಎಸೆಯುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ಬೌಲಿಂಗ್ ಲೈನಪ್ ಮತ್ತು ಫೀಲ್ಡಿಂಗ್​ನಲ್ಲೂ ಹಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಯೋಗಗಳ ಮೂಲಕ ರೋಹಿತ್ ಶರ್ಮಾರನ್ನು ಬೌಂಡರಿ ಲೈನ್​ಗೆ ಕಳುಹಿಸಿದರು.

3 / 6
ಹೌದು, ಪವರ್​ಪ್ಲೇ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್​ನತ್ತ ಕಳುಹಿಸಿದರು. ಸಾಮಾನ್ಯವಾಗಿ ಹಿಟ್​ಮ್ಯಾನ್ ಸ್ಲಿಪ್ ಹಾಗೂ ಫ್ರಂಟ್​ ಫೀಲ್ಡಿಂಗ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ಪಾಂಡ್ಯ ಮಾತ್ರ ರೋಹಿತ್​ರನ್ನು ಲಾಂಗ್ ಆನ್​ನತ್ತ ನಿಲ್ಲಿಸಿ ಅಚ್ಚರಿ ಮೂಡಿಸಿದರು.

4 / 6
ಇದಾದ ಬಳಿಕ ಕೂಡ ಹಲವು ಬಾರಿ ರೋಹಿತ್ ಶರ್ಮಾ ಅವರ ಫೀಲ್ಡಿಂಗ್​ ಬದಲಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್​, ಇನ್ನೊಮ್ಮೆ ಲೆಗ್​ ಸೈಡ್, ಮಗದೊಮ್ಮೆ ಮಿಡ್ ವಿಕೆಟ್​ನತ್ತ ನಿಲ್ಲಿಸಿದರು. ಹೀಗೆ ರೋಹಿತ್ ಶರ್ಮಾ ಅವರನ್ನು ಮೈದಾನದ ಮೂಲೆ ಮೂಲೆಯಲ್ಲಿ ನಿಲ್ಲುವಂತೆ ಮಾಡಿದರು.

5 / 6
ಅದರಲ್ಲೂ ಅಂತಿಮ ಓವರ್​ಗಳ ವೇಳೆ 30 ಯಾರ್ಡ್​ ಸರ್ಕಲ್​ನಿಂದ ಮತ್ತೊಮ್ಮೆ ಮುಂಬೈ ತಂಡದ ಮಾಜಿ ನಾಯಕನನ್ನು ಲಾಂಗ್ ಆನ್​ನತ್ತ ಕಳುಹಿಸಿದರು. ಲಾಂಗ್​ ಆನ್​ನತ್ತ ತೆರಳುವಂತೆ ರೋಹಿತ್ ಶರ್ಮಾಗೆ ಸೂಚಿಸಿದಾಗ, ಗೊಂದಲದಿಂದ ನಾನಾ ಎಂದು ಕೇಳುತ್ತಿರುವುದು ಕೂಡ ಕಂಡು ಬಂತು. ಹೌದು ನೀನೇ, ಬೌಂಡರಿ ಲೈನ್​ನತ್ತ ಹೋಗು ಎಂದು ಹಾರ್ದಿಕ್ ಪಾಂಡ್ಯ ಕೈಸನ್ನೆ ಮಾಡಿದರು.

6 / 6
ಸಾಮಾನ್ಯವಾಗಿ ರೋಹಿತ್ ಶರ್ಮಾ ಮುಂಭಾಗದಲ್ಲಿ ಫೀಲ್ಡಿಂಗ್ ಮಾಡುವುದು ವಾಡಿಕೆ. ಅದರಲ್ಲೂ ಹಿರಿಯ ಆಟಗಾರನಾಗಿರುವ ಕಾರಣ ಬೌಂಡರಿ ಲೈನ್​ನಲ್ಲಿ ಚುರುಕಾಗಿ ಫೀಲ್ಡಿಂಗ್ ಮಾಡುವುದು ಕಷ್ಟ. ಇದಾಗ್ಯೂ ಹಾರ್ದಿಕ್ ಪಾಂಡ್ಯ, ಯುವ ಆಟಗಾರರನ್ನು ಫ್ರಂಟ್ ಫೀಲ್ಡಿಂಗ್​ನಲ್ಲಿ ನಿಲ್ಲಿಸಿ ರೋಹಿತ್ ಶರ್ಮಾ ಅವರನ್ನೇ ಬೌಂಡರಿ ಲೈನ್​ಗೆ ಕಳುಹಿಸಿ ಅಚ್ಚರಿ ಮೂಡಿಸಿದರು.