IPL 2024: 4 ತಂಡಗಳ ಹೆಸರಿನಲ್ಲಿದೆ ಐಪಿಎಲ್​ನ ಗರಿಷ್ಠ ಸ್ಕೋರ್ ದಾಖಲೆ

| Updated By: ಝಾಹಿರ್ ಯೂಸುಫ್

Updated on: Apr 04, 2024 | 12:08 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲಿ ಕೇವಲ 4 ತಂಡಗಳು ಮಾತ್ರ 250 ಕ್ಕಿಂತ ಅಧಿಕ ರನ್ ಕಲೆಹಾಕಿದೆ. ಈ ನಾಲ್ಲು ತಂಡಗಳಲ್ಲಿ 2 ತಂಡಗಳ ದಾಖಲೆ ನಿರ್ಮಾಣವಾಗಿರುವುದು ಈ ಬಾರಿಯ ಐಪಿಎಲ್​ನಲ್ಲಿ ಎಂಬುದು ವಿಶೇಷ. ಅದು ಕೂಡ ಐಪಿಎಲ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಸ್ಕೋರ್ ಗಳಿಸುವ ಮೂಲಕ ಈ ದಾಖಲೆಗಳನ್ನು ಬರೆಯಲಾಗಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2024) ಹಲವು ದಾಖಲೆಗಳು ನಿರ್ಮಾಣವಾಗಿದೆ. ಕೆಲ ದಾಖಲೆಗಳು ಈಗಲೂ ಅಚ್ಚಳಿಯದೇ ಉಳಿದರೆ, ಮತ್ತೆ ಕೆಲವು ದಾಖಲೆಗಳು ನಿರ್ನಾಮವಾಗಿದೆ. ಹೀಗೆ ಒಂದೇ ವರ್ಷ ಆರ್​ಸಿಬಿ ತಂಡದ ಹೆಸರಿನಲ್ಲಿದ್ದ ಸಾರ್ವಕಾಲಿಕ ಗರಿಷ್ಠ ಸ್ಕೋರ್ ದಾಖಲೆಯನ್ನು ಎರಡು ತಂಡಗಳು ಅಳಿಸಿ ಹಾಕಿದೆ. ಅದು ಸಹ ಒಂದೇ ವಾರದ ಅಂತರದಲ್ಲಿ ಎಂಬುದು ವಿಶೇಷ.

2 / 6
ಅಂದರೆ 2013 ರಲ್ಲಿ ಆರ್​ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ಬರೆದಿತ್ತು. ಇದಾದ ಬಳಿಕ 250 ರನ್​ಗಳ ಗಡಿದಾಟಿದ್ದು ಲಕ್ನೋ ಸೂಪರ್ ಜೈಂಟ್ಸ್ ಮಾತ್ರ. ಆದರೆ ಈ ಬಾರಿ ಎರಡು ತಂಡಗಳು 270 ಕ್ಕಿಂತ ಅಧಿಕ ರನ್​ಗಳಿಸಿ ಇತಿಹಾಸ ನಿರ್ಮಿಸಿದೆ. ಅದರಂತೆ ಇದೀಗ ಐಪಿಎಲ್​ನಲ್ಲಿ 250+ ಸ್ಕೋರ್​ಗಳಿಸಿದ ತಂಡಗಳ ಪಟ್ಟಿಯಲ್ಲಿ ನಾಲ್ಕು ತಂಡಗಳು ಕಾಣಿಸಿಕೊಂಡಿದೆ. ಆ ತಂಡಗಳಾವುವು ಎಂದರೆ...

3 / 6
1- ಸನ್​ರೈಸರ್ಸ್ ಹೈದರಾಬಾದ್: ಐಪಿಎಲ್ 2024 ರ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುವ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್​ ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 277 ರನ್ ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್.

4 / 6
2- ಕೊಲ್ಕತ್ತಾ ನೈಟ್ ರೈಡರ್ಸ್​: ಐಪಿಎಲ್ ಸೀಸನ್ 17ರ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್​ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್​ ಕಲೆಹಾಕಿದೆ. ಈ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ರನ್ ಪೇರಿಸಿದ 2ನೇ ತಂಡ ಎನಿಸಿಕೊಂಡಿದೆ.

5 / 6
3- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಐಪಿಎಲ್ 2013 ರಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆರ್​ಸಿಬಿ ಬ್ಯಾಟರ್​ಗಳು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್​ ಕಲೆಹಾಕಿ ದಾಖಲೆ ಬರೆದಿದ್ದರು. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಈ ದಾಖಲೆಯನ್ನು ಎಸ್​ಆರ್​ಹೆಚ್ ಹಾಗೂ ಕೆಕೆಆರ್ ತಂಡ ಮುರಿದಿರುವುದು ವಿಶೇಷ.

6 / 6
4- ಲಕ್ನೋ ಸೂಪರ್ ಜೈಂಟ್ಸ್​: ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಬ್ಬರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿತ್ತು. ಈ ಮೂಲಕ ಆರ್​ಸಿಬಿ ಬಳಿಕ ಐಪಿಎಲ್​ನಲ್ಲಿ 250 ಕ್ಕಿಂತ ಅಧಿಕ ರನ್ ಕಲೆಹಾಕಿದ 2ನೇ ತಂಡ ಎನಿಸಿಕೊಂಡಿತು. ಇದೀಗ ಆರ್​ಸಿಬಿ ಮತ್ತು ಎಲ್​ಎಸ್​ಜಿ ತಂಡಗಳ ಟಾಪ್-2 ಸ್ಕೋರ್​ ದಾಖಲೆಗಳನ್ನು ಎಸ್​ಆರ್​ಹೆಚ್ ಮತ್ತು ಕೆಕೆಆರ್ ತಂಡಗಳು ಅಳಿಸಿ ಹಾಕಿದೆ.