IPL 2024: ಗಾಯಗೊಂಡ ಸ್ಪೀಡ್​ಸ್ಟರ್ ಮಾಯಾಂಕ್ ಯಾದವ್

| Updated By: ಝಾಹಿರ್ ಯೂಸುಫ್

Updated on: Apr 08, 2024 | 9:30 AM

IPL 2024: ಈ ಬಾರಿಯ ಐಪಿಎಲ್ ಮೂಲಕ ಬೆಳಕಿಗೆ ಬಂದ ಯುವ ಪ್ರತಿಭೆ ಮಯಾಂಕ್ ಯಾದವ್ ಗಾಯಗೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡ ಮಯಾಂಕ್ ಅರ್ಧದಲ್ಲೇ ಮೈದಾನದಿಂದ ಹೊರನಡೆದಿದ್ದರು. ಇದೀಗ ಗಾಯಾಳುವಾಗಿರುವ ಮಯಾಂಕ್ ಏಪ್ರಿಲ್ 12 ರಂದು ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.

1 / 5
ಈ ಬಾರಿಯ ಐಪಿಎಲ್​ನಲ್ಲಿ (IPL 2024) ತನ್ನ ವೇಗದಿಂದಲೇ ಸಂಚಲನ ಸೃಷ್ಟಿಸಿದ್ದ ಯುವ ವೇಗಿ ಮಯಾಂಕ್ ಯಾದವ್ (Mayank Yadav) ಗಾಯಗೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮಯಾಂಕ್ ತಮ್ಮ ಹಿಂದಿನ ವೇಗವನ್ನು ತೋರಿಸುವಲ್ಲಿ ವಿಫಲರಾಗಿದ್ದರು. ಅಲ್ಲದೆ ಕೇವಲ 1 ಓವರ್ ಎಸೆದು ಮೈದಾನ ತೊರೆದಿದ್ದರು.

2 / 5
ಈ ಒಂದು ಓವರ್​ನಲ್ಲಿ ಅವರು 140 ಕ್ಕಿಂತ ಕಡಿಮೆ ಸ್ಪೀಡ್​ನಲ್ಲಿ ಚೆಂಡೆಸೆದಿರುವುದು ವಿಶೇಷ. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಮಯಾಂಕ್ 145 ರಿಂದ 150 ಕ್ಕಿಂತ ಹೆಚ್ಚಿನ ವೇಗದಲ್ಲೇ ಬೌಲಿಂಗ್ ಮಾಡಿದ್ದರು. ಆದರೆ ಈ ಬಾರಿ ಅವರು ತಮ್ಮ ಹಿಂದಿನ ವೇಗ ಮತ್ತು ಲೈನ್ ಲೆಂಗ್ತ್ ಅನ್ನು ಕಾಪಾಡಿಕೊಳ್ಳಲು ವಿಫಲರಾದರು. ಅಲ್ಲದೆ ಸೈಡ್ ಸ್ಟ್ರೈನ್ ನೋವಿನ ಕಾರಣ 1 ಓವರ್ ಮುಗಿಯುತ್ತಿದ್ದಂತೆ ಮೈದಾನದಿಂದ ಹೊರ ನಡೆದರು.

3 / 5
ಇದಾದ ಬಳಿಕ ಮಯಾಂಕ್ ಯಾದವ್ ಮೈದಾನಕ್ಕಿಳಿದಿಲ್ಲ. ಇದಾಗ್ಯೂ 21 ವರ್ಷದ ಯುವ ವೇಗಿಯು ಗಂಭೀರ ಗಾಯಕ್ಕೆ ಒಳಗಾಗಿಲ್ಲ ಎಂದು ಎಲ್​ಎಸ್​ಜಿ ತಂಡದ ಮತ್ತೋರ್ವ ವೇಗಿ ಯಶ್ ಠಾಕೂರ್ ತಿಳಿಸಿದ್ದಾರೆ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಪಂದ್ಯದ ವೇಳೆಗೆ ಫಿಟ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

4 / 5
ಈ ಬಾರಿಯ ಐಪಿಎಲ್​ನಲ್ಲಿ 156.7 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಮಯಾಂಕ್ ಯಾದವ್ ದಾಖಲೆ ಬರೆದಿದ್ದಾರೆ. ಅಲ್ಲದೆ ಇದುವರೆಗೆ 9 ಓವರ್​ಗಳನ್ನು ಎಸೆದಿರುವ ಮಯಾಂಕ್ 54 ರನ್ ನೀಡಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಾನಾಡಿದ ಮೊದಲೆರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ವಿಶೇಷ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

5 / 5
ಇನ್ನು ಮಯಾಂಕ್ ಯಾದವ್ ಅವರ ಅನುಪಸ್ಥಿತಿಯಲ್ಲೂ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್​ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಲಕ್ನೋ ನೀಡಿದ 163 ರನ್​ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ 130 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 33 ರನ್​ಗಳ ಭರ್ಜರಿ ಜಯ ಸಾಧಿಸಿದೆ.