IPL 2024: 2 ಸ್ಟೇಡಿಯಂನಲ್ಲಿ ಐಪಿಎಲ್​ನ ಕೊನೆಯ 4 ಪಂದ್ಯಗಳು..!

| Updated By: ಝಾಹಿರ್ ಯೂಸುಫ್

Updated on: Mar 24, 2024 | 10:52 AM

IPL 2024: ಐಪಿಎಲ್ 2024 ಅನ್ನು ವಿದೇಶಕ್ಕೆ ಶಿಫ್ಟ್ ಮಾಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಹಿಂದೆ 2009 ಹಾಗೂ 2014 ರ ಲೋಕಸಭಾ ಚುನಾವಣೆ ವೇಳೆ ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಈ ಬಾರಿ ಕೂಡ ಐಪಿಎಲ್ ಅನ್ನು ವಿದೇಶದಲ್ಲಿ ಆಯೋಜಿಸಲಿದೆ ಎನ್ನಲಾಗಿತ್ತು. ಆದರೀಗ ಟೂರ್ನಿಯನ್ನು ಭಾರತದಲ್ಲೇ ನಡೆಸುವುದಾಗಿ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಶುರುವಾಗಿದೆ. ಮಾರ್ಚ್ 22 ರಿಂದ ಆರಂಭವಾಗಿರುವ ಐಪಿಎಲ್​ನ ಮೊದಲಾರ್ಧದ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಇನ್ನುಳಿದ ಪಂದ್ಯದ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಬಿಸಿಸಿಐ ತಿಳಿಸಿದೆ.

2 / 6
ಇದರ ನಡುವೆ ಈ ಬಾರಿಯ ಐಪಿಎಲ್​ನ ಪ್ಲೇಆಫ್ ಪಂದ್ಯಗಳು ನಡೆಯುವುದೆಲ್ಲಿ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಸ್ತುತ ವರದಿ ಪ್ರಕಾರ, ಐಪಿಎಲ್ 2024ರ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

3 / 6
ಹಾಗೆಯೇ ಮೊದಲ ಕ್ವಾಲಿಫೈಯರ್ ಪಂದ್ಯ ಮತ್ತು ಎಲಿಮಿನೇಟರ್ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು 2ನೇ ಕ್ವಾಲಿಫೈಯರ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಲಿದೆ.

4 / 6
ಅಂದರೆ ಪ್ಲೇಆಫ್​ ಹಂತದ ನಾಲ್ಕು ಪಂದ್ಯಗಳಿಗೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಮತ್ತು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ನಾಲ್ಕು ಪಂದ್ಯಗಳನ್ನು 2 ಸ್ಟೇಡಿಯಂ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ ಎಂದು  ವರದಿಯಾಗಿದೆ.

5 / 6
ಇದಾಗ್ಯೂ ದಿನಾಂಕವನ್ನು ಇನ್ನೂ ಸಹ ನಿಗದಿ ಮಾಡಲಾಗಿಲ್ಲ. ಏಕೆಂದರೆ ಏಪ್ರಿಲ್ 19 ರಿಂದ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದರಿಂದ ಭದ್ರತಾ ವ್ಯವಸ್ಥೆ ರೂಪಿಸಲು ತೊಡಕುಂಟಾಗಲಿದೆ. ಹೀಗಾಗಿ ಆಯಾ ರಾಜ್ಯದ ಚುನಾವಣಾ ದಿನಾಂಕವನ್ನು ಪರಿಶೀಲಿಸಿ ಐಪಿಎಲ್​ನ ಉಳಿದ ಪಂದ್ಯಗಳ ವೇಳಾಪಟ್ಟಿ ಸಿದ್ಧಪಡಿಸುವಲ್ಲಿ ಬಿಸಿಸಿಐ ನಿರತವಾಗಿದೆ.

6 / 6
ಇತ್ತ ಜೂನ್ 1 ರಿಂದ ಟಿ20 ವಿಶ್ವಕಪ್ ಕೂಡ ಶುರುವಾಗಲಿದ್ದು, ಅದಕ್ಕೂ ಒಂದು ವಾರ ಮುಂಚಿತವಾಗಿ ಐಪಿಎಲ್ ಫೈನಲ್ ಆಯೋಜಿಸಬೇಕಿದೆ. ಹೀಗಾಗಿ ಫೈನಲ್ ಪಂದ್ಯವು ಮೇ 26 ರಂದು (ಭಾನುವಾರ) ನಡೆಯುವ ಸಾಧ್ಯತೆಯಿದೆ.