ಇದಾಗ್ಯೂ ಈ ಪಂದ್ಯದಲ್ಲಿ 4 ಫೋರ್ಗಳನ್ನು ಬಾರಿಸುವ ಮೂಲಕ ಐಪಿಎಲ್ನಲ್ಲಿ 900+ ಬೌಂಡರಿಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. 217 ಐಪಿಎಲ್ ಇನಿಂಗ್ಸ್ಗಳಲ್ಲಿ 754 ಫೋರ್ಗಳು ಮತ್ತು 148 ಸಿಕ್ಸ್ಗಳನ್ನು ಬಾರಿಸಿ 902 ಬೌಂಡರಿಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 900 ಬೌಂಡರಿಗಳ ಗಡಿದಾಟಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಶಿಖರ್ ಧವನ್ ಇದೇ ಪಂದ್ಯದ ಮೂಲಕ ನಿರ್ಮಿಸಿರುವುದು ವಿಶೇಷ.