IPL 2024: RCB ತಂಡಕ್ಕೆ ಜೋಫ್ರಾ ಆರ್ಚರ್..?

| Updated By: ಝಾಹಿರ್ ಯೂಸುಫ್

Updated on: Mar 18, 2024 | 12:53 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಹರಾಜಿಗೂ ಮುನ್ನ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಫಿಟ್​ನೆಸ್ ಸಮಸ್ಯೆಯ ಕಾರಣ ಐಪಿಎಲ್​ನಿಂದ ಹಿಂದೆ ಸರಿದಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಆರ್ಚರ್ ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದಾರೆ. ಅದು ಕೂಡ ಬೆಂಗಳೂರಿನಲ್ಲಿ ಎಂಬುದು ವಿಶೇಷ. ಹೀಗಾಗಿಯೇ ಆರ್ಚರ್ IPL 2024​ ಗೆ ಎಂಟ್ರಿ ಕೊಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

1 / 8
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಶುರುವಾಗಲು ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಎಲ್ಲಾ ಆಟಗಾರರು ಇನ್ನೂ ಕೂಡ ತಂಡವನ್ನು ಕೂಡಿಕೊಂಡಿಲ್ಲ. ಅದರಲ್ಲೂ ಇಂಗ್ಲೆಂಡ್ ಆಟಗಾರ ಇನ್ನೂ ಸಹ ಬೆಂಗಳೂರಿಗೆ ಆಗಮಿಸಿಲ್ಲ.

2 / 8
ಈ ಬಾರಿಯ ಹರಾಜಿನ ಮೂಲಕ ಆರ್​ಸಿಬಿ ಫ್ರಾಂಚೈಸಿ ಖರೀದಿಸಿದ ಇಂಗ್ಲೆಂಡ್ ಆಲ್​ರೌಂಡರ್ ಟಾಮ್ ಕರನ್ ಈವರೆಗೆ ಆರ್​ಸಿಬಿ ತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಕರನ್ ಐಪಿಎಲ್​ಗೆ ಅಲಭ್ಯರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

3 / 8
ಇದಕ್ಕೆ ಮುಖ್ಯ ಕಾರಣ ಟಾಮ್ ಕರನ್ ಜನವರಿ ತಿಂಗಳಿನಲ್ಲಿ ಗಾಯಗೊಂಡಿರುವುದು. ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನಲ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದ ಕರನ್ ಆ ಬಳಿಕ ಯಾವುದೇ ಪಂದ್ಯವಾಡಿಲ್ಲ. ಇದೀಗ ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿದ್ದರೂ ಆರ್​ಸಿಬಿ ತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಟಾಮ್ ಕರನ್ ಐಪಿಎಲ್ ಸೀಸನ್ 17 ಗೆ ಅಲಭ್ಯರಾಗುವ ಸಾಧ್ಯತೆಯಿದೆ.

4 / 8
ಇತ್ತ ಟಾಮ್ ಕರನ್ ಅಲಭ್ಯತೆಯ ಸುದ್ದಿಗಳ ಬೆನ್ನತ್ತ ಅತ್ತ ಜೋಫ್ರಾ ಆರ್ಚರ್ ಆರ್​ಸಿಬಿ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಅದು ಕೂಡ ಅಭ್ಯಾಸ ಪಂದ್ಯದ ವೇಳೆ. ಅಂದರೆ ಇಂಗ್ಲೆಂಡ್​ನ ಸಸೆಕ್ಸ್ ಕ್ಲಬ್ ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯಗಳನ್ನಾಡುತ್ತಿದೆ. ಈ ತಂಡದಲ್ಲಿ ಜೋಫ್ರಾ ಆರ್ಚರ್ ಕೂಡ ಇದ್ದಾರೆ.

5 / 8
ಇದರ ನಡುವೆ ಆರ್​ಸಿಬಿ ಜೊತೆ ಸಸೆಕ್ಸ್ ತಂಡವು ಅಭ್ಯಾಸ ಪಂದ್ಯವನ್ನಾಡಿದ್ದು, ಈ ವೇಳೆ ಜೋಫ್ರಾ ಆರ್ಚರ್ ಕೂಡ ಕಣಕ್ಕಿಳಿದಿದ್ದರು. ಅಷ್ಟೇ ಅಲ್ಲದೆ ಇದೀಗ ಆರ್ಚರ್ ಆರ್​ಸಿಬಿ ತಂಡದ ಜೆರ್ಸಿಯ ಫೋಟೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

6 / 8
ಆರ್​ಸಿಬಿ ಜೆರ್ಸಿ ಚಿತ್ರವಿರುವ ಫೋಟೋವೊಂದನ್ನು ಜೋಫ್ರಾ ಆರ್ಚರ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಮೂಲಕ ಇಂಗ್ಲೆಂಡ್ ವೇಗಿ ಆರ್​​ಸಿಬಿ ಪರ ಕಣಕ್ಕಿಳಿಯುವ ಸುಳಿವು ನೀಡಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

7 / 8
ಏಕೆಂದರೆ ಅತ್ತ ಟಾಮ್ ಕರನ್ ಆಗಮಿಸದಿದ್ದರೆ ಆರ್​ಸಿಬಿ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕು. ಇತ್ತ ಜೋಫ್ರಾ ಆರ್ಚರ್ ಬೆಂಗಳೂರಿನಲ್ಲಿಯೇ ಇದ್ದಾರೆ. ಅದರಲ್ಲೂ ಆರ್​ಸಿಬಿ ತಂಡದ ಜೊತೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ವೇಗಿಯನ್ನು ಆರ್​ಸಿಬಿ ಬದಲಿ ಆಟಗಾರನಾಗಿ ಆಯ್ಕೆ ಮಾಡಿದರೂ ಅಚ್ಚರಿಪಡಬೇಕಿಲ್ಲ.

8 / 8
ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿರುವ ಜೋಫ್ರಾ ಆರ್ಚರ್ 40 ಪಂದ್ಯಗಳಿಂದ 48 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಆರ್ಚರ್, ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಫಿಟ್​ನೆಸ್ ಸಮಸ್ಯೆಯ ಕಾರಣ ಹಿಂದೆ ಸರಿದಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಜೋಫ್ರಾ ಆರ್ಚರ್ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದು, ಹೀಗಾಗಿ ಐಪಿಎಲ್​ಗೆ ಬದಲಿ ಆಟಗಾರನಾಗಿ ಎಂಟ್ರಿ ಕೊಡುವ ಸಾಧ್ಯತೆಯಿದೆ.