IPL 2024: ವೇಗ… ಅತೀ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದ ಪತಿರಾಣ

| Updated By: ಝಾಹಿರ್ ಯೂಸುಫ್

Updated on: Mar 27, 2024 | 8:22 AM

IPL 2024: ಇಂಡಿಯನ್ ಪ್ರೀಮಿಯರೆ್ ಲೀಗ್​ನ (ಐಪಿಎಲ್ 2024) 6ನೇ ಪಂದ್ಯದ ಮೂಲಕ ಸಿಎಸ್​ಕೆ ಪರ ಕಣಕ್ಕಿಳಿದಿರುವ ಮಥೀಶ ಪತಿರಾಣ 4 ಓವರ್​ಗಳಲ್ಲಿ 29 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ. ಈ 29 ರನ್​ಗಳಲ್ಲಿ ಅವರು 5 ವೈಡ್​ಗಳನ್ನು ಎಸೆದಿದ್ದರು. ಇದಾಗ್ಯೂ 18ನೇ ಓವರ್​ನಲ್ಲಿ ಮಾರಕ ಎಸೆತದ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಅತೀ ವೇಗದದಲ್ಲಿ ಚೆಂಡೆಸೆದ ಬೌಲರ್ ಎನಿಸಿಕೊಂಡಿದ್ದಾರೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 6ನೇ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸುವ ಮೂಲಕ ಮಥೀಶ ಪತಿರಾಣ (Matheesha Pathirana) ದಾಖಲೆ ಬರೆದಿದ್ದಾರೆ. ಅದು ಕೂಡ ವೇಗದ ಯಾರ್ಕರ್ ಎಸೆತಗಳ ಮೂಲಕ ಎಂಬುದು ವಿಶೇಷ.

2 / 6
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಪತಿರಾಣ 145 ರ ಅಸುಪಾಸಿನಲ್ಲಿ ಚೆಂಡೆಸೆಯುವ ಮೂಲಕ ಗಮನ ಸೆಳೆದರು. ಅದರಲ್ಲೂ 18ನೇ ಓವರ್​ನಲ್ಲಿ ಎಸೆದ ಎಸೆತವೊಂದು 150 ಕಿ.ಮೀ ವೇಗದಲ್ಲಿ ಸಾಗಿತ್ತು.

3 / 6
18ನೇ ಓವರ್​ನ ಕೊನೆಯ ಎಸೆತದಲ್ಲಿ ಬ್ಯಾಟಿಂಗ್​ಗೆ ನಿಂತಿದ್ದ ರಾಹುಲ್ ತೆವಾಟಿಯಾ ಕಣ್ಣು ಮಿಟುಕಿಸುವಷ್ಟರಲ್ಲಿ ಚೆಂಡು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕೈ ಸೇರಿತ್ತು. ಅತ್ತ ಚೆಂಡಿನ ವೇಗವನ್ನು ಗಮನಿಸಿದಾಗ ಬರೋಬ್ಬರಿ 150.6 Kmph ಸ್ಪೀಡ್​ನಲ್ಲಿ ಸಾಗಿರುವುದು ಕಂಡು ಬಂತು.

4 / 6
ಇದರೊಂದಿಗೆ ಐಪಿಎಲ್ 2024 ರಲ್ಲಿ 150 Kmph ಗಿಂತ ಹೆಚ್ಚಿನ ವೇಗದಲ್ಲಿ ಚೆಂಡೆಸೆದ ಮೊದಲ ಬೌಲರ್ ಎಂಬ ದಾಖಲೆ ಮಥೀಶ ಪತಿರಾಣ ಹೆಸರಿಗೆ ಸೇರ್ಪಡೆಯಾಯಿತು. ಅಲ್ಲದೆ ಇದು ಈ ಬಾರಿಯ ಐಪಿಎಲ್​ನಲ್ಲಿ ಕಂಡು ಬಂದಿರುವ ಇದುವರೆಗಿನ ಅತೀ ವೇಗದ ಎಸೆತ ಎಂಬುದು ವಿಶೇಷ.

5 / 6
ಇನ್ನು ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಟೈಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 157.71 Kmph ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ.

6 / 6
ಐಪಿಎಲ್ 2022 ರಲ್ಲಿ ಲಾಕಿ ಫರ್ಗುಸನ್ 157.3 kmph ವೇಗದಲ್ಲಿ ಚೆಂಡೆಸೆಯುವ ಮೂಲಕ ಈ ದಾಖಲೆ ಸಮೀಪಕ್ಕೆ ಬಂದಿದ್ದರು. ಹಾಗೆಯೇ ಸನ್​ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಯುವ ವೇಗಿ ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ 157 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಹೀಗಾಗಿ ಈ ಇಬ್ಬರು ವೇಗಿಗಳು ಶಾನ್ ಟೈಟ್ ಹೆಸರಿನಲ್ಲಿರುವ ಈ ವಿಶೇಷ ದಾಖಲೆಯನ್ನು ಅಳಿಸಿ ಹಾಕುತ್ತಾರಾ ಕಾದು ನೋಡಬೇಕಿದೆ.