IPL 2024: ಅಷ್ಟಕ್ಕೂ ಈ ಮಯಾಂಕ್ ಡಾಗರ್ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Mar 27, 2024 | 7:52 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ 17 ರಲ್ಲಿ ಆರ್​ಸಿಬಿ ಈವರೆಗೆ 2 ಪಂದ್ಯಗಳನ್ನಾಡಿದೆ. ಈ ಎರಡೂ ಪಂದ್ಯಗಳಲ್ಲೂ ಆಲ್​ರೌಂಡರ್ ಆಗಿ ಮಯಾಂಕ್ ಡಾಗರ್ ಕಣಕ್ಕಿಳಿದಿದ್ದರು. ಇನ್ನು ಈ ಪಂದ್ಯಗಳಲ್ಲಿ ಆರ್​ಸಿಬಿ ಮೊದಲ ಮ್ಯಾಚ್​ನಲ್ಲಿ ಸಿಎಸ್​ಕೆ ವಿರುದ್ಧ ಸೋತರೆ. 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ದಾಖಲಿಸಿದೆ.

1 / 10
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದುವರೆಗೆ 2 ಪಂದ್ಯಗಳನ್ನಾಡಿದೆ. ಈ ಎರಡೂ ಪಂದ್ಯಗಳಲ್ಲೂ ಆರ್​ಸಿಬಿ ಪರ ಮಯಾಂಕ್ ಡಾಗರ್ ಕಾಣಿಸಿಕೊಂಡಿದ್ದಾರೆ.

2 / 10
ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ 2 ಓವರ್​ಗಳನ್ನು ಎಸೆದಿದ್ದ ಮಯಾಂಕ್ ಕೇವಲ 6 ರನ್ ಮಾತ್ರ ನೀಡಿ ಗಮನ ಸೆಳೆದಿದ್ದರು. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3 ಓವರ್​ಗಳಲ್ಲಿ 34 ರನ್ ನೀಡಿ ದುಬಾರಿಯಾಗಿದ್ದರು. ಇದಾಗ್ಯೂ ಮಯಾಂಕ್ ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ.

3 / 10
ಇದರ ಬೆನ್ನಲ್ಲೇ ಈ ಮಯಾಂಕ್ ಡಾಗರ್ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಕಳೆದ 16 ಸೀಸನ್ ಐಪಿಎಲ್​ನಲ್ಲಿ ಕೇಳಿಸಿಕೊಳ್ಳದ ಹೆಸರೊಂದು ಇದೀಗ ಏಕಾಏಕಿ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿಯೇ ಮಯಾಂಕ್ ಯಾರೆಂಬ ಗೂಗಲ್ ಸರ್ಚ್​ ಕೂಡ ಜೋರಾಗಿದೆ.

4 / 10
ಈ ಹುಡುಕಾಟದ ನಡುವೆ ಕೆಲವೊಂದು ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿದೆ. ಅಂದರೆ ಅಷ್ಟಕ್ಕೂ ಮಯಾಂಕ್ ಡಾಗರ್ ಯಾರೆಂದು ಕೇಳಿದರೆ ಥಟ್ಟನೆ ನೀಡಬಹುದಾದ ಉತ್ತರ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸಹೋದರಳಿಯ.

5 / 10
ವೀರೇಂದ್ರ ಸೆಹ್ವಾಗ್, ಮಯಾಂಕ್ ಡಾಗರ್ ಅವರ ತಾಯಿಯ ಸೋದರಸಂಬಂಧಿ. ಅಂದರೆ ವೀರು ಅವರ ಕಸಿನ್ ಸಿಸ್ಟರ್. ಹೀಗೆ ಟೀಮ್ ಇಂಡಿಯಾದ ಲೆಜೆಂಡ್ ಆಟಗಾರನೊಂದಿಗೆ ರಕ್ತ ಸಂಬಂಧ ಹೊಂದಿರುವ ಮಯಾಂಕ್ ಡಾಗರ್ ಕೂಡ ಮಾವನಂತೆ ಕ್ರಿಕೆಟ್​ನಲ್ಲಿ ಅಂಗಳಕ್ಕಿಳಿದಿದ್ದಾರೆ.

6 / 10
ಅಷ್ಟೇ ಅಲ್ಲದೆ ಈ ಹಿಂದೆ ಅಂಡರ್ 19 ವಿಶ್ವಕಪ್​ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2016 ರಲ್ಲಿ ನಡೆದ ಕಿರಿಯರ ವಿಶ್ವಕಪ್ ತಂಡದಲ್ಲಿ ಮಯಾಂಕ್ ಆಲ್​ರೌಂಡರ್ ಆಗಿ ಕಾಣಿಸಿಕೊಂಡಿದ್ದರು. ಅಂದು ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಯುವ ಎಡಗೈ ಸ್ಪಿನ್ನರ್ ಒಟ್ಟು 12 ವಿಕೆಟ್ ಕಬಳಿಸಿದ್ದರು.

7 / 10
ಇನ್ನೂ ಹೇಳಬೇಕೆಂದರೆ, 2016 ರಲ್ಲಿ ಅಂಡರ್-19 ವಿಶ್ವಕಪ್ ಆಡಿದ್ದ ಇಶಾನ್ ಕಿಶನ್, ರಿಷಭ್ ಪಂತ್, ಅವೇಶ್ ಖಾನ್, ವಾಷಿಂಗ್ಟನ್ ಸುಂದರ್, ಸರ್ಫರಾಝ್ ಖಾನ್ ಮತ್ತು ಖಲೀಲ್ ಅಹ್ಮದ್ ಸೇರಿದಂತೆ ಈಗಿನ ಪ್ರಮುಖ ಆಟಗಾರರ ಸಹ ಆಟಗಾರನಾಗಿ ಮಯಾಂಕ್ ಡಾಗರ್ ಮಿಂಚಿದ್ದರು.

8 / 10
ಆದರೆ ಮಯಾಂಕ್ ಡಾಗರ್​ಗೆ ಐಪಿಎಲ್​ನಲ್ಲಿ ಚಾನ್ಸ್ ಸಿಕ್ಕಿದ್ದು 2018 ರಲ್ಲಿ. ಪಂಜಾಬ್ ಕಿಂಗ್ಸ್ ತಂಡವು ಮೊದಲ ಬಾರಿಗೆ ಯುವ ಎಡಗೈ ಆಲ್​ರೌಂಡರ್​ಗೆ ಅವಕಾಶ ನೀಡಿತ್ತು. ಆದರೆ ಚೊಚ್ಚಲ ಪಂದ್ಯವಾಡುವ ಚಾನ್ಸ್ ಸಿಕ್ಕಿರಲಿಲ್ಲ.

9 / 10
ಇದಾದ ಬಳಿಕ 2023 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು 1.8 ಕೋಟಿ ರೂ. ನೀಡಿ ಮಯಾಂಕ್ ಡಾಗರ್ ಅವರನ್ನು ಖರೀದಿಸಿತ್ತು. ಅಲ್ಲದೆ ಎಸ್​ಆರ್​ಹೆಚ್ ಪರ 3 ಪಂದ್ಯಗಳನ್ನಾಡಿದ್ದ ಅವರು 1 ವಿಕೆಟ್ ಕಬಳಿಸಿದ್ದರು.

10 / 10
ಇನ್ನು ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್​ಸಿಬಿ ಫ್ರಾಂಚೈಸಿಯು ಶಹಬಾಝ್ ಅಹ್ಮದ್​ ಅವರನ್ನು ನೀಡಿ, ಎಸ್​ಆರ್​ಹೆಚ್ ತಂಡದಿಂದ ಮಯಾಂಕ್ ಡಾಗರ್ ಅವರನ್ನು ಟ್ರೇಡ್ ಮಾಡಿಕೊಂಡಿದೆ. ಅದರಂತೆ ಇದೀಗ 27 ವರ್ಷದ ಮಯಾಂಕ್ ಡಾಗರ್ ಆರ್​ಸಿಬಿ ಪರ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.