IPL 2024: 78 ಕುಟುಂಬಗಳಿಗೆ ಬೆಳಕಾದ ರಾಜಸ್ಥಾನ್ ರಾಯಲ್ಸ್

| Updated By: ಝಾಹಿರ್ ಯೂಸುಫ್

Updated on: Apr 07, 2024 | 10:18 AM

IPL 2024: ಐಪಿಎಲ್​ 2024ರ 19ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 183 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 19.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಮೂಲಕ IPL 2024 ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 19ನೇ ಪಂದ್ಯದಲ್ಲಿ ಪಿಂಕ್ ಪ್ರಾಮಿಸ್​ನೊಂದಿಗೆ ಕಣಕ್ಕಿಳಿದಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ಇದೀಗ ಒಟ್ಟು 78 ಕುಟುಂಬಗಳ ಪಾಲಿಗೆ ಬೆಳಕಾಗುವುದಾಗಿ ಘೋಷಿಸಿದೆ. ಅಂದರೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮೂಡಿಬರುವ ಪ್ರತಿ ಸಿಕ್ಸ್​ಗೆ 6 ಆರು ಮನೆಗಳಿಗೆ ಸೋಲಾರ್​ ಶಕ್ತಿಯೊಂದಿಗೆ ವಿದ್ಯುತ್ ಒದಗಿಸುವುದಾಗಿ ರಾಜಸ್ಥಾನ್ ರಾಯಲ್ಸ್ ಘೋಷಿಸಿತ್ತು.

2 / 5
ಅದರಂತೆ ಆರ್​ಸಿಬಿ-ಆರ್​ಆರ್ ನಡುವಣ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್​ಗಳು ಮೂಡಿಬಂದಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ 4 ಸಿಕ್ಸ್ ಬಾರಿಸಿದರೆ, ಫಾಫ್ ಡುಪ್ಲೆಸಿಸ್ 2 ಸಿಕ್ಸ್ ಸಿಡಿಸಿದ್ದಾರೆ. ಇನ್ನು ಸೌರವ್ ಚೌಹಾನ್ 1 ಸಿಕ್ಸ್ ಬಾರಿಸಿದ್ದಾರೆ.

3 / 5
ಹಾಗೆಯೇ ರಾಜಸ್ಥಾನ್ ರಾಯಲ್ಸ್ ಪರ ಫಾಫ್ ಡುಪ್ಲೆಸಿಸ್ 4 ಸಿಕ್ಸ್​ಗಳನ್ನು ಸಿಡಿಸಿದರೆ, ಸಂಜು ಸ್ಯಾಮ್ಸನ್ 2 ಸಿಕ್ಸ್ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಈ ಪಂದ್ಯದಲ್ಲಿ ಒಟ್ಟು 13 ಸಿಕ್ಸ್​ಗಳು ಮೂಡಿಬಂದಿವೆ.

4 / 5
1 ಸಿಕ್ಸ್​ಗೆ 6 ಸೋಲಾರ್​ನಂತೆ ಇದೀಗ 78 ಕುಟುಂಬಗಳಿಗೆ ಸೌರಶಕ್ತಿ ವ್ಯವಸ್ಥೆ ಮಾಡಿ ಕೊಡುವುದಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಘೋಷಿಸಿದೆ. ಈ ಮೂಲಕ ಗೆಲುವಿನ ಬೆನ್ನಲ್ಲೇ ಆರ್​ಆರ್​ ಫ್ರಾಂಚೈಸಿ ತನ್ನ ಪಿಂಕ್ ಪ್ರಾಮಿಸ್ ಅನ್ನು ಈಡೇರಿಸಲು ಮುಂದಾಗಿದೆ.

5 / 5
ಸದ್ಯ ಆಡಿರುವ 4 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಮುಂದಿನ 10 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಆರ್​ಆರ್ ತಂಡವು ಈ ಬಾರಿ ನಾಕೌಟ್ ಹಂತಕ್ಕೇರುವುದನ್ನು ಎದುರು ನೋಡಬಹುದು.