IPL 2024: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ RCB

| Updated By: ಝಾಹಿರ್ ಯೂಸುಫ್

Updated on: Mar 30, 2024 | 6:23 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​ 2024) 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆರ್​ಸಿಬಿ ನೀಡಿದ 183 ರನ್​ಗಳ ಗುರಿಯನ್ನು ಕೆಕೆಆರ್ ತಂಡ 16.5 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಗೆಲುವು ದಾಖಲಿಸಿದೆ. ಇದರೊಂದಿಗೆ IPL 2024 ರಲ್ಲಿ ಆಡಿದ ಎರಡೂ ಪಂದ್ಯಗಳಲ್ಲೂ KKR ಗೆಲುವು ದಾಖಲಿಸಿದಂತಾಗಿದೆ.

1 / 7
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 10ನೇ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ.

2 / 7
ಈ ಪಂದ್ಯದಲ್ಲಿ ಟಾಸ್ ಸೋತು, ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ, ಕ್ಯಾಮರೋನ್ ಗ್ರೀನ್, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಆರ್​ಸಿಬಿ ಬ್ಯಾಟರ್​ಗಳಿಂದ ಒಟ್ಟು 11 ಸಿಕ್ಸ್​ಗಳು ಮೂಡಿಬಂದಿದ್ದವು.

3 / 7
ಈ 11 ಸಿಕ್ಸರ್​ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ 1500 ಸಿಕ್ಸ್​ಗಳನ್ನು ಬಾರಿಸಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಪಾತ್ರರಾಗಿದೆ. ಐಪಿಎಲ್​ನಲ್ಲಿ ಇದುವರೆಗೆ 244	 ಪಂದ್ಯಗಳನ್ನಾಡಿರುವ ಆರ್​ಸಿಬಿ 1500+ ಸಿಕ್ಸ್ ಸಿಡಿಸಿ ಈ ಸಾಧನೆ ಮಾಡಿದೆ.

4 / 7
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಈ ವಿಶೇಷ ದಾಖಲೆ ಬರೆದಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 249 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ಇದುವರೆಗೆ 1575 ಸಿಕ್ಸ್​ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

5 / 7
ಇದೀಗ 1500 ಸಿಕ್ಸ್​ಗಳನ್ನು ಪೂರೈಸುವ ಮೂಲಕ ಆರ್​ಸಿಬಿ ತಂಡವು ಈ ಸಾಧನೆ ಮಾಡಿದ 2ನೇ ತಂಡ ಎನಿಸಿಕೊಂಡಿದೆ. ಇನ್ನು ಇದೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಕೂಡ ಆರ್​ಸಿಬಿ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

6 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 232 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಇದುವರೆಗೆ 241 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

7 / 7
ಇನ್ನು ವಿರಾಟ್ ಕೊಹ್ಲಿಯ ನಂತರದ ಸ್ಥಾನಗಳಲ್ಲಿ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್​ ಇದ್ದು, ಆರ್​ಸಿಬಿ ಪರ ಕೇವಲ 84 ಇನಿಂಗ್ಸ್​ ಆಡಿರುವ ಗೇಲ್ ಒಟ್ಟು 239 ಸಿಕ್ಸ್​ಗಳನ್ನು ಬಾರಿಸಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಎಬಿಡಿ 144 ಇನಿಂಗ್ಸ್​ಗಳಿಂದ 238 ಸಿಕ್ಸ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.