IPL 2024: ಐದನೇ ಬಾರಿ ಲೋಗೋ ಬದಲಿಸಿದ RCB
TV9 Web | Updated By: ಝಾಹಿರ್ ಯೂಸುಫ್
Updated on:
Mar 20, 2024 | 7:23 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ತನ್ನ ಹೆಸರು ಮತ್ತು ಲೋಗೋವನ್ನು ಬದಲಿಸಿದೆ. ಅದರಂತೆ IPL 2024 ರಲ್ಲಿ ಆರ್ಸಿಬಿ ಹೊಸ ವಿನ್ಯಾಸದ ಲೋಗೋದೊಂದಿಗೆ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ಆರ್ಸಿಬಿ ಐಪಿಎಲ್ನಲ್ಲಿ 4 ಬಾರಿ ಲೋಗೋವನ್ನು ಬದಲಿಸಿಕೊಂಡಿದೆ.
1 / 7
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಮುಂಬರುವ ಐಪಿಎಲ್ಗಾಗಿ ತನ್ನ ಲೋಗೋ ವಿನ್ಯಾಸವನ್ನು ಬದಲಿಸಿದೆ. ಈ ಬದಲಾವಣೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿಕೊಂಡಿದೆ.
2 / 7
ವಿಶೇಷ ಎಂದರೆ ಆರ್ಸಿಬಿ ಫ್ರಾಂಚೈಸಿಯು ತನ್ನ ಲೋಗೋವನ್ನು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ನಾಲ್ಕು ಬಾರಿ ಹೊಸ ಲೋಗೋದೊಂದಿಗೆ ಕಣಕ್ಕಿಳಿದಿದೆ. ಇದೀಗ ಐದನೇ ಬಾರಿಗೆ ಲೋಗೋ ಬದಲಿಸಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ. ಹಾಗಿದ್ರೆ ಆರ್ಸಿಬಿ ತಂಡದ ಈ ಹಿಂದಿನ ಲೋಗೋ ವಿನ್ಯಾಸಗಳು ಹೇಗಿದ್ದವು ಎಂದು ನೋಡೋಣ....
3 / 7
IPL 2008: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಈ ಲೋಗೋ ವಿನ್ಯಾಸದೊಂದಿಗೆ ಕಣಕ್ಕಿಳಿದಿತ್ತು. ಅಂದು ಆರ್ಸಿಬಿ ತನ್ನ ಲೋಗೋ ವಿನ್ಯಾಸದಲ್ಲಿ RC (ರಾಯಲ್ ಚಾಲೆಂಜರ್ಸ್) ಯನ್ನು ಎದ್ದು ಕಾಣುವಂತೆ ಚಿತ್ರಿಸಿದ್ದರು. ಅಂದರೆ ಇಲ್ಲಿ ಸಿಂಹದ ಗುರುತಿಕ್ಕಿಂತ ರಾಯಲ್ ಚಾಲೆಂಜರ್ಸ್ ಬರಹಕ್ಕೆ ಪ್ರಾಶಸ್ತ್ಯ ನೀಡಲಾಗಿತ್ತು.
4 / 7
IPL 2009-2015: ಐಪಿಎಲ್ 2009 ರಲ್ಲಿ ಆರ್ಸಿಬಿ ತಂಡವು ಲೋಗೋ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಿತು. ಮೊದಲ ಸೀಸನ್ನ ಲೋಗೋವನ್ನು ಇಲ್ಲಿ ಮುಂದುವರೆಸಲಾಗಿದ್ದರೂ ಬಣ್ಣಗಳಲ್ಲಿ ಮಾರ್ಪಾಡು ಮಾಡಲಾಗಿತ್ತು. ಅಲ್ಲದೆ ಈ ಲೋಗೋದೊಂದಿಗೆ ಆರ್ಸಿಬಿ 7 ಸೀಸನ್ಗಳಲ್ಲಿ ಕಣಕ್ಕಿಳಿದಿರುವುದು ವಿಶೇಷ.
5 / 7
IPL 2016-2019: ಆರ್ಸಿಬಿ ತಂಡದ ಲೋಗೋದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದ್ದು 2016 ರಲ್ಲಿ. ಅಂದಿನ ಲೋಗೋದಲ್ಲಿ RC ಬದಲಿಗೆ ಸಿಂಹದ ಚಿತ್ರವನ್ನು ಹೈಲೆಟ್ ಮಾಡಲಾಗಿತ್ತು. ಈ ಲೋಗೋವನ್ನು 2019 ರವರೆಗೆ ಬಳಸಿಕೊಂಡಿತ್ತು.
6 / 7
IPL 2020-2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಲೋಗೋವನ್ನು ಸಂಪೂರ್ಣವಾಗಿ ಬದಲಿಸಿದ್ದು 2020 ರಲ್ಲಿ. ಈ ಬಾರಿ ಲೋಗೋದಿಂದ RC ಬರಹವನ್ನು ತೆಗೆದುಹಾಕಿದ್ದಲ್ಲದೆ, ಸಿಂಹದ ಗುರುತನ್ನು ಹೈಲೆಟ್ ಮಾಡಿತು. ಈ ಮೂಲಕ ಈ ಹಿಂದಿನ ಮೂರು ಲೋಗೋಗಿಂತ ವಿಭಿನ್ನ ವಿನ್ಯಾಸವನ್ನು ರೂಪಿಸಿತ್ತು. ಅಲ್ಲದೆ ಕಳೆದ ಸೀಸನ್ವರೆಗೆ ಆರ್ಸಿಬಿ ಇದೇ ಲೋಗೋದಲ್ಲೇ ಕಣಕ್ಕಿಳಿದಿದೆ.
7 / 7
IPL 2024: ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನೊಂದಿಗೆ ಕಣಕ್ಕಿಳಿಯಲಿದೆ. ಇಲ್ಲಿ ಹೆಸರಿನೊಂದಿಗೆ ಲೋಗೋ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಯಾಗಿದೆ. ಅಂದರೆ ಇದೇ ಮೊದಲ ಬಾರಿಗೆ ಆರ್ಸಿಬಿ ತನ್ನ ಲೋಗೋದಲ್ಲಿ RCB ಎಂದು ಬರೆದುಕೊಂಡಿದೆ. ಹಾಗೆಯೇ ಈ ಹಿಂದಿನ ಟ್ರೇಡ್ ಮಾರ್ಕ್ ವಿನ್ಯಾಸ ಸಿಂಹ ಘರ್ಜನೆಯನ್ನು ಇಲ್ಲೂ ಕೂಡ ಮುಂದುವರೆಸಲಾಗಿದೆ.