
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಒಟ್ಟು 11 ಪಂದ್ಯಗಳನ್ನಾಡಿದೆ. ಈ ಹನ್ನೊಂದು ಮ್ಯಾಚ್ಗಳಲ್ಲಿ ಆರ್ಸಿಬಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 7 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಒಟ್ಟು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಇದಾಗ್ಯೂ ಆರ್ಸಿಬಿ ತಂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲ ಎಂಬುದು ವಿಶೇಷ. ಅಂದರೆ 52 ಪಂದ್ಯಗಳ ಮುಕ್ತಾಯವಾದರೂ ಯಾವುದೇ ತಂಡ ಪ್ಲೇಆಫ್ ಅನ್ನು ಖಚಿತಪಡಿಸಿಕೊಂಡಿಲ್ಲ. ಒಂದು ವೇಳೆ ಅಂಕ ಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು 16 ಅಂಕಗಳನ್ನು ಪಡೆದುಕೊಂಡರೆ ಮಾತ್ರ ಆರ್ಸಿಬಿ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ.

ಅದುವರೆಗೆ ಆರ್ಸಿಬಿ ತಂಡ ಪ್ಲೇಆಫ್ಗೆ ಅರ್ಹತೆ ಪಡೆಯಲು ಬೇಕಿರುವ ರಹದಾರಿಗಳನ್ನು ಕಂಡುಕೊಳ್ಳಲಿದೆ. ಹೀಗಾಗಿ ಆರ್ಸಿಬಿ ಪಾಲಿಗೆ ಮುಂದಿನ ಮೂರು ಪಂದ್ಯಗಳು ತುಂಬಾ ಮಹತ್ವದ್ದು. ಏಕೆಂದರೆ ಈ ಮೂರು ಸವಾಲುಗಳನ್ನು ಆರ್ಸಿಬಿ ಮೆಟ್ಟಿ ನಿಂತರೆ ಒಟ್ಟು 14 ಅಂಕಗಳನ್ನು ಪಡೆಯಲಿದೆ.

ಒಂದು ವೇಳೆ ಲೀಗ್ ಹಂತದ ಮುಕ್ತಾಯದ ವೇಳೆಗೆ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನ ಅಲಂಕರಿಸುವ ತಂಡ 14 ಅಂಕಗಳನ್ನು ಮಾತ್ರ ಹೊಂದಿದ್ದರೆ, ಇತ್ತ ನೆಟ್ ರನ್ ರೇಟ್ ನೆರವಿನೊಂದಿಗೆ ಪ್ಲೇಆಫ್ಗೇರುವ ಅವಕಾಶ ಆರ್ಸಿಬಿ ತಂಡಕ್ಕೆ ಸಿಗಲಿದೆ. ಹೀಗಾಗಿ ಆರ್ಸಿಬಿ ಮುಂದಿನ ಮೂರು ಪಂದ್ಯಗಳಲ್ಲಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ಭರ್ಜರಿ ಜಯ ಸಾಧಿಸುವ ಇರಾದೆಯಲ್ಲಿದೆ. ಆರ್ಸಿಬಿ ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ...

PBKS vs RCB: ಮೇ 9 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಧರ್ಮಶಾಲಾದಲ್ಲಿ ನಡೆಯಲಿದೆ.

RCB vs DC: ಮೇ 12 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ.

RCB vs CSK: ಮೇ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದೊಂದಿಗೆ ಆರ್ಸಿಬಿ ತಂಡದ ಲೀಗ್ ಮ್ಯಾಚ್ಗಳು ಪೂರ್ಣಗೊಳ್ಳಲಿದೆ.