AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಸತತ 2 ಸೊನ್ನೆ; ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಬಳಿಕ ಬ್ಯಾಟಿಂಗ್ ಮರೆತ ಶಿವಂ ದುಬೆ..!

Shivam Dube: ಶಿವಂ ದುಬೆ ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಪೆವಿಲಿಯನ್‌ಗೆ ಮರಳಿದ್ದರು. ಇದೀಗ ಪಂಜಾಬ್ ವಿರುದ್ಧದ ಸತತ ಎರಡನೇ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಎರಡೂ ಪಂದ್ಯಗಳಲ್ಲೂ ದುಬೆ ಸ್ಪಿನ್ನರ್​ಗೆ ಬಲಿಯಾಗಿರುವುದು ವಿಷಾದನೀಯ.

ಪೃಥ್ವಿಶಂಕರ
|

Updated on: May 05, 2024 | 7:40 PM

Share
ಇಂದು ನಡೆದ ಐಪಿಎಲ್ 53ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 28 ರನ್​ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್​ನಲ್ಲಿ 6ನೇ ಗೆಲುವು ದಾಖಲಿಸಿದೆ. ಚೆನ್ನೈ ನೀಡಿದ 168 ರನ್​ ಗುರಿ ಬೆನ್ನಟ್ಟಿದ ಪಂಜಾಬ್ ತಂಡ139 ರನ್ ಗಳಿಸಲಷ್ಟೇ ಶಕ್ತವಾಯಿತು.

1 / 6
ಈ ಪಂದ್ಯದ ಗೆಲುವು ಚೆನ್ನೈ ತಂಡಕ್ಕೆ ಪ್ಲೇಆಫ್‌ ವಿಚಾರದಲ್ಲಿ ಸಾಕಷ್ಟು ಲಾಭ ತಂದಿದೆ. ಆದರೆ ತಂಡದ ಸ್ಟಾರ್ ಬ್ಯಾಟರ್ ಶಿವಂ ದುಬೆ ಅವರ ಕಳಪೆ ಆಟ ತಂಡಕ್ಕೆ ತಲೆನೋವು ತಂದೊಡ್ಡಿದೆ. ದುಬೆ ಅವರ ಶೂನ್ಯ ಸಾಧನೆ ಸಿಎಸ್​ಕೆ ತಂಡಕ್ಕೆ ಮಾತ್ರವಲ್ಲದೆ ಟೀಂ ಇಂಡಿಯಾಕ್ಕೂ ಆಘಾತ ನೀಡಿದೆ.

2 / 6
ಏಕೆಂದರೆ ಮುಂದೆ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಶಿವಂ ದುಬೆ ಅವರನ್ನು ಟೀಂ ಇಂಡಿಯಾದಲ್ಲಿ ಆಯ್ಕೆ ಮಾಡಲಾಗಿದೆ. ಅಲ್ಲದೆ ದುಬೆಯನ್ನು ತಂಡದ ಮಧ್ಯಮ ಕ್ರಮಾಂಕದ ಜೀವಾಳ ಎಂದು ಭಾವಿಸಲಾಗಿದೆ. ಆದರೆ ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದ ಬಳಿಕ ದುಬೆ ಬ್ಯಾಟ್​ ಸೈಲೆಂಟ್ ಆಗಿದೆ.

3 / 6
ದುಬೆ ಆಡಿದ ಸತತ ಎರಡೂ ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಅಂದರೆ ಎರಡೂ ಪಂದ್ಯಗಳಲ್ಲೂ ದುಬೆ ಬ್ಯಾಟ್​​ನಿಂದ ಒಂದೇ ಒಂದು ರನ್ ಬಂದಿಲ್ಲ. ಇದು ಆಯ್ಕೆ ಮಂಡಳಿಗೆ ಹೊಸ ತಲೆನೋವು ತಂದಿದೆ.

4 / 6
ಶಿವಂ ದುಬೆ ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಪೆವಿಲಿಯನ್‌ಗೆ ಮರಳಿದ್ದರು. ಇದೀಗ ಪಂಜಾಬ್ ವಿರುದ್ಧದ ಸತತ ಎರಡನೇ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಎರಡೂ ಪಂದ್ಯಗಳಲ್ಲೂ ದುಬೆ ಸ್ಪಿನ್ನರ್​ಗೆ ಬಲಿಯಾಗಿರುವುದು ವಿಷಾದನೀಯ. ಏಕೆಂದರೆ ದುಬೆ ಸ್ಪಿನ್ನರ್​ಗಳ ವಿರುದ್ಧ ಅದ್ಭುತವಾಗಿ ಬ್ಯಾಟ್ ಮಾಡುತ್ತಾರೆ.

5 / 6
ಈ ಸೀಸನ್​ನಲ್ಲಿ ಶಿವಂ ದುಬೆ ಇಲ್ಲಿಯವರೆಗೆ ಆಡಿದ 11 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 350 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ದುಬೆ ಐಪಿಎಲ್‌ನಲ್ಲಿ ಇದುವರೆಗೆ 61 ಪಂದ್ಯಗಳನ್ನು ಆಡಿದ್ದು, 1456 ರನ್ ಗಳಿಸಿದ್ದಾರೆ. ಅಲ್ಲದೆ ಲೀಗ್‌ನಲ್ಲಿ 9 ಅರ್ಧಶತಕಗಳನ್ನು ಸಿಡಿಸಿದ್ದಾರೆ.

6 / 6
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು

ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ

ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!

ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್

ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ

ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ

ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ

‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?

11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು