IPL 2024: ರನ್ ಹೊಡೆಸಿಕೊಳ್ಳುವುದರಲ್ಲೂ ವಿಶ್ವ ದಾಖಲೆ ಬರೆದ RCB

| Updated By: ಝಾಹಿರ್ ಯೂಸುಫ್

Updated on: Apr 22, 2024 | 1:52 PM

IPL 2024: ಐಪಿಎಲ್ 2024ರ 36ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ ಜಯ ಸಾಧಿಸಿದೆ. ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 222 ರನ್​ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 221 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೆಕೆಆರ್ 1 ರನ್​ನಿಂದ ರೋಚಕ ಗೆಲುವು ದಾಖಲಿಸಿತು.

1 / 5
ಐಪಿಎಲ್ (IPL 2024) ಸೀಸನ್ 17 ರಲ್ಲಿ ಆರ್​ಸಿಬಿ ತಂಡದ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಇನ್ನುಳಿದ 7 ಮ್ಯಾಚ್​ಗಳಲ್ಲಿ ಸೋಲುನುಭವಿಸಿ ಇದೀಗ ಪಾಯಿಂಟ್ಸ್​ ಟೇಬಲ್​ನಲ್ಲಿ 10ನೇ ಸ್ಥಾನದಲ್ಲಿದೆ.

2 / 5
ಅಷ್ಟೇ ಅಲ್ಲದೆ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 222 ರನ್​ ಹೊಡೆಸಿಕೊಳ್ಳುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಿ20 ಕ್ರಿಕೆಟ್​ನಲ್ಲಿ ಅನಗತ್ಯ ದಾಖಲೆಯೊಂದನ್ನು ಬರೆದಿದೆ. ಅದು ಕೂಡ ವಿದೇಶಿ ತಂಡವೊಂದರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

3 / 5
ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ 2 ಬಾರಿ 200ಕ್ಕೂ ಅಧಿಕ ರನ್ ನೀಡಿದೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 287 ರನ್ ಹೊಡೆಸಿಕೊಂಡಿದ್ದ ಆರ್​ಸಿಬಿ ಬೌಲರ್​ಗಳು, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 222 ರನ್ ನೀಡಿದೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ 200+ ರನ್ ನೀಡಿದ ತಂಡವೆಂಬ ಅಪಕೀರ್ತಿಗೆ ಒಳಗಾಗಿದೆ.

4 / 5
ಇದಕ್ಕೂ ಮುನ್ನ ಈ ಕಳಪೆ ದಾಖಲೆ ಇಂಗ್ಲೆಂಡ್​ನ ಮಿಡ್ಲ್​ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್​ ತಂಡದ ಹೆಸರಿನಲ್ಲಿತ್ತು. ಮಿಡ್ಲ್​ಸೆಕ್ಸ್ ತಂಡವು ಟಿ20 ಕ್ರಿಕೆಟ್​ನಲ್ಲಿ ಒಟ್ಟು 28 ಬಾರಿ 200+ ಸ್ಕೋರ್​ ನೀಡಿ ಈ ಅನಗತ್ಯ ದಾಖಲೆಯನ್ನು ಬರೆದಿತ್ತು.

5 / 5
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ದಾಖಲೆಯನ್ನು ಮುರಿದಿದೆ. ಈ ಬಾರಿಯ ಐಪಿಎಲ್​ನಲ್ಲಿ 2 ಬಾರಿ 200+ ರನ್ ನೀಡುವ ಮೂಲಕ ಆರ್​ಸಿಬಿ ಒಟ್ಟು 29 ಬಾರಿ ಇನ್ನೂರಕ್ಕೂ ಅಧಿಕ ರನ್ ನೀಡಿ ತಂಡ ಎನಿಸಿಕೊಂಡಿದೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 200+ ರನ್ ಹೊಡೆಸಿಕೊಂಡ ಕಳಪೆ ದಾಖಲೆಯನ್ನು ಆರ್​ಸಿಬಿ ತನ್ನದಾಗಿಸಿಕೊಂಡಿದೆ.