Rohit Sharma: ಇದುವೇ ಲಾಸ್ಟ್… ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಗುಡ್ ಬೈ..?
IPL 2024: ಈ ಬಾರಿಯ ಐಪಿಎಲ್ಗೂ (IPL 2024) ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದರು. ಅಲ್ಲದೆ ತಂಡದ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದ್ದರು. ಅದರಂತೆ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡವು 13 ಪಂದ್ಯಗಳಲ್ಲಿ 9 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ.
1 / 6
IPL 2024: ರೋಹಿತ್ ಶರ್ಮಾ (Rohit Sharma) ಮುಂಬೈ ಇಂಡಿಯನ್ಸ್ ತಂಡಕ್ಕೆ ಗುಡ್ ಬೈ ಹೇಳಲಿದ್ದಾರಾ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅದು ಕೂಡ ರೋಹಿತ್ ಶರ್ಮಾ ಅವರ ಬಾಯಿಂದಲೇ ಎಂಬುದು ವಿಶೇಷ. ಅಂದರೆ ಹಿಟ್ಮ್ಯಾನ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಸೂಚನೆ ನೀಡಿದ್ದಾರೆ.
2 / 6
ಶನಿವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ತನ್ನ ಮಾಜಿ ಸಹಪಾಠಿ, ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಇಬ್ಬರು ಮುಂಬೈ ಇಂಡಿಯನ್ಸ್ ತಂಡದಲ್ಲಿನ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ.
3 / 6
ಅಭಿಷೇಕ್ ಜೊತೆ ಮಾತನಾಡುತ್ತಾ, ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಏನೇ ಆದರೂ ಅದು ನನ್ನ ಮನೆ. ಆ ಗುಡಿಯನ್ನು ಕಟ್ಟಿದ್ದು ನಾನು. ಈಗ ನಂಗೇನಾಗಬೇಕು? ನನ್ನದು ಇದುವೇ ಲಾಸ್ಟ್ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
4 / 6
ಅಂದರೆ ಇಲ್ಲಿ ಅಭಿಷೇಕ್ ನಾಯರ್ ಹಾಗೂ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕುರಿತಾಗಿ ಚರ್ಚಿಸಿದ್ದು, ಈ ವೇಳೆ ನಾನು ಕಟ್ಟಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಈಗ ಎಲ್ಲವೂ ಬದಲಾಗುತ್ತಿದೆ. ಈಗ ನಾನೇನು ಮಾಡೋಕಾಗಲ್ಲ. ಮುಂಬೈ ಇಂಡಿಯನ್ಸ್ ಪರ ಇದುವೇ ನನ್ನ ಕೊನೆಯ ಸೀಸನ್ ಎಂದು ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
5 / 6
ಅಚ್ಚರಿ ಎಂದರೆ ರೋಹಿತ್ ಶರ್ಮಾ ಹಾಗೂ ಅಭಿಷೇಕ್ ನಾಯರ್ ನಡುವಣ ಈ ಮಾತುಕತೆಯ ವಿಡಿಯೋವನ್ನು ಕೆಕೆಆರ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದಾರೆ.
6 / 6
ಅಂದರೆ ಈ ವಿಡಿಯೋದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕುರಿತಾಗಿಯೇ ಮಾತನಾಡಿದ್ದಾರೆ ಎಂಬುದು ಸ್ಪಷ್ಟ. ಹೀಗಾಗಿಯೇ ಅದನ್ನು ಡಿಲೀಟ್ ಮಾಡಲಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಹೊರಬರುವುದಂತು ಖಚಿತವಾಗಿದೆ. ಹೀಗಾಗಿ ಐಪಿಎಲ್ 2025 ರಲ್ಲಿ ಹಿಟ್ಮ್ಯಾನ್ ಹೊಸ ತಂಡದ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.