IPL 2024 CSK vs RR: RCB ಪಾಲಿಗೆ ಇಂದು ಯಾರು ಗೆಲ್ಲಬೇಕು?

IPL 2024: ಐಪಿಎಲ್​ನ 61ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದರೆ, ಐಪಿಎಲ್​ನ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗಲಿದೆ. ಆದರೆ ಅದಕ್ಕೂ ಮುನ್ನ ಆರ್​ಸಿಬಿ ಪಾಲಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಗೆಲ್ಲಬೇಕಿದೆ.

ಝಾಹಿರ್ ಯೂಸುಫ್
|

Updated on:May 12, 2024 | 11:31 AM

ಐಪಿಎಲ್ (IPL 2024) ಸೀಸನ್ 17ರ 61ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳಿಗೂ ತುಂಬಾ ಮಹತ್ವದ್ದು. ಅದರಲ್ಲೂ ಆರ್​ಸಿಬಿ ಪಾಲಿಗೂ ನಿರ್ಣಾಯಕ.

1 / 5
ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ ಅಧಿಕೃತವಾಗಿ ಪ್ಲೇಆಫ್​​ಗೆ ಎಂಟ್ರಿ ಕೊಡಲಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದರೆ ಪ್ಲೇಆಫ್ ಹಂತಕ್ಕೇರುವ ಹಾದಿ ಸುಗಮವಾಗಲಿದೆ. ಮತ್ತೊಂದೆಡೆ ಇದೇ ಪಂದ್ಯದ ಫಲಿತಾಂಶ ಆರ್​ಸಿಬಿ ತಂಡದ ಪ್ಲೇಆಫ್ ಕನಸನ್ನು ಕೂಡ ನಿರ್ಧರಿಸಲಿದೆ.

2 / 5
ಅಂದರೆ ಈ ಮ್ಯಾಚ್​ನಲ್ಲಿ ಸಿಎಸ್​ಕೆ ತಂಡ ಗೆದ್ದರೆ ಒಟ್ಟು 14 ಅಂಕಗಳನ್ನು ಕಲೆಹಾಕಲಿದೆ. ಅದೇ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ ಸಿಎಸ್​ಕೆ ತಂಡದ ಪಾಯಿಂಟ್ಸ್ 12ರಲ್ಲೇ ಉಳಿಯಲಿದೆ. ಇತ್ತ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಒಟ್ಟು 12 ಪಾಯಿಂಟ್ಸ್ ಸಂಪಾದಿಸಲಿದೆ.

3 / 5
ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್​ಸಿಬಿ ತಂಡದ ಪಾಯಿಂಟ್ಸ್ ಸಮಗೊಳ್ಳಲಿದೆ. ಹೀಗೆ ಪಾಯಿಂಟ್ಸ್ ಸಮಗೊಂಡರೆ ಆರ್​ಸಿಬಿ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಹಂತಕ್ಕೇರುವ ಅವಕಾಶ ಹೆಚ್ಚಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲುವುದನ್ನು ಆರ್​ಸಿಬಿ ಎದುರು ನೋಡಲಿದೆ.

4 / 5
ಒಂದು ವೇಳೆ ಇಂದು ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ, ಪ್ಲೇಆಫ್ ಹಂತಕ್ಕೇರಲು ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ನಾಕೌಟ್ ಪಂದ್ಯ ನಡೆಯಬಹುದು. ಅಂದರೆ ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿ 12 ಅಂಕಗಳನ್ನು ಪಡೆದುಕೊಂಡರೆ, ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಎದುರಿಸಲಿದೆ. ಇದರಿಂದ ಸಿಎಸ್​ಕೆ ಮತ್ತು ಆರ್​ಸಿಬಿ ನಡುವೆ ಪ್ಲೇಆಫ್ ಎಂಟ್ರಿ ಫೈಟ್ ಕಂಡು ಬರಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ. ಈ ಮೂಲಕ ಸಿಎಸ್​ಕೆ ವಿರುದ್ಧ ಗೆದ್ದು ಆರ್​ಸಿಬಿ ಪ್ಲೇಆಫ್ ಪ್ರವೇಶಿಸಬಹುದು. ಈ ಎಲ್ಲಾ ಕಾರಣಗಳಿಂದಾಗಿ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಪಾಲಿಗೆ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲಲೇಬೇಕು.

5 / 5

Published On - 10:28 am, Sun, 12 May 24

Follow us
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ