AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024 RCB vs DC: ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಇಲ್ಲಿದೆ ನಿಯಮಗಳು

IPL 2024 RCB vs DC: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ (ಮೇ 12) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಇಂದು ಬೆಂಗಳೂರಿನಾದ್ಯಂತ ಶೇ.55 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ. ಹೀಗಾಗಿ ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆಯಿದೆ.

ಝಾಹಿರ್ ಯೂಸುಫ್
|

Updated on:May 12, 2024 | 8:39 AM

Share
IPL 2024 RCB vs DC: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗುತ್ತಿದ್ದು, ಹೀಗಾಗಿ ಭಾನುವಾರ ನಡೆಯಲಿರುವ ಪಂದ್ಯಕ್ಕೂ ವರುಣ ಅಡ್ಡಿಪಡಿಸಲಿದ್ದಾನಾ ಎಂಬ ಆತಂಕ ಎದುರಾಗಿದೆ.

1 / 11
ಏಕೆಂದರೆ ಈ ಪಂದ್ಯವು ಆರ್​ಸಿಬಿ ಪಾಲಿಗೆ ನಿರ್ಣಾಯಕ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಗೆದ್ದರೆ ಮಾತ್ರ ಆರ್​ಸಿಬಿ ತಂಡಕ್ಕೆ ಪ್ಲೇಆಫ್​ ಪ್ರವೇಶಿಸಲು ಅವಕಾಶ ಇರಲಿದೆ. ಒಂದು ವೇಳೆ ಪಂದ್ಯ ರದ್ದಾರೆ ಆರ್​ಸಿಬಿ ತಂಡ ಪ್ಲೇಆಫ್​ ರೇಸ್​ನಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.

2 / 11
ಒಂದು ವೇಳೆ ಮಳೆ ನಿಂತರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುವುದು ಖಚಿತ. ಹಾಗಿದ್ರೆ ಮಳೆ ನಿಂತ ಬಳಿಕ ಪಂದ್ಯ ಹೇಗೆ ನಡೆಯಲಿದೆ ಎಂದು ತಿಳಿಯೋಣ...

3 / 11
ಬೆಂಗಳೂರಿನಲ್ಲಿ ಇಂದು ನಡೆಯಬೇಕಿರುವ ಪಂದ್ಯ ಶುರುವಾಗಬೇಕಿರುವ ಸಮಯ 7:30 PM. ಇದಕ್ಕನುಗುಣವಾಗಿ ಪಂದ್ಯದ ಹೆಚ್ಚುವರಿ ಕಟ್ ಆಫ್ ಸಮಯ 11:50 PM. ಅದುವರೆಗೆ ಪಂದ್ಯ ಆಯೋಜಿಸಲು ಸಾಧ್ಯನಾ ಎಂಬುದನ್ನು ಎದುರು ನೋಡಲಿದ್ದಾರೆ.

4 / 11
ಇದರ ನಡುವೆ ಪಂದ್ಯ ನಡೆಸಲು ಅವಕಾಶವಿದ್ದರೆ ಹೆಚ್ಚುವರಿ ಸಮಯವನ್ನು ಬಳಸಲಿದ್ದಾರೆ. ಅಂದರೆ ಮಳೆಯ ಕಾರಣ ಪಂದ್ಯದ ಆರಂಭವು ವಿಳಂಬವಾದರೆ ಅಥವಾ ಅಡಚಣೆಯ ಸಂದರ್ಭದಲ್ಲಿ, ಅರವತ್ತು ನಿಮಿಷಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಪೂರ್ಣ 20 ಓವರ್​ಗಳನ್ನು ಆಡಿಸಲು ಅವಕಾಶ ಇದೆಯಾ ಎಂದು ನೋಡಲಾಗುತ್ತದೆ.

5 / 11
ಆದರೆ ನಿಗದಿತ ಸಮಯದೊಳಗೆ 20 ಓವರ್​ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂಬುದು ಕಂಡು ಬಂದರೆ ಓವರ್​ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ. ಇಲ್ಲಿ ಟೈಮ್ ಔಟ್ ಸಮಯ ಹಾಗೂ ಇನ್ನಿಂಗ್ಸ್ ಬ್ರೇಕ್​ಗಳನ್ನು ಸಹ ತೆಗೆದು ಹಾಕಲಾಗುತ್ತದೆ. ಆ ಮೂಲಕ ಓವರ್​ ಕಡಿತದೊಂದಿಗೆ ಪಂದ್ಯ ಆಯೋಜಿಸಲಾಗುತ್ತದೆ.

6 / 11
ಇನ್ನು ಪಂದ್ಯ ಶುರುವಾದ ಬಳಿಕ ಮಳೆ ಬಂದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

7 / 11
ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್​ಗಳ ಪಂದ್ಯಗಳನ್ನು ಆಡಲೇಬೇಕು. ಇದಕ್ಕಿಂತ ಕಡಿಮೆ ಓವರ್​ಗಳ ಪಂದ್ಯಗಳನ್ನು ಆಯೋಜಿಸಲಾಗುವುದಿಲ್ಲ. ಅದರಂತೆ ಎರಡೂ ತಂಡಗಳು ಕನಿಷ್ಠ 5 ಓವರ್​ಗಳನ್ನು ಬೌಲಿಂಗ್ ಮಾಡಿದ್ರೆ ಮಾತ್ರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

8 / 11
ಒಂದು ವೇಳೆ ಮೊದಲ ಇನಿಂಗ್ಸ್ ಆಡಿದ ತಂಡ 10 ಓವರ್ ಆಡಿದ್ರೆ, 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್​ಗಳನ್ನು ಆಡಿರಲೇಬೇಕು. ಅಂದರೆ ಮಾತ್ರ ಇಲ್ಲಿ ಡಕ್​ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಗುತ್ತದೆ. ಹೀಗಾಗಿಯೇ ಆರ್​ಸಿಬಿ ತಂಡದ ಗೆಲುವು ನಿರ್ಧರಿಸಲು ಕನಿಷ್ಠ 5 ಓವರ್​ಗಳ ಪಂದ್ಯವಾದರೂ ನಡೆಯಲೇಬೇಕು.

9 / 11
ಅಂದಹಾಗೆ ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್​ ನಡುವಣ ಪಂದ್ಯದ 5 ಓವರ್​ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಮ್ಯಾಚ್​ ಅನ್ನು ರದ್ದುಗೊಳಿಸುವ ಬಗ್ಗೆ ಮ್ಯಾಚ್ ರೆಫರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

10 / 11
ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಹಾಗಾಗಿ ಇಂದು ಮಳೆ ಬಂದರೂ ಓವರ್ ಕಡಿತದೊಂದಿಗೆ ಪಂದ್ಯ ನಡೆಯುವ ಸಾಧ್ಯತೆಯಿದೆ.

11 / 11

Published On - 8:29 am, Sun, 12 May 24

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ

Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ

ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?

ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು