IPL 2024: ಐಪಿಎಲ್​ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್

| Updated By: ಝಾಹಿರ್ ಯೂಸುಫ್

Updated on: Mar 25, 2024 | 8:52 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ (IPL) ಸೀಸನ್ 17 ರ ತನ್ನ ಮೊದಲ ಪಂಧ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅಬ್ಬರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಸ್ಯಾಮ್ಸನ್ ಐಪಿಎಲ್​ನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

1 / 6
IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಶುಭಾರಂಭ ಮಾಡಿದೆ. ಈ ಗೆಲುವಿನ ರೂವಾರಿ ರಾಜಸ್ಥಾನ್ ತಂಡ ನಾಯಕ ಸಂಜು ಸ್ಯಾಮ್ಸನ್ (Sanju Samson).

2 / 6
ಜೋಸ್ ಬಟ್ಲರ್ (11) ಔಟಾದ ಬಳಿಕ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಆರ್​ಆರ್​ ತಂಡದ ನಾಯಕ ಲಕ್ನೋ ಬೌಲರ್​ಗಳ ಬೆಂಡೆತ್ತಿದರು. ಈ ಮೂಲಕ 52 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 82 ರನ್ ಬಾರಿಸಿದರು.

3 / 6
ಈ ಅರ್ಧಶತಕದೊಂದಿಗೆ ಸಂಜು ಸ್ಯಾಮ್ಸನ್ ಐಪಿಎಲ್​ ಇತಿಹಾಸದಲ್ಲೇ ಅಪರೂಪದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಐಪಿಎಲ್​ನ ತನ್ನ ಮೊದಲ ಪಂದ್ಯದಲ್ಲಿ ಸತತ ಐದು ಬಾರಿ 50+ ಸ್ಕೋರ್​ಗಳಿಸಿದ ಏಕೈಕ ನಾಯಕನಾಗಿ ಸ್ಯಾಮ್ಸನ್ ಗುರುತಿಸಿಕೊಂಡಿದ್ದಾರೆ.

4 / 6
ಇದಕ್ಕೂ ಮುನ್ನ 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ 74 ರನ್ ಬಾರಿಸಿದ್ದರು. ಹಾಗೆಯೇ 2021ರ ಮೊದಲ ಪಂದ್ಯದಲ್ಲಿ 119 ರನ್ ಸಿಡಿಸಿ ಅಬ್ಬರಿಸಿದ್ದರು. ಇನ್ನು 2022 ರ ಪ್ರಥಮ ಮ್ಯಾಚ್​ನಲ್ಲಿ 55 ರನ್ ಸಿಡಿಸಿದ್ದರು. ಹಾಗೆಯೇ 2023 ರ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಬ್ಯಾಟ್​ನಿಂದ 55 ರನ್​ಗಳ ಅರ್ಧಶತಕ ಮೂಡಿಬಂದಿತ್ತು.

5 / 6
ಇದೀಗ ಐಪಿಎಲ್ 2024 ರ ರಾಜಸ್ಥಾನ್​ ರಾಯಲ್ಸ್ ತಂಡದ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಅಜೇಯ 82 ರನ್ ಬಾರಿಸಿ ಮಿಂಚಿದ್ದಾರೆ. ಈ ಮೂಲಕ 5 ಸೀಸನ್​ಗಳಲ್ಲಿ ಮೊದಲ ಪಂದ್ಯದಲ್ಲಿ 50+ ಸ್ಕೋರ್​ಗಳಿಸಿದ ಐಪಿಎಲ್​ನ ಏಕೈಕ ನಾಯಕ ಎಂಬ ದಾಖಲೆಯನ್ನು ಸಂಜು ಸ್ಯಾಮ್ಸನ್ ನಿರ್ಮಿಸಿದ್ದಾರೆ.

6 / 6
ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ 194 ರನ್​ಗಳ ಗುರಿಯನ್ನು ಬೆನ್ನತ್ತಿದ ಕೆಎಲ್ ರಾಹುಲ್ ಮುಂದಾಳತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಂಜು ಸ್ಯಾಮ್ಸನ್ ಪಡೆ ಮೊದಲ ಪಂದ್ಯದಲ್ಲಿ 20 ರನ್​ಗಳ ಭರ್ಜರಿ ಜಯ ಸಾಧಿಸಿದೆ.