IPL 2024: RCB ತಂಡದ ಸರ್ವಶ್ರೇಷ್ಠ ದಾಖಲೆಯನ್ನು 3 ಬಾರಿ ಮುರಿದ SRH

| Updated By: ಝಾಹಿರ್ ಯೂಸುಫ್

Updated on: Apr 21, 2024 | 8:05 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಮೂರು ಬಾರಿ 250+ ಸ್ಕೋರ್​ ಕಲೆಹಾಕಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಒಂದೇ ಸೀಸನ್​ನಲ್ಲಿ 3 ಬಾರಿ ಮುರಿದಿರುವುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

1 / 6
2023 ತನಕ ಒಂದು ಲೆಕ್ಕ... ಇನ್ಮುಂದೆ ಒಂದು ಲೆಕ್ಕ... ಪ್ರಸ್ತುತ ಸನ್​ರೈಸರ್ಸ್ ಹೈದರಾಬಾದ್ (SRH) ತಂಡದ ಪ್ರದರ್ಶನ ನೋಡಿದ್ರೆ ಈ ಡೈಲಾಗ್​ ನೆನಪಿಗೆ ಬರುತ್ತೆ. ಏಕೆಂದರೆ ಕಳೆದ ಒಂದು ದಶಕದಿಂದ ಐಪಿಎಲ್​ನ ಸರ್ವಶೇಷ್ಠ ದಾಖಲೆಯಾಗಿ ಗುರುತಿಸಿಕೊಂಡಿದ್ದ ಒಂದು ರೆಕಾರ್ಡ್ ಅನ್ನು ಎಸ್​ಆರ್​ಹೆಚ್ ತಂಡವು ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಮುರಿದಿದೆ.

2 / 6
ಹೌದು, 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಕ್ರಿಸ್ ಗೇಲ್​ (175) ಅವರ ಶತಕದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿ ದಾಖಲೆ ಬರೆದಿತ್ತು. ಈ ಸರ್ವಶ್ರೇಷ್ಠ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎನ್ನಲಾಗಿತ್ತು. ಅದರಂತೆ ಕಳೆದ 10 ವರ್ಷಗಳಲ್ಲಿ ಈ ದಾಖಲೆಯ ಸಮೀಪಕ್ಕೂ ತಲುಪಲು ಯಾವುದೇ ತಂಡಕ್ಕೆ ಸಾಧ್ಯವಾಗಿರಲಿಲ್ಲ.

3 / 6
ಆದರೆ ಈ ಬಾರಿ ಸನ್​ರೈಸರ್ಸ್ ಹೈದರಾಬಾದ್ ತಂಡ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಒಂದೇ ಸೀಸನ್​ನಲ್ಲಿ ಮೂರು ಬಾರಿ ಆರ್​ಸಿಬಿ ತಂಡದ ಹೆಸರಿನಲ್ಲಿದ್ದ ಸರ್ವಶ್ರೇಷ್ಠ ದಾಖಲೆಯನ್ನು ಮುರಿದಿದೆ. ಈ ಮೂಲಕ ಆರ್​ಸಿಬಿ ತಂಡದ ದಾಖಲೆಯನ್ನು ಐದನೇ ಸ್ಥಾನಕ್ಕೆ ತಳ್ಳಿದೆ.

4 / 6
ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 272 ರನ್ ಬಾರಿಸಿ ಮಿಂಚಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು, ಆ ಬಳಿಕ ಬಳಿಕ ಆರ್​ಸಿಬಿ ವಿರುದ್ಧ 287 ರನ್ ಸಿಡಿಸಿ ಹೊಸ ಇತಿಹಾಸವನ್ನು ನಿರ್ಮಿಸಿತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್​ ಸಿಡಿಸಿ ಮತ್ತೊಮ್ಮೆ ಅಬ್ಬರಿಸಿದ್ದಾರೆ.

5 / 6
ಈ ಮೂಲಕ ಒಂದೇ ಸೀಸನ್​ನಲ್ಲಿ ಮೂರು ಬಾರಿ 263+ ಸ್ಕೋರ್​ಗಳಿಸಿ ಆರ್​ಸಿಬಿ ತಂಡದ ಸರ್ವಶ್ರೇಷ್ಠ ದಾಖಲೆಯನ್ನು ಮೂರು ಬಾರಿ ಮುರಿದಿದೆ. ಅಲ್ಲದೆ ಐಪಿಎಲ್​ನಲ್ಲಿ ಅತ್ಯಧಿಕ ಸ್ಕೋರ್​ಗಳಿಸಿದ ತಂಡಗಳ ಪಟ್ಟಿಯಲ್ಲಿ ಎಸ್​ಆರ್​ಹೆಚ್ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ.

6 / 6
ಇನ್ನು ಮೂರನೇ ಸ್ಥಾನದಲ್ಲಿ ಕೆಕೆಆರ್ (272 ಸ್ಕೋರ್) ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಇದೆ. ಹಾಗೆಯೇ ಇದೀಗ ಆರ್​ಸಿಬಿ ತಂಡದ 263 ರನ್​ಗಳ ಸ್ಕೋರ್ ದಾಖಲೆ​ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.