IPL 2024: ವಿರಾಟ್ ಕೊಹ್ಲಿ ಶತಕ ಬಾರಿಸಿದಾಗ RCB ಎಷ್ಟು ಬಾರಿ ಸೋತಿದೆ ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Apr 07, 2024 | 2:18 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಇತಿಹಾಸದಲ್ಲೇ ಸೋತ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿಶೇಷ ದಾಖಲೆಯೊಂದು ವಿರಾಟ್ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಹಾಶಿಮ್ ಆಮ್ಲ ಹಾಗೂ ಸಂಜು ಸ್ಯಾಮ್ಸನ್ ಹೆಸರಿನಲ್ಲಿದೆ. ಈ ಇಬ್ಬರು ಬ್ಯಾಟರ್ಗಳು ಸೋತ ಪಂದ್ಯಗಳಲ್ಲಿ ತಲಾ 2 ಶತಕಗಳನ್ನು ಸಿಡಿಸಿದ್ದಾರೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) 8ನೇ ಶತಕ ಸಿಡಿಸಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಕಿಂಗ್ ಕೊಹ್ಲಿ 72 ಎಸೆತಗಳಲ್ಲಿ 113 ರನ್ ಬಾರಿಸಿದ್ದರು.
2 / 6
ಈ ಅಜೇಯ ಶತಕದ ನೆರವಿನಿಂದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ಆದರೆ 184 ರನ್ಗಳನ್ನು ಚೇಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ಈ ಪಂದ್ಯವನ್ನು ಗೆದ್ದುಕೊಂಡಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಶತಕ ಕೂಡ ವ್ಯರ್ಥವಾಗಿದೆ.
3 / 6
ವಿಶೇಷ ಎಂದರೆ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಒಟ್ಟು 8 ಶತಕಗಳನ್ನು ಬಾರಿಸಿದ್ದು, ಈ ವೇಳೆ ಐದು ಬಾರಿ ಆರ್ಸಿಬಿ ಗೆದ್ದಿದೆ. ಇನ್ನು ಮೂರು ಬಾರಿ ಕಿಂಗ್ ಕೊಹ್ಲಿಯ ಶತಕದ ಹೊರತಾಗಿಯೂ ಆರ್ಸಿಬಿ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಿದ್ರೆ ಯಾವಾಗೆಲ್ಲಾ ಕೊಹ್ಲಿಯ ಶತಕ ವ್ಯರ್ಥವಾಗಿತ್ತು ಎಂದು ನೋಡೋಣ...
4 / 6
ಐಪಿಎಲ್ 2016: ಇಂಡಿಯನ್ ಪ್ರೀಮಿಯರ್ ಲೀಗ್ 2016 ರಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸೀಸನ್ನಲ್ಲಿ ಒಟ್ಟು 4 ಶತಕಗಳನ್ನು ಸಿಡಿಸಿ ಕೊಹ್ಲಿ ಆರ್ಭಟಿಸಿದ್ದರು. ಆದರೆ ಗುಜರಾತ್ ಲಯನ್ಸ್ ವಿರುದ್ಧ 63 ಎಸೆತಗಳಲ್ಲಿ 100 ರನ್ ಬಾರಿಸಿದರೂ ಆ ಪಂದ್ಯದಲ್ಲಿ ಆರ್ಸಿಬಿ ಸೋಲನುಭವಿಸಿತ್ತು.
5 / 6
ಐಪಿಎಲ್ 2023: ಕಳೆದ ಸೀಸನ್ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಶತಕ ಸಿಡಿಸಿ ಮಿಂಚಿದ್ದರು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ 61 ಎಸೆತಗಳಲ್ಲಿ 101 ರನ್ ಬಾರಿಸಿದರೂ, ಆ ಪಂದ್ಯವನ್ನು ಗುಜರಾತ್ ಟೈಟಾನ್ಸ್ ತಂಡ ಗೆದ್ದುಕೊಂಡಿತ್ತು.
6 / 6
ಐಪಿಎಲ್ 2024: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 72 ಎಸೆತಗಳಲ್ಲಿ 113 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮಿಂಚಿದ್ದಾರೆ. ಆದರೆ ಈ ಶತಕದ ಹೊರತಾಗಿಯೂ, ಈ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಗೆದ್ದುಕೊಂಡಿರುವುದು ವಿಶೇಷ.