
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಗಾಗಿ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ಪಡೆಯನ್ನು ರೂಪಿಸಿ ಐಪಿಎಲ್ಗಾಗಿ ಸಿದ್ಧತೆಗಳನ್ನು ಆರಂಭಿಸಿದೆ. ಅದರಲ್ಲೂ ಈ ಬಾರಿಯ ಹರಾಜಿನ ಮೂಲಕ RCB 6 ಹೊಸ ಆಟಗಾರರನ್ನು ಖರೀದಿಸಿದೆ.

ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಆರ್ಸಿಬಿ ತಂಡವು ಈ ಬಾರಿಯ ಆಕ್ಷನ್ನಲ್ಲಿ ಬೌಲರ್ಗಳ ಖರೀದಿಗೆ ಒತ್ತು ನೀಡಿತ್ತು. ಅದರಂತೆ ಯಶ್ ದಯಾಳ್ ಅವರನ್ನು 5 ಕೋಟಿ ರೂ. ಗೆ ಖರೀದಿಸಿದರೆ, ಅಲ್ಝಾರಿ ಜೋಸೆಫ್ ಅವರಿಗೆ ಆರ್ಸಿಬಿ ಬರೋಬ್ಬರಿ 11.5 ಕೋಟಿ ರೂ. ಪಾವತಿಸಿದೆ.

ಇನ್ನು ಇಂಗ್ಲೆಂಡ್ ಆಲ್ರೌಂಡರ್ ಟಾಮ್ ಕರನ್, ನ್ಯೂಝಿಲೆಂಡ್ ತಂಡದ ವೇಗಿ ಲಾಕಿ ಫರ್ಗುಸನ್ ಹಾಗೂ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಅವರನ್ನು ಆರ್ಸಿಬಿ ಆಯ್ಕೆ ಮಾಡಿಕೊಂಡಿದೆ. ಅಂದರೆ ಆರ್ಸಿಬಿ ಹೊಸದಾಗಿ ಖರೀದಿಸಿದ 6 ಆಟಗಾರರಲ್ಲಿ ಐವರು ಬೌಲರ್ಗಳು ಎಂಬುದು ವಿಶೇಷ.

ಇದಾಗ್ಯೂ ಆರ್ಸಿಬಿ ತಂಡದ ಬೌಲಿಂಗ್ ಲೈನಪ್ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಲೈನಪ್ ಬಗ್ಗೆ ಮಾಜಿ ಆರ್ಸಿಬಿ ಆಟಗಾರ ಯುಜ್ವೇಂದ್ರ ಚಹಲ್ ಅವರನ್ನು ಪ್ರಶ್ನಿಸಲಾಗಿತ್ತು.

ಗೇಮ್ ಸ್ಟ್ರೀಮಿಂಗ್ ವೇಳೆ ಪ್ರಸ್ತುತ ಆರ್ಸಿಬಿ ತಂಡದ ಬೌಲಿಂಗ್ ಲೈನಪ್ ಹೇಗಿದೆ ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಈ ಪ್ರಶ್ನೆಗೆ ಯುಜ್ವೇಂದ್ರ ಚಹಲ್...ಮೋಯೆ ಮೋಯೆ...ಎನ್ನುವ ಮೂಲಕ ಟ್ರೋಲ್ ಮಾಡಿದ್ದಾರೆ. ಅಂದರೆ ಆರ್ಸಿಬಿ ತಂಡ ಬೌಲಿಂಗ್ ಲೈನಪ್ ಈ ಬಾರಿ ಕೂಡ ನಗೆಪಾಟಲಿಗೀಡಾಗಲಿದೆ ಎಂದು ಯುಜ್ವೇಂದ್ರ ಚಹಲ್ ಪರೋಕ್ಷವಾಗಿ ಹೇಳಿದ್ದಾರೆ.

ಅಂದಹಾಗೆ 2014 ರಿಂದ 7 ಸೀಸನ್ಗಳವರೆಗೆ ಆರ್ಸಿಬಿ ಪರ 50 ಪಂದ್ಯಗಳನ್ನು ಆಡಿದ್ದ ಚಹಲ್ ಒಟ್ಟು 64 ವಿಕೆಟ್ ಪಡೆದಿದ್ದರು. ಅಲ್ಲದೆ ಆರ್ಸಿಬಿ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು. ಇದಾಗ್ಯೂ ಐಪಿಎಲ್ 2022 ರಲ್ಲಿ ಚಹಲ್ ಅವರನ್ನು ಆರ್ಸಿಬಿ ರಿಲೀಸ್ ಮಾಡಿತ್ತು. ಇದೀಗ ಯುಜ್ವೇಂದ್ರ ಚಹಲ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.
Published On - 2:57 pm, Sat, 6 January 24