IPL 2024: ನಿಗದಿತ ದಿನಾಂಕದಂದು ಕೆಕೆಆರ್- ರಾಜಸ್ಥಾನ್ ಪಂದ್ಯ ನಡೆಯುವುದು ಡೌಟ್..!
IPL 2024: ಐಪಿಎಲ್ 17ನೇ ಆವೃತ್ತಿಯಲ್ಲಿ ಏಪ್ರಿಲ್ 17 ರಂದು ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯವುದು ಅನುಮಾನ ಎಂದು ವರದಿಯಾಗಿದೆ.
1 / 7
ಐಪಿಎಲ್ 17ನೇ ಆವೃತ್ತಿಯಲ್ಲಿ ಏಪ್ರಿಲ್ 17 ರಂದು ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯವುದು ಅನುಮಾನ ಎಂದು ವರದಿಯಾಗಿದೆ.
2 / 7
ನಿಗದಿತ ವೇಳಾಪಟ್ಟಿಯ ಪ್ರಕಾರ ಉಭಯ ತಂಡಗಳ ನಡುವಿನ ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿತ್ತು. ಆದರೆ ಈಗ ಈ ಪಂದ್ಯವನ್ನು ಮರು ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿಯಾಗಿದೆ ಪ್ರಕಾರ ಈ ಪಂದ್ಯವನ್ನು ಬೇರೆಡೆ ಆಯೋಜಿಸಬಹುದು ಅಥವಾ ಬೇರೆ ದಿನಾಂಕದಂದು ಆಡಬಹುದು ಎಂದು ಹೇಳಲಾಗುತ್ತಿದೆ.
3 / 7
ಫ್ರಾಂಚೈಸ್ ತಂಡಗಳು, ರಾಜ್ಯ ಸಂಘಗಳು ಮತ್ತು ಪ್ರಸಾರಕರಿಗೆ ಈ ಬಗ್ಗೆ ಈಗಾಗಲೇ ತಿಳಿಸಲಾಗಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಈ ಪಂದ್ಯವನ್ನು ನಿಗದಿತ ದಿನಾಂಕದಂದು ನಡೆಸದಿರಲು ಕಾರಣ. ಆ ದಿನದಂದು ರಾಮನವಮಿ ಇದೆ. ಹೀಗಾಗಿ ಈ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂಬ ಕಾರಣಕ್ಕೆ ಕೋಲ್ಕತ್ತಾ ಹಾಗೂ ರಾಜಸ್ಥಾನ ನಡುವಿನ ಪಂದ್ಯವನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
4 / 7
ರಾಮ ನವಮಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ದುರ್ಗಾ ಪೂಜೆ ಕೋಲ್ಕತ್ತಾ ಮತ್ತು ಇಡೀ ಪಶ್ಚಿಮ ಬಂಗಾಳದಲ್ಲಿ ಬಹಳ ಜನಪ್ರಿಯವಾಗಿದೆ. ಹಾಗಾಗಿ ಪೊಲೀಸ್ ಭದ್ರತೆ ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಹೀಗಾಗಿ ಪಂದ್ಯವನ್ನು ಮುಂದೂಡಲು ಬಿಸಿಸಿಐ ಚಿಂತನೆ ನಡೆಸಿದೆ.
5 / 7
ESPNcricinfo ವರದಿಯ ಪ್ರಕಾರ, ಬಿಸಿಸಿಐ ಮತ್ತು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಕೋಲ್ಕತ್ತಾ ಪೊಲೀಸರೊಂದಿಗೆ ಸಂಪರ್ಕದಲ್ಲಿವೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಪಂದ್ಯದ ವೇಳಾಪಟ್ಟಿಯಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ ಬಿಸಿಸಿಐ ಎರಡೂ ಫ್ರಾಂಚೈಸಿಗಳು ಮತ್ತು ಪ್ರಸಾರಕರಿಗೆ ತಿಳಿಸಿದೆ.
6 / 7
ಈ ಬಾರಿ, ದೇಶದಲ್ಲಿ ಲೋಕಸಭೆ ಚುನಾವಣೆಯ ಕಾರಣ, ಬಿಸಿಸಿಐ ಐಪಿಎಲ್ 2024 ರ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿತ್ತು. ಮಂಡಳಿಯು ಮೊದಲ ಹಂತದಲ್ಲಿ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು ಮತ್ತು ನಂತರ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಮಾರ್ಚ್ 22 ರಿಂದ ಪ್ರಾರಂಭವಾದ ಐಪಿಎಲ್ 2024 ರಲ್ಲಿ ಇದುವರೆಗೆ 13 ಪಂದ್ಯಗಳನ್ನು ಆಡಲಾಗಿದೆ.
7 / 7
ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಈಗಾಗಲೇ ಐಪಿಎಲ್ 2024ರ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೋಲ್ಕತ್ತಾ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 3 ರಂದು ವಿಶಾಖಪಟ್ಟಣದಲ್ಲಿ ಆಡಬೇಕಾಗಿದೆ.