ಇದಲ್ಲದೆ ಈ ಪಂದ್ಯದ ಮೊದಲ ಓವರ್‌ನಲ್ಲಿ 2 ವಿಕೆಟ್ ಪಡೆದ ಬೌಲ್ಟ್ ಮೊದಲ ಓವರ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳ ಪೈಕಿ ತಮ್ಮ ಅಗ್ರಸ್ಥಾನವನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಂಡಿದ್ದಾರೆ. ಬೌಲ್ಟ್ ಇದುವರೆಗೆ 5 ಬಾರಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್‌ನ ಮೊದಲ ಓವರ್‌ನಲ್ಲಿ ಡೇಲ್ ಸ್ಟೇಯ್ನ್, ಪ್ರವೀಣ್ ಕುಮಾರ್ ಮತ್ತು ಉಮೇಶ್ ಯಾದವ್ ತಲಾ 2 ಬಾರಿ 2 ವಿಕೆಟ್ ಪಡೆದಿದ್ದರು.