AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ವಾಂಖೆಡೆಯಲ್ಲಿ ಬೌಲ್ಟ್ ಬಿರುಗಾಳಿಗೆ ಹೊಸ ಇತಿಹಾಸ ಸೃಷ್ಟಿ..!

IPL 2024: ಈ ಪಂದ್ಯದ ಮೊದಲ ಓವರ್​ನಲ್ಲಿ ಎರಡು ವಿಕೆಟ್ ಪಡೆದ ಬೌಲ್ಟ್ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲಿ ಅಧಿಕ ವಿಕೆಟ್ ಉರುಳಿಸಿದ ಬೌಲರ್​ಗಳ ಪಟ್ಟಿಯಲ್ಲಿ ಇದೀಗ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರೊಂದಗೆ ಜಂಟಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Apr 01, 2024 | 9:47 PM

Share
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 126 ರನ್ ಕಲೆಹಾಕಿದೆ. ಇನ್ನಿಂಗ್ಸ್ ಆರಂಭದಿಂದಲೇ ಮುಂಬೈ ಬ್ಯಾಟರ್​ಗಳ ಮೇಲೆ ಸವಾರಿ ಮಾಡುವಲ್ಲಿ ರಾಜಸ್ಥಾನ್ ವೇಗಿಗಳು ಯಶಸ್ವಿಯಾದರು.

1 / 8
ಅದರಲ್ಲೂ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲೇ ವಿಕೆಟ್ ಉರುಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಜಸ್ಥಾನ್ ವೇಗಿ ಟ್ರೆಂಟ್ ಬೌಲ್ಟ್ ಮುಂಬೈ ವಿರುದ್ಧದ ಪಂದ್ಯದಲ್ಲೂ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲಿ ಪ್ರಮುಖ 2 ವಿಕೆಟ್​ಗಳನ್ನು ಶೂನ್ಯಕ್ಕೆ ಉರುಳಿಸಿದರು.

2 / 8
ಮುಂಬೈ ಪರ ಇನ್ನಿಂಗ್ಸ್ ಆರಂಭಿಸಲು ಬಂದಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಬೌಲ್ಟ್ ಎಸೆದ ಇನ್ನಿಂಗ್ಸ್​ನ ಮೊದಲ ಓವರ್​ನ ಐದನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ರೋಹಿತ್​ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

3 / 8
ರೋಹಿತ್ ನಂತರ ಬಂದ ನಮನ್ ದೀರ್ ಕೂಡ ಮುಂದಿನ ಎಸೆತದಲ್ಲಿ ಅಂದರೆ ಮೊದಲ ಓವರ್​ನ 6ನೇ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಇದರೊಂದಿಗೆ ಬೌಲ್ಟ್ ತಾವು ಎಸೆದ ಮೊದಲ ಓವರ್​ನಲ್ಲೇ ಶೂನ್ಯಕ್ಕೆ ಇಬ್ಬರು ಬ್ಯಾಟರ್​ಗಳನ್ನು ಪೆವಿಲಿಯನ್‌ಗಟ್ಟಿದರು. ಈ ಮೂಲಕ ಐಪಿಎಲ್​ನಲ್ಲಿ ವಿಶಿಷ್ಠ ದಾಖಲೆ ಕೂಡ ನಿರ್ಮಿಸಿದರು.

4 / 8
ಈ ಪಂದ್ಯದ ಮೊದಲ ಓವರ್​ನಲ್ಲಿ ಎರಡು ವಿಕೆಟ್ ಪಡೆದ ಬೌಲ್ಟ್ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲಿ ಅಧಿಕ ವಿಕೆಟ್ ಉರುಳಿಸಿದ ಬೌಲರ್​ಗಳ ಪಟ್ಟಿಯಲ್ಲಿ ಇದೀಗ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರೊಂದಗೆ ಜಂಟಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

5 / 8
ಬೌಲ್ಟ್ ಹಾಗೂ ಭುವನೇಶ್ವರ್ ಕುಮಾರ್ ಮೊದಲ ಓವರ್​ನಲ್ಲಿ ಇದುವರೆಗೆ ತಲಾ 25 ವಿಕೆಟ್​​ಗಳನ್ನು ಉರುಳಿಸಿದ್ದಾರೆ. ಆದರೆ ಈ ಸಾಧನೆ ಮಾಡಲು ಇಬ್ಬರು ವೇಗಿಗಳು ತೆಗೆದುಕೊಂಡಿರುವ ಇನ್ನಿಂಗ್ಸ್​ಗಳನ್ನು ನೋಡುವುದಾದರೆ.. ಬೌಲ್ಟ್ ಮೇಲುಗೈ ಸಾಧಿಸಿದ್ದಾರೆ.

6 / 8
ಬೌಲ್ಟ್ 80 ಇನ್ನಿಂಗ್ಸ್‌ಗಳಲ್ಲಿ 25 ವಿಕೆಟ್ ಉರುಳಿಸಿದ ದಾಖಲೆ ಬರೆದರೆ, ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ 116 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

7 / 8
ಇದಲ್ಲದೆ ಈ ಪಂದ್ಯದ ಮೊದಲ ಓವರ್​ನಲ್ಲಿ 2 ವಿಕೆಟ್ ಪಡೆದ ಬೌಲ್ಟ್ ಮೊದಲ ಓವರ್​ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ಗಳ ಪೈಕಿ ತಮ್ಮ ಅಗ್ರಸ್ಥಾನವನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಂಡಿದ್ದಾರೆ. ಬೌಲ್ಟ್ ಇದುವರೆಗೆ 5 ಬಾರಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್‌ನ ಮೊದಲ ಓವರ್‌ನಲ್ಲಿ ಡೇಲ್ ಸ್ಟೇಯ್ನ್, ಪ್ರವೀಣ್ ಕುಮಾರ್ ಮತ್ತು ಉಮೇಶ್ ಯಾದವ್ ತಲಾ 2 ಬಾರಿ 2 ವಿಕೆಟ್ ಪಡೆದಿದ್ದರು.

8 / 8
Follow Us
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ

ತೆಲಂಗಾಳದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!

ಖರ್ಗೆ ಉಸ್ತುವಾರಿಯ ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು

ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!

ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?

ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ

ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!

ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?

ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್

ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ