IPL 2024: ಒಂದೇ ಪಂದ್ಯದಲ್ಲಿ ಬರೋಬ್ಬರಿ 10 ದಾಖಲೆ ಬರೆದ ಹೈದರಾಬಾದ್..!
IPL 2024: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಒಂದೇ ಒಂದು ಪಂದ್ಯದಲ್ಲಿ ಬರೋಬ್ಬರಿ 10 ಕ್ಕೂ ಹೆಚ್ಚು ದಾಖಲೆಗಳನ್ನು ಬರೆದಿದೆ.
1 / 10
ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಕಲೆಹಾಕಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಮೊತ್ತ ಕಲೆಹಾಕಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಇದಕ್ಕೂ ಮುನ್ನ 263 ರನ್ ಕಲೆಹಾಕಿದ್ದ ಆರ್ಸಿಬಿ ಹೆಸರಲ್ಲಿ ಈ ದಾಖಲೆ ಇತ್ತು.
2 / 10
ಸನ್ರೈಸರ್ಸ್ ಹೈದರಾಬಾದ್ ಕಲೆಹಾಕಿರುವ 277 ರನ್ ಟಿ20 ಕ್ರಿಕೆಟ್ನಲ್ಲಿ ಯಾವುದೇ ತಂಡ ಕಲೆಹಾಕಿದ ಮೂರನೇ ಅತಿದೊಡ್ಡ ಮೊತ್ತವಾಗಿದೆ. ಮಂಗೋಲಿಯ ವಿರುದ್ಧ 3 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿದ್ದ ನೇಪಾಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 278 ರನ್ ಕಲೆಹಾಕಿದ್ದ ಅಫ್ಘಾನಿಸ್ತಾನ ಎರಡನೇ ಸ್ಥಾನದಲ್ಲಿದೆ.
3 / 10
ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಇನ್ನು ಟಿ20 ಲೀಗ್ಗಳ ವಿಚಾರಕ್ಕೆ ಬಂದರೆ ಎಸ್ಆರ್ಎಚ್ ಕಲೆಹಾಕಿರುವ 277 ರನ್ಗಳೇ ಫ್ರಾಂಚೈಸಿ ಲೀಗ್ನಲ್ಲಿ ದಾಖಲಾಗಿರುವ ಅತ್ಯಧಿಕ ಮೊತ್ತವಾಗಿದೆ.
4 / 10
ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಸನ್ರೈಸರ್ಸ್ ಹೈದರಾಬಾದ್ ತಂಡ ಕಲೆಹಾಕಿದ ಅತ್ಯಧಿಕ ಮೊತ್ತ ಇದಾಗಿದೆ.
5 / 10
ತನ್ನ ಇನ್ನಿಂಗ್ಸ್‌ನಲ್ಲಿ 18 ಸಿಕ್ಸರ್ ಸಿಡಿಸಿದ ಹೈದರಾಬಾದ್, ಐಪಿಎಲ್ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್ಸಿಬಿ ಇನ್ನಿಂಗ್ಸ್‌ವೊಂದರಲ್ಲಿ 21 ಸಿಕ್ಸರ್ ಸಿಡಿಸಿತ್ತು.
6 / 10
ಹಾಗೆಯೇ ಐಪಿಎಲ್ ಇನ್ನಿಂಗ್ಸ್‌ವೊಂದರಲ್ಲಿ ಅತಿ ವೇಗವಾಗಿ 250 ರನ್ ಕಲೆಹಾಕಿದ ತಂಡಗಳ ಪೈಕಿ ಜಂಟಿಯಾಗಿ ಮೊದಲ ಸ್ಥಾನ ಪಡೆದುಕೊಂಡಿದೆ.
7 / 10
ಈ ಪಂದ್ಯದಲ್ಲಿ ಕೇವಲ 14.4 ಓವರ್ಗಳಲ್ಲಿ 200 ರನ್ ಪೂರೈಸಿದ ಹೈದರಾಬಾದ್ ಐಪಿಎಲ್ ಇನ್ನಿಂಗ್ಸ್‌ನಲ್ಲಿ ವೇಗವಾಗಿ ದ್ವಿಶತಕ ಪೂರೈಸಿದ ಎರಡನೇ ತಂಡ ಎನಿಸಿಕೊಂಡಿದೆ.
8 / 10
ಅಲ್ಲದೆ ಇನ್ನಿಂಗ್ಸ್ನ ಕೊನೆಯ 10 ಓವರ್ಗಳಲ್ಲಿ ಬರೋಬ್ಬರಿ 148 ರನ್ ಸಿಡಿಸಿದ ಹೈದರಾಬಾದ್, ಕೊನೆಯ 10 ಓವರ್ಗಳಲ್ಲಿ ಇಷ್ಟು ರನ್ ಬಾರಿಸಿದ ಮೊದಲ ತಂಡ ಎನಿಸಿಕೊಂಡಿದೆ.
9 / 10
ಈ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ಶರ್ಮಾ ಹೈದರಾಬಾದ್ ಪರ ವೇಗವಾಗಿ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರೆ, ಒಟ್ಟಾರೆ ಐಪಿಎಲ್ನಲ್ಲಿ ವೇಗವಾಗಿ ಅರ್ಧಶತಕ ಪೂರೈಸಿದ 4ನೇ ಬ್ಯಾಟರ್ ಎನಿಸಿಕೊಂಡರು.
10 / 10
ಅಭಿಷೇಕ್ ಜೊತೆಯೇ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಟ್ರಾವಿಸ್ ಹೆಡ್ ಹೈದರಾಬಾದ್ ತಂಡದ ಪರ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು.
Published On - 10:54 pm, Wed, 27 March 24