IPL 2024: ಐಪಿಎಲ್ನ ಅತ್ಯಂತ ಯಶಸ್ವಿ ನಾಯಕ ಧೋನಿ
IPL 2024: ಧೋನಿ 2008 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ನಾಯಕತ್ವದಲ್ಲಿ ಸಿಎಸ್ಕೆ ತಂಡ ಎರಡು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಸೇರಿದಂರೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ.
1 / 7
17ನೇ ಆವೃತ್ತಿಯ ಐಪಿಎಲ್ ಪ್ರಾರಂಭವಾಗುವ ಒಂದು ದಿನದ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ತಂಡದ ನಾಯಕನನ್ನು ಬದಲಾಯಿಸಿದೆ. ಅದರಂತೆ ಇಷ್ಟು ವರ್ಷ ಸಿಎಸ್ಕೆ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದು ಅವರ ಬದಲಿಗೆ ತಂಡದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
2 / 7
ಧೋನಿ 2008 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ನಾಯಕತ್ವದಲ್ಲಿ ಸಿಎಸ್ಕೆ ತಂಡ ಎರಡು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಸೇರಿದಂರೆ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ.
3 / 7
ಈ ಅಂಕಿ ಅಂಶ ಟಿ20 ಮಾದರಿಯಲ್ಲಿ ಧೋನಿ ಎಂತಹ ನಾಯಕ ಎಂಬುದನ್ನು ಸಾಭೀತುಪಡಿಸುತ್ತದೆ. ಅಲ್ಲದೆ ಅತಿ ಹೆಚ್ಚು ಟಿ20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಆಟಗಾರ ಎಂಬ ದಾಖಲೆಯೂ ಧೋನಿ ಹೆಸರಿನಲ್ಲಿದೆ. ಧೋನಿ ಇದುವರೆಗೆ 322 ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ.
4 / 7
ಈ 322 ಪಂದ್ಯಗಳಲ್ಲಿ 189 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಶ್ರೇಯ ಧೋನಿಗೆ ಸಲ್ಲುತ್ತದೆ. ಇದಲ್ಲದೆ ಧೋನಿ ಗರಿಷ್ಠ 9 ಫೈನಲ್‌ಗಳನ್ನು ಗೆದ್ದ ನಾಯಕ ಕೂಡ ಆಗಿದ್ದಾರೆ. ಧೋನಿ ಭಾರತ ಟಿ20 ತಂಡದ ನಾಯಕನಾಗಿ 2007 ರ ಟಿ20 ವಿಶ್ವಕಪ್ ಮತ್ತು 2016 ರ ಏಷ್ಯಾಕಪ್ ಅನ್ನು ಗೆದ್ದಿದ್ದಾರೆ.
5 / 7
ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೆ.. ಎರಡು ವರ್ಷಗಳ ನಿಷೇಧವನ್ನು ಹೊರತುಪಡಿಸಿ, ಮಹೇಂದ್ರ ಸಿಂಗ್ ಧೋನಿ 14 ವರ್ಷಗಳಲ್ಲಿ 212 ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇದಲ್ಲದೆ, ಅವರು ಚಾಂಪಿಯನ್ಸ್ ಲೀಗ್‌ನ 23 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದಾರೆ.
6 / 7
ಈ 235 ಪಂದ್ಯಗಳಲ್ಲಿ ಚೆನ್ನೈ 142 ಪಂದ್ಯಗಳನ್ನು ಗೆದ್ದಿದ್ದರೆ, 90 ಪಂದ್ಯಗಳಲ್ಲಿ ಸೋಲನುಭವಿಸಿದೆ. ಹಾಗೆಯೇ ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಚೆನ್ನೈ ತಂಡದ ನಾಯಕನಾಗಿ ಧೋನಿ ಗೆಲುವಿನ ಶೇಕಡಾವಾರು 60.42 ಆಗಿದೆ.
7 / 7
ಮಹೇಂದ್ರ ಸಿಂಗ್ ಧೋನಿ 14 ಐಪಿಎಲ್ ಸೀಸನ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಇದರಲ್ಲಿ ತಂಡ 12 ಬಾರಿ ಪ್ಲೇ ಆಫ್ ತಲುಪಿದೆ. 2020 ಮತ್ತು 2022 ರಲ್ಲಿ ಮಾತ್ರ ತಂಡವು ಪ್ಲೇ ಆಫ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
Published On - 6:17 pm, Thu, 21 March 24