IPL 2024: ಸಿಎಸ್ಕೆ ಪರ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಎಂಎಸ್ ಧೋನಿ..!
IPL 2024: ಐಪಿಎಲ್‌ನ ಕೊನೆಯ ಸೀಸನ್ ಆಡುತ್ತಿರುವ ಸಿಎಸ್ಕೆ ಮಾಜಿ ನಾಯಕ ಎಂಎಸ್ ಧೋನಿಗೆ ದಾಖಲೆಯ ವಿಚಾರದಲ್ಲಿ ಬಹಳ ವಿಶೇಷ ಪಂದ್ಯವಾಗಿದೆ. ಐಪಿಎಲ್ ಆರಂಭವಾದಾಗಿನಿಂದಲೂ ಸಿಎಸ್ಕೆ ಪರ ಆಡುತ್ತಿರುವ ಧೋನಿ, ಇಂದಿನ ಪಂದ್ಯದಲ್ಲಿ ವಿಶೇಷವಾದ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ.
1 / 6
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಅಂದರೆ ಡಬಲ್ ಹೆಡರ್ ದಿನದ ಎರಡನೇ ಪಂದ್ಯದು ಎರಡು ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿವೆ. ಗೆಲುವಿನ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದೆ.
2 / 6
ಆದರೆ ಐಪಿಎಲ್‌ನ ಕೊನೆಯ ಸೀಸನ್ ಆಡುತ್ತಿರುವ ಸಿಎಸ್ಕೆ ಮಾಜಿ ನಾಯಕ ಎಂಎಸ್ ಧೋನಿಗೆ ದಾಖಲೆಯ ವಿಚಾರದಲ್ಲಿ ಬಹಳ ವಿಶೇಷ ಪಂದ್ಯವಾಗಿದೆ. ಐಪಿಎಲ್ ಆರಂಭವಾದಾಗಿನಿಂದಲೂ ಸಿಎಸ್ಕೆ ಪರ ಆಡುತ್ತಿರುವ ಧೋನಿ, ಇಂದಿನ ಪಂದ್ಯದಲ್ಲಿ ವಿಶೇಷವಾದ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ.
3 / 6
ಮೇಲೆ ಹೇಳಿದಂತೆ 2008 ರಿಂದಲೂ ಸಿಎಸ್ಕೆ ಪರ ಆಡುತ್ತಿರುವ ಧೋನಿ, ಇಂದಿನ ಪಂದ್ಯದಲ್ಲಿ ಕೇವಲ 4 ರನ್ ಕಲೆಹಾಕಿದರೆ, ಈ ತಂಡದ ಪರ 5000 ರನ್ ಪೂರೈಸಿದ ಎರಡನೇ ಆಟಗಾರ ಎಂಬ ವಿಶೇಷ ದಾಖಲೆ ಬರೆಯಲ್ಲಿದ್ದಾರೆ.
4 / 6
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಇದುವರೆಗೆ 249 ಪಂದ್ಯಗಳನ್ನಾಡಿರುವ ಕ್ಯಾಪ್ಟನ್ ಕೂಲ್ ಧೋನಿ 23 ಅರ್ಧಶತಕಗಳು ಸೇರಿದಂತೆ ಇಲ್ಲಿಯವರೆಗೆ 4996 ರನ್ ಕಲೆಹಾಕಿದ್ದಾರೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಧೋನಿ ಕೇವಲ 4 ರನ್ ಕಲೆಹಾಕಿದರೆ 5000 ರನ್ ಪೂರೈಸಲಿದ್ದಾರೆ.
5 / 6
ಧೋನಿ ಹೊರತಾಗಿ ಸಿಎಸ್ಕೆ ಪರ ಏಕೈಕ ಆಟಗಾರ ಮಾತ್ರ 5000 ರನ್ ಪೂರೈಸಿದ್ದಾರೆ. ಆ ಆಟಗಾರನೆಂದರೆ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ. ಸುರೇಶ್ ರೈನಾ ಸಿಎಸ್ಕೆ ಪರ 5529 ರನ್ ಕಲೆಹಾಕಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
6 / 6
ಎಂಎಸ್ ಧೋನಿ ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 255 ಪಂದ್ಯಗಳನ್ನು ಆಡಿದ್ದು, 39.09 ಸರಾಸರಿಯಲ್ಲಿ 5121 ರನ್ ಬಾರಿಸಿದ್ದಾರೆ. ಇದರಲ್ಲಿ 24 ಅರ್ಧಶತಕಗಳು ಸೇರಿವೆ. ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಎಂಎಸ್ ಧೋನಿ ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.