IPL 2024: ಬರೋಬ್ಬರಿ 323 ಡಾಟ್​ ಬಾಲ್: ಬಿಸಿಸಿಐ ಎಷ್ಟು ಗಿಡಗಳನ್ನು ನೆಡಲಿದೆ ಗೊತ್ತಾ?

|

Updated on: May 27, 2024 | 2:34 PM

IPL 2024 Playoffs Dot Balls: ಈ ಬಾರಿಯ ಐಪಿಎಲ್​ನ ಪ್ಲೇಆಫ್ ಪಂದ್ಯಗಳಲ್ಲಿ ಎಸೆಯಲ್ಪಡುವ ಪ್ರತಿ ಡಾಟ್ ಬಾಲ್​ಗೂ ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿತ್ತು. ಅದರಂತೆ ನಾಲ್ಕು ಪ್ಲೇಆಫ್ ಪಂದ್ಯಗಳೊಂದಿಗೆ ಐಪಿಎಲ್ ಮುಗಿದಿದೆ. ಇದೀಗ ಗ್ರೀನ್ ಟ್ರೀ ಅಭಿಯಾನದಂತೆ ಬಿಸಿಸಿಐ ಒಂದುವರೆ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡಲಿದೆ.

1 / 7
IPL 2024: ಐಪಿಎಲ್ ಪ್ಲೇಆಫ್ಸ್ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿಶೇಷ ಅಭಿಯಾನವನ್ನು ಕೈಗೆತ್ತಿಗೊಂಡಿತ್ತು. ಈ ಅಭಿಯಾನದಂತೆ ಪ್ಲೇಆಫ್ಸ್ ಪಂದ್ಯಗಳಲ್ಲಿ ಮಾಡುವ ಪ್ರತಿ ಡಾಟ್ ಬಾಲ್​ಗೆ ಟಾಟಾ ಕಂಪೆನಿಯ ಸಹಭಾಗಿತ್ವದಲ್ಲಿ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿತ್ತು.

2 / 7
ಇದೇ ಕಾರಣದಿಂದಾಗಿ ಪ್ಲೇಆಫ್ಸ್​ ಪಂದ್ಯಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರದ ಗ್ರಾಫಿಕ್ಸ್​ ಅನ್ನು ಬಳಸಲಾಗಿತ್ತು. ಇದೀಗ ಐಪಿಎಲ್ ಸೀಸನ್ 17 ಮುಗಿದಿದೆ. ಅಂತಿಮ ಹಂತದ ನಾಲ್ಕು ಪಂದ್ಯಗಳಲ್ಲಿ ಎಷ್ಟು ಡಾಟ್ ಬಾಲ್ ಆಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ...

3 / 7
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಒಟ್ಟು 73 ಡಾಟ್ ಬಾಲ್​ಗಳನ್ನು ಎಸೆಯಲಾಗಿದೆ.

4 / 7
ಇನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಒಟ್ಟು 74 ಡಾಟ್ ಬಾಲ್​ಗಳು ಮೂಡಿಬಂದಿದ್ದವು.

5 / 7
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಿದ್ದವು. ಈ ಪಂದ್ಯದಲ್ಲಿ ಒಟ್ಟು 96 ಡಾಟ್ ಬಾಲ್​ಗಳನ್ನು ಆಡಲಾಗಿದೆ.

6 / 7
ಇನ್ನು ಚೆನ್ನೈನ ಎಂಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಣ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಒಟ್ಟು 80 ಡಾಟ್ ಬಾಲ್​ಗಳು ಮೂಡಿಬಂದಿವೆ.

7 / 7
ಅಂದರೆ ಪ್ಲೇಆಫ್​ ಪಂದ್ಯಗಳಲ್ಲಿ ಮೂಡಿಬಂದಿರುವ ಡಾಟ್ ಬಾಲ್​ಗಳ ಒಟ್ಟು ಸಂಖ್ಯೆ 323. ಇಲ್ಲಿ ಪ್ರತಿ ಡಾಟ್ ಬಾಲ್​ಗೆ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ. ಅದರಂತೆ ಬಿಸಿಸಿಐ ಟಾಟಾ ಸಹಭಾಗಿತ್ವದಲ್ಲಿ ಒಟ್ಟು 1,61,500 ಗಿಡಗಳನ್ನು ನೆಡಲಿದೆ.

Published On - 2:32 pm, Mon, 27 May 24