IPL 2024: ಈ ಐವರು ಐಪಿಎಲ್ ಸ್ಟಾರ್​​ಗಳಿಗೆ ಶೀಘ್ರದಲ್ಲೇ ಟೀಂ ಇಂಡಿಯಾದಲ್ಲಿ ಸ್ಥಾನ

IPL 2024: ಈ ಯುವ ಆಟಗಾರರು ತಮ್ಮ ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಬೌಲಿಂಗ್ ಮತ್ತು ಆಲ್ ರೌಂಡ್ ಪ್ರದರ್ಶನದಿಂದ ರಾಷ್ಟ್ರೀಯ ತಂಡ ಸೇರುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಅಂತಹವರಲ್ಲಿ ಪ್ರಮುಖವಾಗಿ ಈ ಐವರು ದೇಶೀ ಪ್ರತಿಭೆಗಳು ಶೀಘ್ರದಲ್ಲೇ ಟೀಂ ಇಂಡಿಯಾ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಪೃಥ್ವಿಶಂಕರ
|

Updated on:May 27, 2024 | 8:19 PM

ಕೆಕೆಆರ್ ಹಾಗೂ ಎಸ್​ಆರ್​ಹೆಚ್ ನಡುವಿನ ಫೈನಲ್ ಪಂದ್ಯದ ಅಂತ್ಯದೊಂದಿಗೆ 17ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ತೆರೆ ಬಿದ್ದಿದೆ. ನಾನಾ ವಿಚಾರಗಳಲ್ಲಿ ಈ ಬಾರಿಯ ಐಪಿಎಲ್ ಸಾಕಷ್ಟು ವಿಶೇಷವಾಗಿತ್ತು. ಈ ಆವೃತ್ತಿಯಲ್ಲಿ ಅನೇಕ ಸ್ಟಾರ್ ಆಟಗಾರರು ಕಳಪೆ ಪ್ರದರ್ಶನದಿಂದ ಸೊರಗಿದರೆ, ಇನ್ನು ಅನೇಕ ಯುವ ಆಟಗಾರರು ತಮ್ಮ ಸ್ಫೋಟಕ ಪ್ರದರ್ಶನದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

1 / 9
ಈ ಯುವ ಆಟಗಾರರು ತಮ್ಮ ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಬೌಲಿಂಗ್ ಮತ್ತು ಆಲ್ ರೌಂಡ್ ಪ್ರದರ್ಶನದಿಂದ ರಾಷ್ಟ್ರೀಯ ತಂಡ ಸೇರುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಅಂತಹವರಲ್ಲಿ ಪ್ರಮುಖವಾಗಿ ಈ ಐವರು ದೇಶೀ ಪ್ರತಿಭೆಗಳು ಶೀಘ್ರದಲ್ಲೇ ಟೀಂ ಇಂಡಿಯಾ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

2 / 9
ಆ 5 ಆಟಗಾರರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ರಿಯಾನ್ ಪರಾಗ್, ಕೆಕೆಆರ್ ಬೌಲರ್ ಹರ್ಷಿತ್ ರಾಣಾ, ಪಿಬಿಕೆಎಸ್ ಬ್ಯಾಟ್ಸ್‌ಮನ್ ಅಶುತೋಷ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಸೇರಿದ್ದಾರೆ.

3 / 9
ಈ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಆಟಗಾರ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿದ 16 ಪಂದ್ಯಗಳಲ್ಲಿ ಅಭಿಷೇಕ್ 32.27 ಸರಾಸರಿ ಮತ್ತು 204.22 ಸ್ಟ್ರೈಕ್ ರೇಟ್‌ನಲ್ಲಿ 484 ರನ್ ಗಳಿಸಿದರು. ಇದರಲ್ಲಿ ಮೂರು ಅರ್ಧಶತಕಗಳು ಸೇರಿದ್ದವು.

4 / 9
ಕೆಕೆಆರ್ ಆಟಗಾರ ಹರ್ಷಿತ್ ರಾಣಾ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಹರ್ಷಿತ್ ಆಡಿದ 13 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದು, ಲೀಗ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪೈಕಿ ಒಬ್ಬರಾಗಿದ್ದಾರೆ.

5 / 9
ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಶಶಾಂಕ್ ಸಿಂಗ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಅಚ್ಚರಿ ಮೂಡಿಸಿದರು. ಶಶಾಂಕ್ ಆಡಿದ 14 ಪಂದ್ಯಗಳಲ್ಲಿ 44.25 ಸರಾಸರಿ ಮತ್ತು 164.65 ಸ್ಟ್ರೈಕ್ ರೇಟ್‌ನಲ್ಲಿ 354 ರನ್ ಗಳಿಸಿದರು. ಬೌಲಿಂಗ್​ನಲ್ಲೂ ಒಂದು ವಿಕೆಟ್ ಪಡೆದರು.

6 / 9
ಇನ್ನು ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ರಿಯಾನ್ ಪರಾಗ್ ಕೂಡ ಆಡಿದ15 ಪಂದ್ಯಗಳಲ್ಲಿ 52.09 ಸರಾಸರಿ ಮತ್ತು 149.22 ಸ್ಟ್ರೈಕ್ ರೇಟ್‌ನಲ್ಲಿ 573 ರನ್ ಬಾರಿಸಿದ್ದರು.

7 / 9
ಮತ್ತೊಬ್ಬ ಪಿಬಿಕೆಎಸ್ ಆಟಗಾರ ಅಶುತೋಷ್ ಶರ್ಮಾ ಕೂಡ ತಮ್ಮ ಸ್ಫೋಟಕ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹೊಸ್ತಿಲಿನಲ್ಲಿದ್ದಾರೆ. ಅಶುತೋಷ್ ಶರ್ಮಾ ಆಡಿದ 11 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ ಮತ್ತು 167.26 ಸ್ಟ್ರೈಕ್ ರೇಟ್‌ನಲ್ಲಿ 189 ರನ್ ಬಾರಿಸಿದ್ದರು.

8 / 9
ಟಿ20 ವಿಶ್ವಕಪ್ ಬಳಿಕ ಈ ಯುವ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಬಹುದು. ಆಯ್ಕೆದಾರರು ಈ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಈ ಐವರಿಗೆ ಸ್ಥಾನ ನೀಡಬಹುದು. ಜುಲೈ 6 ರಿಂದ ಜಿಂಬಾಬ್ವೆಯಲ್ಲಿ ಈ ಸರಣಿ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿ ಜುಲೈ 14ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ಈ ಐವರು ಆಟಗಾರರಿಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

9 / 9

Published On - 8:19 pm, Mon, 27 May 24

Follow us
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್