IPL 2024: RCB ಪರ ಒಂದೇ ಒಂದು ಪಂದ್ಯವಾಡದ ಆಟಗಾರರು ಯಾರು ಗೊತ್ತಾ?

IPL 2024 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಒಟ್ಟು 15 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ 7 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, 8 ರಲ್ಲಿ ಸೋಲನುಭವಿಸಿದೆ. ಅದರಲ್ಲೂ ಪ್ಲೇಆಫ್ ಹಂತಕ್ಕೇರಿದ್ದ ಆರ್​ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತ್ತು.

|

Updated on: May 28, 2024 | 8:08 AM

ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಒಟ್ಟು 25 ಆಟಗಾರರ ಬಳಗದೊಂದಿಗೆ ಕಾಣಿಸಿಕೊಂಡಿತ್ತು. ಈ ಇಪ್ಪತ್ತೈದು ಆಟಗಾರರಲ್ಲಿ 22 ಮಂದಿ ಈ ಬಾರಿ ಕಣಕ್ಕಿಳಿದಿದ್ದಾರೆ. ಆದರೆ ಮೂವರು ಆಟಗಾರರಿಗೆ ಒಂದೇ ಒಂದು ಪಂದ್ಯವಾಡುವ ಸೌಭಾಗ್ಯ ಸಿಕ್ಕಿಲ್ಲ. ಆ ಆಟಗಾರರು ಯಾರೆಂದರೆ...

1 / 8
1- ರಜನ್ ಕುಮಾರ್ (ಬೌಲರ್): ಐಪಿಎಲ್ 2023 ರಲ್ಲಿ ಆರ್​ಸಿಬಿ 70 ಲಕ್ಷ ರೂ.ಗೆ ಖರೀದಿಸಿದ್ದ ರಜನ್ ಕುಮಾರ್ ಕಳೆದ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವಾಡಿರಲಿಲ್ಲ. ಇದಾಗ್ಯೂ ಅವರನ್ನು ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಬಾರಿ ಕೂಡ ಅವರಿಗೆ ಪಾದಾರ್ಪಣೆ ಮಾಡುವ ಅವಕಾಶ ನೀಡಿಲ್ಲ.

2 / 8
2- ಟಾಮ್ ಕರನ್ (ಆಲ್​ರೌಂಡರ್): ಇಂಗ್ಲೆಂಡ್​ನ ಆಲ್​ರೌಂಡರ್ ಟಾಮ್ ಕರನ್ ಅವರನ್ನು ಈ ಬಾರಿಯ ಹರಾಜಿನಲ್ಲಿ ಆರ್​ಸಿಬಿ ಬರೋಬ್ಬರಿ 1.5 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ 15 ಪಂದ್ಯಗಳಲ್ಲಿ ಒಮ್ಮೆಯೂ ಕರನ್ ಅವರನ್ನು ಕಣಕ್ಕಿಳಿಸಿರಲಿಲ್ಲ.

3 / 8
3- ಮನೋಜ್ ಭಾಂಡಗೆ (ಆಲ್​ರೌಂಡರ್): ಐಪಿಎಲ್ 2023 ರಿಂದ ಆರ್​ಸಿಬಿ ತಂಡದಲ್ಲಿರುವ ಕನ್ನಡಿಗ ಮನೋಜ್ ಭಾಂಡಗೆಗೆ ಕಳೆದ ಸೀಸನ್​ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಅವಕಾಶ ನೀಡಿರಲಿಲ್ಲ. ಇದಾಗ್ಯೂ ಈ ಬಾರಿ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದ ಭಾಂಡಗೆ ಅವರಿಗೂ ಒಂದೇ ಒಂದು ಚಾನ್ಸ್ ನೀಡಲಾಗಿಲ್ಲ. ಇನ್ನು ಈ ಬಾರಿ ಆರ್​ಸಿಬಿ ಪರ ಕೇವಲ 1 ಪಂದ್ಯವಾಡಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

4 / 8
1- ಸುಯಶ್ ಪ್ರಭುದೇಸಾಯಿ (ಬ್ಯಾಟರ್): ಈ ಬಾರಿಯ ಐಪಿಎಲ್​ನಲ್ಲಿ ಸುಯಶ್ ಪ್ರಭುದೇಸಾಯಿ ಕೇವಲ ಒಂದು ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ 24 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು.

5 / 8
2- ಹಿಮಾಂಶು ಶರ್ಮಾ (ಬೌಲರ್): ಕಳೆದ ಸೀಸನ್​​ನಿಂದ ಆರ್​ಸಿಬಿ ತಂಡದಲ್ಲಿರುವ ಸ್ಪಿನ್ನರ್ ಹಿಮಾಂಶು ಶರ್ಮಾ ಈ ಬಾರಿ ಆಡಿದ್ದು ಕೇವಲ 1 ಮ್ಯಾಚ್ ಮಾತ್ರ. ಈ ಪಂದ್ಯದಲ್ಲಿ 2 ಓವರ್​ಗಳನ್ನು ಎಸೆದಿದ್ದ ಅವರು 29 ರನ್ ನೀಡಿದರೂ ಒಂದೇ ಒಂದು ವಿಕೆಟ್ ಪಡೆದಿಲ್ಲ.

6 / 8
3- ಆಕಾಶ್ ದೀಪ್ (ಬೌಲರ್): ಈ ಬಾರಿಯ ಐಪಿಎಲ್​ನಲ್ಲಿ ಆಕಾಶ್ ದೀಪ್ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ. ಆದರೆ ಈ ಪಂದ್ಯದಲ್ಲಿ ಎಸೆದ 21 ಎಸೆತಗಳಲ್ಲಿ 55 ರನ್ ನೀಡುವ ಮೂಲಕ ದುಬಾರಿಯಾಗಿ ಪರಿಣಮಿಸಿದ್ದರು. ಹೀಗಾಗಿ ಆ ಬಳಿಕ ಅವರಿಗೆ ಚಾನ್ಸ್ ನೀಡಲಾಗಿಲ್ಲ.

7 / 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

8 / 8
Follow us
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್

ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ

ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ

ಹೊಸಕೋಟೆಯ ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ

ಜವಾಬ್ದಾರಿವಹಿಸಿಕೊಂಡವರ  ಪ್ರಮಾದಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು: ಯತ್ನಾಳ್

ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿ, ಪುನಃ ಸೆಂಟ್ರಲ್ ಜೈಲ

ದೇಶ ನಮ್ಮದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್: ಜಮೀರ್ ಅಹ್ಮದ್

ಬೇರೆಯವರ ಮೇಲೆ ಗೂಬೆಕೂರಿಸುವುದು ದೇವೇಗೌಡ ಕುಟುಂಬದ ಅಭ್ಯಾಸ: ಡಿಕೆ ಸುರೇಶ್

ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತಾಂಡವಾಡುತ್ತಿದೆ ಲಂಚಗುಳಿತನ

ಅಂಗನವಾಡಿಗಳಲ್ಲಿ ಇನ್ಮುಂದೆ ಸರ್ಕಾರಿ ಮಾಂಟೆಸರಿ, LKG, UKG ಟೀಚಿಂಗ್