IPL 2024: ಇಂದು ಐತಿಹಾಸಿಕ ಪಂದ್ಯಗಳನ್ನಾಡಲಿದ್ದಾರೆ ರೋಹಿತ್ ಶರ್ಮಾ..!
IPL 2024: ಇಂದಿನ ಪಂದ್ಯದಲ್ಲಿ ರೋಹಿತ್ ಮೈದಾನಕ್ಕಿಳಿದ ಕೂಡಲೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ 200ನೇ ಪಂದ್ಯವನ್ನಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಹೊರತುಪಡಿಸಿ ಮತ್ತ್ಯಾವ ಆಟಗಾರನೂ ಮುಂಬೈ ಪರ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.
1 / 7
ಐಪಿಎಲ್ 17ನೇ ಸೀಸನ್ ನ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಾರ್ಚ್ 27 ರಂದು ಅಂದರೆ ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ಪಾಲಿಗೆ ಈ ಪಂದ್ಯ ವಿಶೇಷವಾಗಿದೆ.
2 / 7
ಇಂದಿನ ಪಂದ್ಯದಲ್ಲಿ ರೋಹಿತ್ ಮೈದಾನಕ್ಕಿಳಿದ ಕೂಡಲೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ 200ನೇ ಪಂದ್ಯವನ್ನಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಹೊರತುಪಡಿಸಿ ಮತ್ತ್ಯಾವ ಆಟಗಾರನೂ ಮುಂಬೈ ಪರ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.
3 / 7
ರೋಹಿತ್ ಶರ್ಮಾ 2011 ರಿಂದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಈ ತಂಡದ ಪರ ಇದುವರೆಗೆ 199 ಪಂದ್ಯಗಳನ್ನು ಆಡಿರುವ ರೋಹಿತ್ಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯ 200ನೇ ಪಂದ್ಯವಾಗಿದೆ.
4 / 7
ವಿಶೇಷವೆಂದರೆ ಇದುವರೆಗೆ ಮುಂಬೈ ಇಂಡಿಯನ್ಸ್ ಪರ ಯಾವುದೇ ಆಟಗಾರ ಐಪಿಎಲ್‌ನಲ್ಲಿ 200 ಪಂದ್ಯಗಳನ್ನು ಆಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಈ ದಾಖಲೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
5 / 7
ರೋಹಿತ್ ನಂತರ ಮುಂಬೈ ಇಂಡಿಯನ್ಸ್ ಪರ ಅಧಿಕ ಪಂದ್ಯಗಳನ್ನಾಡಿದ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ನ ಕೀರಾನ್ ಪೊಲಾರ್ಡ್, 189 ಪಂದ್ಯಗಳನ್ನಾಡಿದ್ದಾರೆ.
6 / 7
ಮೂರನೇ ಸ್ಥಾನದಲ್ಲಿರುವ ಹರ್ಭಜನ್ ಸಿಂಗ್ ಮುಂಬೈ ಪರ 136 ಪಂದ್ಯಗಳನ್ನಾಡಿದ್ದರೆ, 122 ಪಂದ್ಯಗಳನ್ನಾಡಿರುವ ಲಸಿತ್ ಮಾಲಿಂಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ 121 ಪಂದ್ಯಗಳನ್ನಾಡುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
7 / 7
ಮುಂಬೈ ಇಂಡಿಯನ್ಸ್ ಪರ ಇದುವರೆಗೆ 199 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 29.38 ಸರಾಸರಿಯಲ್ಲಿ 5084 ರನ್ ಗಳಿಸಿದ್ದಾರೆ. ಇದಲ್ಲದೆ ಐಪಿಎಲ್ 2013 ರಿಂದ 2023 ರವರೆಗೆ ತಂಡದ ನಾಯಕರಾಗಿದ್ದ ರೋಹಿತ್ ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ್ದರು.