IPL 2024: ಸಿಕ್ಸರ್ಗಳ ಸುರಿಮಳೆ; ಐಪಿಎಲ್‌ನಲ್ಲಿ ಹೊಸ ದಾಖಲೆ ಸೃಷ್ಟಿ
IPL 2024: ಈ ಸೀಸನ್ನ 17 ನೇ ಪಂದ್ಯ ಅಹಮದಾಬಾದ್ ಮೈದಾನದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಟೂರ್ನಿಯ ಇತಿಹಾಸದಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ.
1 / 7
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಇದುವರೆಗೆ ಕೇವಲ 17 ಪಂದ್ಯಗಳಷ್ಟೇ ಮುಗಿದಿವೆ. ಆದರೆ ಈ 17 ಪಂದ್ಯಗಳಲ್ಲಿ ಐಪಿಎಲ್ ಇತಿಹಾಸದಲ್ಲೇ ನಿರ್ಮಾಣವಾಗದ ಕೆಲವು ಅಪರೂಪದ ದಾಖಲೆಗಳು ಸೃಷ್ಟಿಯಾಗಿವೆ. ವಾರದ ಹಿಂದಷ್ಟೇ 11 ವರ್ಷಗಳ ಹಳೆಯ ದಾಖಲೆಯನ್ನು ಎಸ್ಆರ್ಹೆಚ್ ತಂಡ ಮುರಿದಿತ್ತು. ಇದೀಗ ಗುಜರಾತ್ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲೂ ಅಪರೂಪದ ದಾಖಲೆಯೊಂದು ಸೃಷ್ಟಿಯಾಗಿದೆ.
2 / 7
ವಾಸ್ತವವಾಗಿ ಈ ಸೀಸನ್ನ 17 ನೇ ಪಂದ್ಯ ಅಹಮದಾಬಾದ್ ಮೈದಾನದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಟೂರ್ನಿಯ ಇತಿಹಾಸದಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ.
3 / 7
ಅದೆನೆಂದರೆ ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ಸಂಖ್ಯೆಯ ಪಂದ್ಯಗಳಲ್ಲಿ 300ಕ್ಕೂ ಅಧಿಕ ಸಿಕ್ಸರ್‌ಗಳು ಸಿಡಿದಿವೆ. ಈ ಸೀಸನ್ಗೂ ಮೊದಲು ನಡೆದಿದ್ದ 16 ಆವೃತ್ತಿಗಳ ಮೊದಲ 17 ಪಂದ್ಯಗಳಲ್ಲಿ ಸಿಡಿದಿದ್ದ ಸಿಕ್ಸರ್ಗಳಿಗೆ ಹೊಲಿಸಿದರೆ, ಈ ಆವೃತ್ತಿಯಲ್ಲಿ ಅಧಿಕ ಸಿಕ್ಸರ್‌ಗಳು ದಾಖಲಾಗಿವೆ.
4 / 7
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ತಕ್ಷಣ ಈ ಸೀಸನ್‌ನಲ್ಲಿ ಸಿಕ್ಸರ್ಗಳ ತ್ರಿಶಕ ಪೂರ್ಣಗೊಂಡಂತ್ತಾಯಿತು. ಈ ಸೀಸನ್‌ನಲ್ಲಿ ಕೇವಲ 3773 ಎಸೆತಗಳಲ್ಲಿ ಸಿಕ್ಸರ್ಗಳ ತ್ರಿಶತಕ ಪೂರ್ಣಗೊಂಡಿರುವುದು ಬ್ಯಾಟರ್ಗಳ ಅಬ್ಬರಕ್ಕೆ ಹಿಡಿದ ಕೈಗನ್ನಡಿಯಾಗಿದೆ.
5 / 7
ಅಲ್ಲದೆ ಕೇವಲ 3773 ಎಸೆತಗಳಲ್ಲಿ 300 ಸಿಕ್ಸರ್ ಪೂರ್ಣಗೊಂಡಿರುವುದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಹಾಗೆಯೇ ಐಪಿಎಲ್‌ನಲ್ಲಿ 4000 ಎಸೆತಗಳಿಗಿಂತ ಕಡಿಮೆ ಎಸೆತಗಳಲ್ಲಿ 300 ಸಿಕ್ಸರ್‌ಗಳನ್ನು ಪೂರೈಸಿದ್ದು ಇದೇ ಮೊದಲು.
6 / 7
ಇದಕ್ಕೂ ಮೊದಲು, 2018 ರಲ್ಲಿ ಆಡಿದ ಐಪಿಎಲ್ ಸೀಸನ್‌ನಲ್ಲಿ 4578 ಎಸೆತಗಳಲ್ಲಿ 300 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲಾಗಿತ್ತು. ಇದೀಗ ಈ 6 ವರ್ಷಗಳ ಹಿಂದಿನ ದಾಖಲೆಯನ್ನು ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಮುರಿಯಲಾಗಿದೆ.
7 / 7
ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ ಅಂದರೆ 2023 ರ ಸೀಸನ್‌ನಲ್ಲಿ ಆಡಿದ ಮೊದಲ 17 ಪಂದ್ಯಗಳಲ್ಲಿ ಕೇವಲ 259 ಸಿಕ್ಸರ್‌ಗಳನ್ನು ಸಿಡಿಸಲಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಇನ್ನು ಈ ಆವೃತ್ತಿಯಲ್ಲಿ ಇದುವರೆಗೆ ಒಟ್ಟು 312 ಸಿಕ್ಸರ್‌ಗಳು ದಾಖಲಾಗಿವೆ.