- Kannada News Photo gallery Cricket photos IPL 2024 Shreyas Iyer fined Rs 12 lakhs for breaching IPL's Code of Conduct
IPL 2024: ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ಗೆ ಡಬಲ್ ಶಾಕ್..!
IPL 2024 Shreyas Iyer: ಗೆಲ್ಲುವ ಪಂದ್ಯವನ್ನು ಕೈಯ್ಯಾರೆ ಕೈಚೆಲ್ಲಿದ ಆಘಾತದಲ್ಲಿದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಅದರಂತೆ ಅಯ್ಯರ್ ಮತ್ತೊಮ್ಮೆ ಈ ಲೋಪ ಎಸಗಿದರೆ ಪಂದ್ಯದಿಂದಲೇ ಹೊರಗುಳಿಯಬೇಕಾಗುತ್ತದೆ.
Updated on: Apr 17, 2024 | 4:41 PM

ಐಪಿಎಲ್ 2024 ರ 31ನೇ ಪಂದ್ಯದಲ್ಲಿ 223 ರನ್ಗಳ ಬೃಹತ್ ಟಾರ್ಗೆಟ್ ನೀಡಿದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀನಾಯ ಸೋಲು ಅನುಭವಿಸಬೇಕಾಯಿತು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಕೆಕೆಆರ್, ರಾಜಸ್ಥಾನದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಅವರ ಏಕಾಂಗಿ ಹೋರಾಟದಿಂದಾಗಿ ಸೋಲು ಎದುರಿಸಬೇಕಾಯಿತು.

ಗೆಲ್ಲುವ ಪಂದ್ಯವನ್ನು ಕೈಯ್ಯಾರೆ ಕೈಚೆಲ್ಲಿದ ಆಘಾತದಲ್ಲಿದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಅದರಂತೆ ಅಯ್ಯರ್ ಮತ್ತೊಮ್ಮೆ ಈ ಲೋಪ ಎಸಗಿದರೆ ಪಂದ್ಯದಿಂದಲೇ ಹೊರಗುಳಿಯಬೇಕಾಗುತ್ತದೆ.

ವಾಸ್ತವವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ನಿಗದಿತ ಸಮಯಕ್ಕೆ ಓವರ್ ಮುಗಿಸದಿದ್ದಕ್ಕಾಗಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ಗೆ ಪಂದ್ಯ ಶುಲ್ಕದಲ್ಲಿ 12 ಲಕ್ಷ ರೂಗಳನ್ನು ದಂಡವಾಗಿ ವಿಧಿಸಲಾಗಿದೆ.

ಅಯ್ಯರ್ಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಮತ್ತು ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಅವರಿಗೂ ಈ ದಂಡ ವಿಧಿಸಲಾಗಿತ್ತು. ಇದೀಗ ಅಯ್ಯರ್ ಕೂಡ ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಐಪಿಎಲ್ ನಿಯಮದ ಪ್ರಕಾರ ಒಂದು ತಂಡ ಎರಡು ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ಆ ತಂಡದ ನಾಯಕನನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಈಗಾಗಲೇ ಎರಡು ಬಾರಿ ಸ್ಲೋ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಪಂತ್ ಮತ್ತೊಮ್ಮೆ ನಿಯಮ ಉಲ್ಲಂಘಿಸಿದರೆ ಒಂದು ಪಂದ್ಯ ನಿಷೇಧಕ್ಕೆ ಒಳಗಾಗಬೇಕಾಗುತ್ತದೆ.

ಇದೀಗ ಮೊದಲ ಬಾರಿ ಈ ನಿಯಮ ಉಲ್ಲಂಘಿಸಿರುವ ಕೆಕೆಆರ್ ನಾಯಕ ಅಯ್ಯರ್ಗೆ ಒಂದು ಪಂದ್ಯದಲ್ಲಿ ಎರಡು ಆಘಾತಗಳು ಎದುರಾಗಿವೆ. ಮೊದಲನೆಯದ್ದು, ಕೆಕೆಆರ್ ಈ ಪಂದ್ಯದಲ್ಲಿ ಸೋಲಿನೊಂದಿಗೆ 2 ಅಂಕಗಳನ್ನು ಕಳೆದುಕೊಂಡಿದ್ದರೆ, ಎರಡನೇಯದ್ದು ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.




