IPL 2024: ಎಸ್ಆರ್ಹೆಚ್ ತಂಡಕ್ಕೆ ನೂತನ ನಾಯಕ; ಬೌಲಿಂಗ್ ಕೋಚ್ ವಿರಾಮ
IPL 2024: ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಸ್ತುತ ಬೌಲಿಂಗ್ ಕೋಚ್ ಆಗಿರುವ ಡೇಲ್ ಸ್ಟೇನ್ ಮುಂದಿನ ಆವೃತ್ತಿಗೆ ಲಭ್ಯವಿಲ್ಲದಿರುವುದು ಖಚಿತವಾಗಿದೆ. ಇನ್ನೊಂದೆಡೆ ಹಾಲಿ ಕ್ಯಾಪ್ಟನ್ ಏಡೆನ್ ಮಾರ್ಕ್ರಾಮ್ ಅವರನ್ನು ಕೆಳಗಿಳಿಸಿ ಪ್ಯಾಟ್ ಕಮ್ಮಿನ್ಸ್ ಅವರಿಗೆ ಶೀಘ್ರದಲ್ಲೇ ನಾಯಕತ್ವ ಪಟ್ಟಕಟ್ಟಬಹುದೆಂದು ವರದಿಯಾಗಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17 ನೇ ಆವೃತ್ತಿ ಆರಂಭಕ್ಕೂ ಮುನ್ನ ಮಾಜಿ ಚಾಂಪಿಯನ್ ತಂಡವೊಂದು ತನ್ನ ನಾಯಕನ ಬದಲಾವಣೆಗೆ ಮುಂದಾಗಿದೆ. ಹಾಗೆಯೇ ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಈ ಸೀಸನ್ನಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
2 / 6
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಸ್ತುತ ಬೌಲಿಂಗ್ ಕೋಚ್ ಆಗಿರುವ ಡೇಲ್ ಸ್ಟೇನ್ ಮುಂದಿನ ಆವೃತ್ತಿಗೆ ಲಭ್ಯವಿಲ್ಲದಿರುವುದು ಖಚಿತವಾಗಿದೆ. ಇನ್ನೊಂದೆಡೆ ಹಾಲಿ ಕ್ಯಾಪ್ಟನ್ ಏಡೆನ್ ಮಾರ್ಕ್ರಾಮ್ ಅವರನ್ನು ಕೆಳಗಿಳಿಸಿ ಪ್ಯಾಟ್ ಕಮ್ಮಿನ್ಸ್ ಅವರಿಗೆ ಶೀಘ್ರದಲ್ಲೇ ನಾಯಕತ್ವ ಪಟ್ಟಕಟ್ಟಬಹುದೆಂದು ವರದಿಯಾಗಿದೆ.
3 / 6
ವಾಸ್ತವವಾಗಿ ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಕಳೆದ ಹರಾಜಿನಲ್ಲಿ ಹೈದರಾಬಾದ್ 20.5 ಕೋಟಿಗೆ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆ ಪಡೆ ದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಕಮ್ಮಿನ್ಸ್ ಪಾತ್ರರಾಗಿದ್ದರು.
4 / 6
ತಮ್ಮ ನಾಯಕತ್ವದಲ್ಲಿ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡವನ್ನು 2023ರ ಏಕದಿನ ವಿಶ್ವಕಪ್ ಚಾಂಪಿಯನ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ ಮಾಡಿದ್ದರು. ಹಾಗೆಯೇ ತಮ್ಮ ನಾಯಕತ್ವದಲ್ಲೇ ಆಶಸ್ ಸರಣಿಯನ್ನು ಜಯಸಿದ್ದರು. ಹೀಗಾಗಿ ಪ್ಯಾಟ್ ಕಮ್ಮಿನ್ಸ್ ಅವರು SRH ನಾಯಕತ್ವವನ್ನು ಪಡೆಯಲಿದ್ದಾರೆ ಎಂದು Cricbuzz ತನ್ನ ವರದಿಯಲ್ಲಿ ತಿಳಿಸಿದೆ.
5 / 6
ಕಳೆದ ಆವೃತ್ತಿಯಲ್ಲಿ ತಂಡವು ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಅವರನ್ನು ಹೊಸ ನಾಯಕನನ್ನಾಗಿ ಮಾಡಿತ್ತು. ಆದರೆ ಅವರ ನಾಯಕತ್ವದಲ್ಲಿಯೂ ತಂಡ ಯಶಸ್ವಿಯಾಗಿರಲಿಲ್ಲ. ಹೀಗಾಗಿ ನಾಯಕನನ್ನು ಬದಲಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೆಯೇ ಸ್ಟೇನ್ ಅಲಭ್ಯತೆಯಿಂದಾಗಿ ಫ್ರಾಂಚೈಸಿ ಹೊಸ ಬೌಲಿಂಗ್ ಕೋಚ್‌ಗಾಗಿ ಹುಡುಕಾಟ ಆರಂಭಿಸಿದೆ.
6 / 6
ಹೈದರಾಬಾದ್ ತಂಡ: ಏಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಸನ್ವಿರ್ ಸಿಂಗ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಂಡೆ, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನದ್ಕತ್ ಮತ್ತು ಜಾತವೇಧ್ ಸುಬ್ರಹ್ಮಣ್ಯನ್.