IPL 2024: ಪಂಜಾಬ್ ವಿರುದ್ಧ ಮೋಸದಾಟ; ಮುಂಬೈ ತಂಡದ ಪೊಲಾರ್ಡ್, ಡೇವಿಡ್ಗೆ ದಂಡ..!
IPL 2024: ಏಪ್ರಿಲ್ 18 ರಂದು ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಹಾಗೂ ತಂಡದ ಬ್ಯಾಟಿಂಗ್ ಆಲ್ರೌಂಡರ್ ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ.
1 / 7
ಏಪ್ರಿಲ್ 18 ರಂದು ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಹಾಗೂ ತಂಡದ ಬ್ಯಾಟಿಂಗ್ ಆಲ್ರೌಂಡರ್ ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ.
2 / 7
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಐಪಿಎಲ್ ನಿಯಮವನ್ನು ಮುರಿದು ಸ್ಟ್ರೈಕ್ನಲ್ಲಿದ್ದ ಸೂರ್ಯಕುಮಾರ್ಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸನ್ನೆ ಮಾಡಿದ್ದರು. ಈ ಇಬ್ಬರ ಮೋಸದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
3 / 7
ಅಲ್ಲದೆ ಈ ಇಬ್ಬರು ಸನ್ನೆ ನೀಡುತ್ತಿರುವುದನ್ನು ಗಮನಿಸಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್ ಈ ಕೃತ್ಯವನ್ನು ಫೀಲ್ಡ್ ಅಂಪೈರ್ನ ಗಮನಕ್ಕೆ ತಂದಿದ್ದರು. ಆದರೆ ಆ ವೇಳೆ ಫೀಲ್ಡ್ ಅಂಪೈರ್ ಕರನ್ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಇದೀಗ ಈ ಇಬ್ಬರ ನಿಯಮ ಉಲ್ಲಂಘನೆಗೆ ಬಿಸಿಸಿಐ ದಂಡ ವಿಧಿಸಿದೆ.
4 / 7
ಅದರಂತೆ ಈ ಇಬ್ಬರು ಪಂದ್ಯ ಶುಲ್ಕದ ಶೇಕಡಾ 20 ರಷ್ಟು ಸಂಭಾವನೆಯನ್ನು ದಂಡವಾಗಿ ಪಾವತಿಸಬೇಕಿದೆ. ಟಿಮ್ ಡೇವಿಡ್ ಮತ್ತು ಪೊಲಾರ್ಡ್ ಈ ವಿಷಯದಲ್ಲಿ ಮ್ಯಾಚ್ ರೆಫರಿ ಮುಂದೆ ವಿಚಾರಣೆಯ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಆ ನಂತರ ಈ ಇಬ್ಬರಿಗೆ ಈ ದಂಡವನ್ನು ವಿಧಿಸಲಾಗಿದೆ.
5 / 7
ಇನ್ನು ಈ ಇಬ್ಬರಿಗೆ ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡಿರುವ ಐಪಿಎಲ್, ಟಿಮ್ ಡೇವಿಡ್ ಮತ್ತು ಪೊಲಾರ್ಡ್ ನೀತಿ ಸಂಹಿತೆಯ ಆರ್ಟಿಕಲ್ 2.20 ರ ಅಡಿಯಲ್ಲಿ ಹಂತ 1 ಅಪರಾಧವನ್ನು ಮಾಡಿದ್ದಾರೆ. ಈ ಕಾರಣದಿಂದಾಗಿ, ಡೇವಿಡ್ ಮತ್ತು ಪೊಲಾರ್ಡ್ ಅವರ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. ಈ ನೀತಿ ಸಂಹಿತೆಯ ಉಲ್ಲಂಘನೆಯ ಸಂದರ್ಭದಲ್ಲಿ, ಮ್ಯಾಚ್ ರೆಫರಿಯ ನಿರ್ಧಾರವನ್ನು ಅಂತಿಮವೆಂದು ಪರಿಗಣಿಸಲಾಗಿದ್ದು, ಈ ವಿಚಾರದಲ್ಲಿ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
6 / 7
ಅಷ್ಟಕ್ಕೂ ನಡೆದಿದ್ದೇನೆಂದರೆ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 15ನೇ ಓವರ್ ಬೌಲ್ ಮಾಡುತ್ತಿದ್ದರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಸೂರ್ಯಕುಮಾರ್ಗೆ ಈ ಇಬ್ಬರೂ ಡಗೌಟ್‌ನಿಂದ ವೈಡ್ ಬಾಲ್ಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
7 / 7
ಈ ಇಬ್ಬರ ಸನ್ನೆಯ ಬಳಿಕ ಸೂರ್ಯಕುಮಾರ್ ಡಿಆರ್‌ಎಸ್ ತೆಗೆದುಕೊಂಡಿದ್ದರು. ಆ ನಂತರ ಅಂಪೈರ್ ಅದನ್ನು ವೈಡ್ ಎಂದು ಘೋಷಿಸಬೇಕಾಯಿತು. ಈ ಬಗ್ಗೆ ಪಂಜಾಬ್ ಕಿಂಗ್ಸ್ ನಾಯಕ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಇಬ್ಬರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು.