IPL 2024: 6 ಓವರ್​ಗಳಲ್ಲಿ 125 ರನ್! ಎಸ್​ಆರ್​ಹೆಚ್ ಆರಂಭಿಕರ ಸ್ಫೋಟಕ ಬ್ಯಾಟಿಂಗ್

IPL 2024, DC vs SRH: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಸನ್​ ರೈಸರ್ಸ್​ ಹೈದರಾಬಾದ್ ತಂಡ ಮೊದಲ 6 ಓವರ್​ಗಳಲ್ಲಿ ಅಂದರೆ ಪವರ್​ ಪ್ಲೇನಲ್ಲಿ ಬರೋಬ್ಬರಿ 125 ರನ್ ಕಲೆಹಾಕಿದೆ.

ಪೃಥ್ವಿಶಂಕರ
|

Updated on: Apr 20, 2024 | 8:33 PM

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಸನ್​ ರೈಸರ್ಸ್​ ಹೈದರಾಬಾದ್ ತಂಡ ಮೊದಲ 6 ಓವರ್​ಗಳಲ್ಲಿ ಅಂದರೆ ಪವರ್​ ಪ್ಲೇನಲ್ಲಿ ಬರೋಬ್ಬರಿ 125 ರನ್ ಕಲೆಹಾಕಿದೆ.

1 / 6
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಊಹೆಗೂ ನಿಲುಕದ ಆರಂಭ ನೀಡಿದರು. ಈ ಇಬ್ಬರು ಮೊದಲ 6 ಓವರ್​ಗಳಲ್ಲಿ ಪ್ರತಿ ಓವರ್​ಗೆ ತಲಾ 20 ಕ್ಕೂ ಅಧಿಕ ರನ್​ಗಳನ್ನು ಕಲೆಹಾಕಿದರು.

2 / 6
ಡೆಲ್ಲಿ ಪರ ಮೊದಲ ಓವರ್ ಬೌಲ್ ಮಾಡಿದ ಖಲೀಲ್ ಅಹ್ಮದ್ ಈ ಓವರ್​ನಲ್ಲಿ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಲಲಿತ್ ಯಾದವ್ ಬೌಲ್ ಮಾಡಿದ ಎರಡನೇ ಓವರ್​ನಲ್ಲೂ 21 ರನ್ ಬಂದವು.

3 / 6
ನೋಕಿಯಾ ಬೌಲ್ ಮಾಡಿದ 3ನೇ ಓವರ್​ನಲ್ಲೂ 22 ರನ್ ಬಂದವು. ಈ ಮೂಲಕ ಇದೇ ಓವರ್​ನಲ್ಲಿ ಹೈದರಾಬಾದ್​ನ ಮೊತ್ತ 50 ರನ್​ಗಳ ಗಡಿ ದಾಟಿದರೆ, ಇದೇ ಓವರ್​ನಲ್ಲಿ ಟ್ರಾವಿಸ್ ಹೆಡ್ ಕೂಡ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

4 / 6
4ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಲಲಿತ್ ಯಾದವ್ ಈ ಓವರ್​ನಲ್ಲೂ 21 ರನ್ ಬಿಟ್ಟುಕೊಟ್ಟರು. ಐದನೇ ಓವರ್ ಬೌಲ್ ಮಾಡಿದ ಕುಲ್ದೀಪ್ ಯಾದವ್ ಕೂಡ ದುಬಾರಿಯಾಗಿ 20 ರನ್ ಬಿಟ್ಟುಕೊಟ್ಟರು. ಹೀಗಾಗಿ ಹೈದರಾಬಾದ್ ತಂಡ ಐದನೇ ಓವರ್​ನಲ್ಲೇ ಶತಕದ ಗಡಿ ದಾಟಿತು.

5 / 6
ಅಲ್ಲದೆ ಆರಂಭಿಕರಿಬ್ಬರ ಜೊತೆ ಶತಕದ ಜೊತೆಯಾಟ ಕೂಡ ಕಂಡುಬಂತು. ಪವರ್​ ಪ್ಲೇಯ ಕೊನೆಯ ಓವರ್​ನಲ್ಲಿ ಅಂದರೆ 6ನೇ ಓವರ್​ನಲ್ಲೂ 22 ರನ್​ಗಳು ಹರಿದುಬಂದವು. ಮುಖೇಶ್ ಕುಮಾರ್ ಬೌಲ್ ಮಾಡಿದ ಈ ಓವರ್​ನಲ್ಲಿ ಹೆಡ್ ಸತತ 4 ಬೌಂಡರಿಗಳನ್ನು ಬಾರಿಸಿದರು.

6 / 6
Follow us
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ

ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್

ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ