IPL 2024: ‘ಆಟದ ಸಮತೋಲನವನ್ನೇ ಹಾಳು ಮಾಡಿದೆ’; ರೋಹಿತ್ ಹೇಳಿರುವುದರಲ್ಲಿ ತಪ್ಪಿಲ್ಲ ಎಂದ ಕೊಹ್ಲಿ..!

|

Updated on: May 18, 2024 | 5:41 PM

IPL 2024: ಸಿಎಸ್​ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಜಿಯೋ ಸಿನಿಮಾದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಈ ನಿಯಮದಿಂದಾಗಿ ಪ್ರತಿ ಪಂದ್ಯದಲ್ಲೂ 200 ಕ್ಕೂ ಹೆಚ್ಚು ರನ್ ಕಲೆಹಾಕಲಾಗುತ್ತಿದೆ. ಇದನ್ನು ನೋಡಿದ ಬಳಿಕ​ ಬೌಲರ್‌ಗಳು ದಿಕ್ಕು ತೋಚದಂತ್ತಾಗಿದ್ದಾರೆ. ಅವರಿಗೆ ಮುಂದೇನು ಮಾಡಬೇಕು ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

1 / 8
ಈ ಬಾರಿಯ ಐಪಿಎಲ್ ಹಲವು ಕಾರಣಗಳಿಂದ ಸಾಕಷ್ಟು ವಿಶೇಷವಾಗಿತ್ತು. ಅದರಲ್ಲಿ ಪ್ರಮುಖವಾದದ್ದು, ಈ ಸೀಸನ್​ನಲ್ಲಿ ಭಾಗಶಃ ಪಂದ್ಯಗಳು 200ರ ಗಡಿ ದಾಟಿದವು. ಈ ಹಿಂದೆ ನಡೆದ 16 ಆವೃತ್ತಿಗಳಲ್ಲಿ ಈ ರೀತಿಯ ರನ್ ಸುನಾಮಿ ಹರಿದಿರಲಿಲ್ಲ. ಅದಕ್ಕೆ ಪ್ರಮುಖ ಕಾರಣ ಐಪಿಎಲ್​ನಲ್ಲಿ ಹೊಸದಾಗಿ ಜಾರಿಗೆ ತಂದಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮ.

2 / 8
ವಾಸ್ತವವಗಾಗಿ ಕಳೆದ ಆವೃತ್ತಿಯಿಂದ ಈ ನಿಯಮ ಐಪಿಎಲ್​ನಲ್ಲಿ ಜಾರಿಗೆ ಬಂತು. ಆದರೆ ಈ ಬಾರಿ ಚರ್ಚೆಗೆ ಬಂದಷ್ಟು ಕಳೆದ ಬಾರಿ ಈ ನಿಯಮ ಚರ್ಚೆಗೆ ಬಂದಿರಲಿಲ್ಲ. ಈ ಆವೃತ್ತಿಯಲ್ಲಿ ಸ್ಟಾರ್ ಆಟಗಾರರಿಂದ ಹಿಡಿದು, ಅನುಭವಿಗಳು ಕೂಡ ಈ ನಿಯಮ ವಿರುದ್ಧ ಕಿಡಿಕಾರಿದ್ದರು.

3 / 8
ಕೆಲವು ದಿನಗಳ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ಆಲ್‌ರೌಂಡರ್​ಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದಿದ್ದರು. ಆ ನಂತರ ಈ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಇದೀಗ ವಿರಾಟ್ ಕೊಹ್ಲಿ ಕೂಡ ರೋಹಿತ್ ಅಭಿಪ್ರಾಯಕ್ಕೆ ಒಮ್ಮತ ಸೂಚಿಸಿದ್ದಾರೆ.

4 / 8
ಸಿಎಸ್​ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಜಿಯೋ ಸಿನಿಮಾದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಈ ನಿಯಮದಿಂದಾಗಿ ಪ್ರತಿ ಪಂದ್ಯದಲ್ಲೂ 200 ಕ್ಕೂ ಹೆಚ್ಚು ರನ್ ಕಲೆಹಾಕಲಾಗುತ್ತಿದೆ. ಇದನ್ನು ನೋಡಿದ ಬಳಿಕ​ ಬೌಲರ್‌ಗಳ ಪರಿಸ್ಥಿತಿ ಶೋಚನಿಯವಾಗಿದೆ.

5 / 8
ಬೌಲರ್‌ಗಳು ಪ್ರತಿ ಎಸೆತದಲ್ಲೂ ಬೌಂಡರಿ ಅಥವಾ ಸಿಕ್ಸರ್​ಗಳನ್ನು ನೀಡುತ್ತಾರೆ ಎಂದು ಯೋಚಿಸುವುದನ್ನು ನಾನು ಹಿಂದೆಂದೂ ನೋಡಿಲ್ಲ. ಪ್ರತಿಯೊಂದು ತಂಡವೂ ಜಸ್ಪ್ರೀತ್ ಬುಮ್ರಾ ಅಥವಾ ರಶೀದ್ ಖಾನ್ ಅವರಂತಹ ಬೌಲರ್‌ಗಳನ್ನು ಹೊಂದಿಲ್ಲ.

6 / 8
ಇಂಪ್ಯಾಕ್ಟ್ ಪ್ಲೇಯರ್​ನಿಂದಾಗಿ ತಂಡದಲ್ಲಿ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ ಇರುವ ಕಾರಣದಿಂದಾಗಿ ಪವರ್‌ಪ್ಲೇನಲ್ಲಿ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಲಾಗುತ್ತಿದೆ. ತಂಡದಲ್ಲಿ 8 ನೇ ಕ್ರಮಾಂಕದವರೆಗೆ ಬ್ಯಾಟರ್ ಇದ್ದಾರೆ ಎಂಬುದು ಇದಕ್ಕೆ ಪ್ರಮುಖ ಕಾರಣವಾಗಿದೆ.

7 / 8
ಕ್ರಿಕೆಟ್‌ನಲ್ಲಿ ಈ ರೀತಿಯ ಪ್ರಾಬಲ್ಯ ದೊಡ್ಡ ಮಟ್ಟದಲ್ಲಿ ಆಗಬಾರದು ಎಂದು ನಾನು ಭಾವಿಸುತ್ತೇನೆ. ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನ ಕಾಯ್ದುಕೊಳ್ಳಲು ನಾವು ಪ್ರಯತ್ನಿಸಬೇಕು. ನಾನು ರೋಹಿತ್ ಹೇಳಿಕೆಯನ್ನು ಬೆಂಬಲಿಸುತ್ತೇನೆ ಏಕೆಂದರೆ ಮನರಂಜನೆಯು ಆಟದ ಒಂದು ಅಂಶವಾಗಿದೆ ಆದರೆ ನಾವು ಸಹ ಸಮತೋಲನವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

8 / 8
ಬಿಸಿಸಿಐ ಈ ನಿಯಮವನ್ನು ಪರಿಶೀಲಿಸುತ್ತದೆ ಎಂಬ ವಿಶ್ವಾಸ ನನಗಿದೆ ಮತ್ತು ಆಟದಲ್ಲಿ ಸಮತೋಲನ ಕಾಯ್ದುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುವುದು ಸೂಕ್ತ. ಕ್ರಿಕೆಟ್‌ನಲ್ಲಿ ಕೇವಲ ಬೌಂಡರಿ ಅಥವಾ ಸಿಕ್ಸರ್‌ಗಳನ್ನು ಸಿಡಿಸುವುದು ರೋಚಕವಲ್ಲ. ಬದಲಿಗೆ 160 ರನ್ ಗಳಿಸಿ ಪಂದ್ಯ ಗೆದ್ದಿರುವುದು ಕೂಡ ರೋಚಕವಾಗಿದೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.