Breaking: ಆರ್​ಸಿಬಿಗೆ ಬಿಗ್ ಶಾಕ್; ತಂಡ ತೊರೆದ ವಿಲ್ ಜಾಕ್ಸ್, ರೀಸ್ ಟೋಪ್ಲಿ..!

|

Updated on: May 13, 2024 | 8:23 PM

IPL 2024: ಪ್ಲೇಆಫ್‌ಗೇರುವ ಗುರಿಯೊಂದಿಗೆ ಸತತ 5 ಪಂದ್ಯಗಳನ್ನು ಗೆದ್ದು ನಿರ್ಣಾಯಕ ಹಂತಕ್ಕೆ ಬಂದು ನಿಂತಿರುವ ಆರ್​ಸಿಬಿ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಬ್ಯಾಟಿಂಗ್‌ ಜೀವಾಳ ಎನಿಸಿಕೊಂಡಿರುವ ಇಂಗ್ಲೆಂಡ್​ನ ಸ್ಟಾರ್ ಬ್ಯಾಟರ್ ವಿಲ್ ಜಾಕ್ಸ್ ಹಾಗೂ ವೇಗಿ ರೀಸ್ ಟೋಪ್ಲಿ ತಮ್ಮ ತವರಿಗೆ ವಾಪಸ್ಸಾಗಿದ್ದಾರೆ.

1 / 8
ಪ್ಲೇಆಫ್‌ಗೇರುವ ಗುರಿಯೊಂದಿಗೆ ಸತತ 5 ಪಂದ್ಯಗಳನ್ನು ಗೆದ್ದು ನಿರ್ಣಾಯಕ ಹಂತಕ್ಕೆ ಬಂದು ನಿಂತಿರುವ ಆರ್​ಸಿಬಿ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಬ್ಯಾಟಿಂಗ್‌ ಜೀವಾಳ ಎನಿಸಿಕೊಂಡಿರುವ ಇಂಗ್ಲೆಂಡ್​ನ ಸ್ಟಾರ್ ಬ್ಯಾಟರ್ ವಿಲ್ ಜಾಕ್ಸ್ ಹಾಗೂ ವೇಗಿ ರೀಸ್ ಟೋಪ್ಲಿ ತಮ್ಮ ತವರಿಗೆ ವಾಪಸ್ಸಾಗಿದ್ದಾರೆ.

2 / 8
ಈ ಇಬ್ಬರಲ್ಲಿ ವಿಲ್ ಜಾಕ್ಸ್ ಅಲಭ್ಯತೆ ಆರ್​ಸಿಬಿಗೆ ಬರಸಿಡಿಲು ಬಡಿದಂತ್ತಾಗಿದೆ. ಏಕೆಂದರೆ ಆರ್​ಸಿಬಿ ಪ್ಲೇಆಫ್‌ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಮೇ 18 ರಂದು ನಡೆಯಲ್ಲಿರುವ ಸಿಎಸ್​ಕೆ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಆದರೆ ಆ ಪಂದ್ಯಕ್ಕೂ ಮುನ್ನ ಈ ಇಬ್ಬರು ಆಂಗ್ಲ ಆಟಗಾರರು ತಂಡವನ್ನು ತೊರೆದಿದ್ದಾರೆ.

3 / 8
ಈ ಬಗ್ಗೆ ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿಲ್ ಜಾಕ್ಸ್ ಹಾಗೂ ರೀಸ್ ಟೋಪ್ಲಿ ಅವರು ಅಂತರಾಷ್ಟ್ರೀಯ ಕರ್ತವ್ಯಗಳಿಗಾಗಿ ತವರಿಗೆ ಮರಳುತ್ತಿದ್ದಾರೆ. ಹೀಗಾಗಿ ನಾವು ಅವರಿಗೆ ಶುಭ ಹಾರೈಸುತ್ತೇವೆ. ಈ ಐಪಿಎಲ್ ಶಿಬಿರದಲ್ಲಿ ಮತ್ತು ಮೈದಾನದಲ್ಲಿ ನೀವಿಬ್ಬರು ಅದ್ಭುತ ಆಟ ಪ್ರದರ್ಶಿಸಿದ್ದೀರಿ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ಬರೆದುಕೊಂಡಿದೆ.

4 / 8
ವರದಿ ಪ್ರಕಾರ ಭಾನುವಾರದಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ ಈ ಇಬ್ಬರು ಆಟಗಾರರು ಇಂಗ್ಲೆಂಡ್‌ಗೆ ವಿಮಾನ ಹತ್ತಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರಲ್ಲದೆ, ಇಂಗ್ಲೆಂಡ್​ನ ಇತರ ಆಟಗಾರರಾದ ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

5 / 8
ವಾಸ್ತವವಾಗಿ ಇದೇ ಮೇ 22 ರಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಮುಂಬರುವ ಟಿ20 ವಿಶ್ವಕಪ್​ಗೆ ಸಿದ್ದತೆ ಮಾಡಿಕೊಳ್ಳಲು ಇಂಗ್ಲೆಂಡ್ ತಂಡಕ್ಕೆ ಇದು ಪ್ರಮುಖ ಸರಣಿಯಾಗಿದೆ. ಹೀಗಾಗಿ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿರುವ ತಂಡದಲ್ಲಿರುವ ಆಟಗಾರರು ಇದೀಗ ಐಪಿಎಲ್ ತೊರೆದು ಸ್ವದೇಶಕ್ಕೆ ಮರಳುತ್ತಿದ್ದಾರೆ.

6 / 8
ಮೇಲೆ ಹೇಳಿದಂತೆ ರೀಸ್ ಟೋಪ್ಲಿ ಅಲಭ್ಯತೆ ಆರ್​ಸಿಬಿಗೆ ಹೆಚ್ಚು ಕಾಡಲಾರದು. ಏಕೆಂದರೆ ಈ ಆಟಗಾರ ಕೆಲವು ಆರಂಭಿಕ ಪಂದ್ಯಗಳನ್ನು ಮಾತ್ರ ಆಡಿದ್ದರು. ಆದರೆ ಅವರ ಪ್ರದರ್ಶನ ಕಳಪೆಯಾಗಿದ್ದರಿಂದ ಅವರನ್ನು ತಂಡದಿಂದ ಹೊರಗಿಡಲಾಗಿತ್ತು.

7 / 8
ಆದರೆ ವಿಲ್ ಜಾಕ್ಸ್ ಅನುಪಸ್ಥಿತಿ ಆರ್​ಸಿಬಿಗೆ ಮರ್ಮಾಘಾತ ನೀಡಿದೆ. ಏಕೆಂದರೆ ಆರ್​ಸಿಬಿ ಸತತ ಐದು ಗೆಲುವು ದಾಖಲಿಸುವಲ್ಲಿ ಜಾಕ್ಸ್ ಪಾತ್ರವೂ ಇದೆ. ಗುಜರಾತ್ ಟೈಟಾನ್ಸ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ್ದ ಜಾಕ್ಸ್, ನಿನ್ನೆಯ ಪಂದ್ಯದಲ್ಲಿ ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 41 ರನ್​ಗಳ ಅವಶ್ಯಕ ಇನ್ನಿಂಗ್ಸ್ ಆಡಿದ್ದರು. ಆದರೀಗ ಅವರ ಅನುಪಸ್ಥಿತಿ ತಂಡವನ್ನು ಕಾಡುವುದಂತೂ ಸತ್ಯ.

8 / 8
ಐಪಿಎಲ್‌ನ ಲೀಗ್ ಹಂತದಲ್ಲಿ ಆರ್‌ಸಿಬಿಗೆ ಕೇವಲ ಒಂದು ಪಂದ್ಯ ಮಾತ್ರ ಉಳಿದಿದ್ದು, ತಮ್ಮ ಮುಂದಿನ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯಕ್ಕೆ​ ವಿಲ್ ಜಾಕ್ಸ್ ಬದಲಿ ಆಟಗಾರನನ್ನು ಆರ್​ಸಿಬಿ ಇದೀಗ ಹುಡುಕಬೇಕಾಗಿದ್ದು, ವಿಲ್ ಜಾಕ್ಸ್ ಬದಲಿಗೆ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಅವಕಾಶ ನೀಡಬಹುದಾಗಿದೆ.

Published On - 7:58 pm, Mon, 13 May 24