IPL 2024: ಪ್ಲೇಆಫ್ ರೇಸ್​ನಿಂದ ಮೂರು ತಂಡಗಳು ಔಟ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್​ 2024) ಸೀಸನ್ 17 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತದತ್ತ ಸಾಗುತ್ತಿದೆ. ಇನ್ನುಳಿದಿರುವುದು ಕೇವಲ 7 ಮ್ಯಾಚ್​ಗಳು ಮಾತ್ರ. ಈ ಏಳು ಪಂದ್ಯಗಳಲ್ಲಿ ಪ್ಲೇಆಫ್ ಆಡಲಿರುವ ಉಳಿದ ಮೂರು ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ. ಅಂದರೆ ಕೆಕೆಆರ್ ತಂಡವು ಈಗಾಗಲೇ ಪ್ಲೇಆಫ್ ಪ್ರವೇಶಿಸಿದ್ದು, ಇನ್ನುಳಿದ ಮೂರು ಸ್ಥಾನಗಳಿಗಾಗಿ 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 14, 2024 | 6:52 AM

ಇಂಡಿಯನ್ ಪ್ರೀಮಿಯರ್ ಲೀಗ್​ನ​ (IPL 2024) 17ನೇ ಆವೃತ್ತಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 63 ಪಂದ್ಯಗಳು ಮುಗಿದಿದ್ದು, ಈ ವೇಳೆಗೆ ಒಂದು ತಂಡ ಪ್ಲೇಆಫ್​​ಗೆ ಅರ್ಹತೆ ಪಡೆದುಕೊಂಡರೆ, ಮೂರು ತಂಡಗಳು ಹೊರಬಿದ್ದಿದೆ.

1 / 6
ಇಲ್ಲಿ 13 ಪಂದ್ಯಗಳಲ್ಲಿ 9 ಜಯ, 3 ಸೋಲುಗಳೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಒಟ್ಟು 19 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ ಅಧಿಕೃತವಾಗಿ ಪ್ಲೇಆಫ್​ಗೆ ಪ್ರವೇಶಿಸಿದೆ.

2 / 6
ಮತ್ತೊಂದೆಡೆ 12 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿ, 8 ಸೋಲನುಭವಿಸಿರುವ ಪಂಜಾಬ್ ಕಿಂಗ್ಸ್ ತಂಡ ಪ್ಲೇಆಫ್​ನಿಂದ ಹೊರಬಿದ್ದಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಇನ್ನೆರಡು ಪಂದ್ಯಗಳಿದ್ದು, ಈ ಮ್ಯಾಚ್​ಗಳಲ್ಲಿ ಗೆದ್ದರೂ ಪ್ಲೇಆಫ್​ಗೆ ಅರ್ಹತೆ ಪಡೆಯುವುದಿಲ್ಲ.

3 / 6
ಹಾಗೆಯೇ 13 ಮ್ಯಾಚ್​ಗಳಲ್ಲಿ 4 ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಐಪಿಎಲ್​ನಿಂದ ಹೊರಬಿದ್ದಿದೆ. ಈಗಾಗಲೇ 9 ಸೋಲನುಭವಿಸಿರುವ ಮುಂಬೈ ಪಡೆ ಕೊನೆಯ ಪಂದ್ಯದಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಿಸಲು ಅವಕಾಶವಿಲ್ಲ.

4 / 6
ಇನ್ನು ಪ್ಲೇಆಫ್ ರೇಸ್​ನಲ್ಲಿದ್ದ ಗುಜರಾತ್ ಟೈಟಾನ್ಸ್ ಪಾಲಿಗೆ ವರುಣ ಅವಕೃಪೆ ತೋರಿದ್ದಾನೆ. ಸೋಮವಾರ ಕೆಕೆಆರ್ ವಿರುದ್ಧ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದ್ದು, ಹೀಗಾಗಿ ಪಂದ್ಯವನ್ನು ರದ್ದು ಮಾಡಲಾಗಿದೆ. ಪಂದ್ಯದ ರದ್ದಾದ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಇದರೊಂದಿಗೆ 11 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ಕೂಡ ಪ್ಲೇಆಫ್ ರೇಸ್​ನಿಂದ ಹೊರಬಿದ್ದಂತಾಗಿದೆ.

5 / 6
ಸದ್ಯ ಪ್ಲೇಆಫ್ ರೇಸ್​ನಲ್ಲಿ ರಾಜಸ್ಥಾನ್ ರಾಯಲ್ಸ್, ಸಿಎಸ್​ಕೆ, ಎಸ್​ಆರ್​ಹೆಚ್, ಆರ್​ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳಿವೆ. ಈ ಆರು ತಂಡಗಳಲ್ಲಿ ಮೂರು ತಂಡಗಳು ಪ್ಲೇಆಫ್​ ಪ್ರವೇಶಿಸಲಿದ್ದು, ಇದರಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡ ಕೆಕೆಆರ್ ವಿರುದ್ಧ ಕ್ವಾಲಿಫೈಯರ್ ಪಂದ್ಯವಾಡಲಿದೆ.

6 / 6
Follow us
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್