IPL 2025: ಈ 7 ಆಟಗಾರರ ಅದೃಷ್ಟ ಬದಲಿಸಿದ ಈ ಬಾರಿಯ ಐಪಿಎಲ್

Updated on: Apr 16, 2025 | 8:39 PM

IPL 2025: ಐಪಿಎಲ್ 2025ರಲ್ಲಿ ಏಳು ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಪ್ರದರ್ಶನ ನೀಡಿದ್ದಾರೆ. ತಮ್ಮ ಆಮೋಘ ಆಟದ ಮೂಲಕ ವರ್ಷಗಳ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಧೋನಿ, ಕರಣ್ ಶರ್ಮಾ, ಜೋಫ್ರಾ ಆರ್ಚರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್, ಕ್ವಿಂಟನ್ ಡಿ ಕಾಕ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಯಶಸ್ಸು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

1 / 8
ಇಲ್ಲಿಯವರೆಗೆ ಐಪಿಎಲ್ 2025 ಏಳು ಆಟಗಾರರ ಅದೃಷ್ಟ ಬದಲಿಸಿದೆ ಎಂದರೆ ತಪ್ಪಾಗಲಾರದು. ಕಳೆದ ಕೆಲವು ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಪರಿಣಾಮಕಾರಿಯಾಗದೆ ವೃತ್ತಿಜೀವನದ ಅಂತ್ಯದಲ್ಲಿದ್ದ ಈ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

2 / 8
ಈ ಬಾರಿಯ ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟ್ ಅಬ್ಬರಿಸುತ್ತಿದೆ. ಧೋನಿ ಹೊರತುಪಡಿಸಿ, ಕರಣ್ ಶರ್ಮಾ, ಜೋಫ್ರಾ ಆರ್ಚರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್, ಕ್ವಿಂಟನ್ ಡಿ ಕಾಕ್ ಮತ್ತು ಯುಜ್ವೇಂದ್ರ ಚಾಹಲ್ ಈ ಸೀಸನ್​ನಲ್ಲಿ ತಮಗೆ ಸಿಕ್ಕ ಎರಡನೇ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವರ್ಷಗಳ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

3 / 8
ಈ ಏಳು ಆಟಗಾರರಲ್ಲಿ ಯಾರು ಎಷ್ಟು ವರ್ಷಗಳ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು ಎಂಬುದನ್ನು ನೋಡುವುದಾದರೆ.. ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಕರಣ್ ಶರ್ಮಾ, 8 ವರ್ಷಗಳ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂದರೆ, ಅವರು ಕೊನೆಯ ಬಾರಿಗೆ ಐಪಿಎಲ್ 2017 ರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

4 / 8
ಕರಣ್ ಶರ್ಮಾ ಅವರಲ್ಲದೆ, ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಜೋಫ್ರಾ ಆರ್ಚರ್ 7 ವರ್ಷಗಳ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ, ಈ ಮಧ್ಯೆ, ಜೋಫ್ರಾ ಆರ್ಚರ್ ಗಾಯದಿಂದಾಗಿ 2-3 ಐಪಿಎಲ್​ ಸೀಸನ್‌ಗಳನ್ನು ಸರಿಯಾಗಿ ಆಡಿರಲಿಲ್ಲ.

5 / 8
ಜೋಫ್ರಾ ಆರ್ಚರ್ ಅಲ್ಲದೆ ರಾಜಸ್ಥಾನ ರಾಯಲ್ಸ್ ತಂಡದ ನಿತೀಶ್ ರಾಣಾ 4 ವರ್ಷಗಳ ನಂತರ ಐಪಿಎಲ್ 2025 ರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಕೊನೆಯ ಬಾರಿಗೆ ಕೆಕೆಆರ್ ಪರ ಆಡುವಾಗ ಈ ಪ್ರಶಸ್ತಿಯನ್ನು ಗೆದ್ದಿದ್ದ ರಾಣಾ ಕಳೆದ ಸೀಸನ್​ವರೆಗೂ ಕೆಕೆಆರ್ ತಂಡದ ಭಾಗವಾಗಿದ್ದರು.

6 / 8
ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2025 ರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವ ಕಾಯುವಿಕೆಯನ್ನು ಕೊನೆಗೊಳಿಸಿದ್ದಲ್ಲದೆ, ಹೊಸ ದಾಖಲೆಯನ್ನೂ ಸೃಷ್ಟಿಸಿದರು. 2019 ರ ನಂತರ ಮೊದಲ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಧೋನಿ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

7 / 8
ಐಪಿಎಲ್ 2025 ರಲ್ಲಿ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲದ ತಮ್ಮ 4 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಕಳೆದ ಬಾರಿ ತನ್ನ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಚಾಂಪಿಯನ್ ಮಾಡಿದ್ದರಾದರೂ ಅಯ್ಯರ್​ಗೆ ಪಂದ್ಯ ಶ್ರೇಷ್ಠ ಸಿಕ್ಕಿರಲಿಲ್ಲ. ಆದರೀಗ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವಹಿಸಿಕೊಂಡ ಬಳಿಕ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.

8 / 8
ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಕ್ವಿಂಟನ್ ಡಿ ಕಾಕ್ ಕೂಡ 3 ವರ್ಷಗಳ ನಂತರ ಈ ವರ್ಷ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಡಿ ಕಾಕ್ ಅವರಂತೆಯೇ, ಮೂರು ವರ್ಷಗಳ ನಂತರ, ಯುಜ್ವೇಂದ್ರ ಚಾಹಲ್ ಕೂಡ ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.