ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೋಕ್; ಬದಲಿಯಾಗಿ ಬಂದಿದ್ಯಾರು ಗೊತ್ತಾ?

Updated on: Jul 13, 2024 | 8:53 PM

IPL 2025, Delhi Capitals: ವಾಸ್ತವವಾಗಿ 2018 ರಲ್ಲಿ ಮುಖ್ಯ ಕೋಚ್ ಹುದ್ದೆಗೇರಿದ್ದ ಪಾಂಟಿಂಗ್​ಗೆ ಪ್ರತಿ ಆವೃತ್ತಿಗೆ 3.5 ಕೋಟಿ ರೂ. ವೇತನ ನೀಡಲಾಗುತ್ತಿತ್ತು. ಆದರೆ ಪಾಂಟಿಂಗ್ ಅಧಿಕಾರಾವಧಿಯಲ್ಲಿ ತಂಡದ ಪ್ರದರ್ಶನ ಅಷ್ಟಕಷ್ಟೆ. ಕಳೆದ ಆವೃತ್ತಿಯಲ್ಲಂತೂ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದೆ ಆರನೇ ಸ್ಥಾನವನ್ನು ಪಡೆದುಕೊಂಡಿತ್ತು. ಹೀಗಾಗಿ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ.

1 / 7
2025 ರ ಐಪಿಎಲ್​ಗೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಆದರೆ ಅದಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಅದರಂತೆ ತಂಡದ ಮೊದಲ ವಿಕೆಟ್ ಪತನವಾಗಿದ್ದು, 2018 ರಿಂದ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಿಕಿ ಪಾಂಟಿಂಗ್ ಅವರ ತಲೆದಂಡವಾಗಿದೆ.

2025 ರ ಐಪಿಎಲ್​ಗೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಆದರೆ ಅದಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಅದರಂತೆ ತಂಡದ ಮೊದಲ ವಿಕೆಟ್ ಪತನವಾಗಿದ್ದು, 2018 ರಿಂದ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಿಕಿ ಪಾಂಟಿಂಗ್ ಅವರ ತಲೆದಂಡವಾಗಿದೆ.

2 / 7

ವಾಸ್ತವವಾಗಿ 2018 ರಲ್ಲಿ ಮುಖ್ಯ ಕೋಚ್ ಹುದ್ದೆಗೇರಿದ್ದ ಪಾಂಟಿಂಗ್​ಗೆ ಪ್ರತಿ ಆವೃತ್ತಿಗೆ 3.5 ಕೋಟಿ ರೂ. ವೇತನ ನೀಡಲಾಗುತ್ತಿತ್ತು. ಆದರೆ ಪಾಂಟಿಂಗ್ ಅಧಿಕಾರಾವಧಿಯಲ್ಲಿ ತಂಡದ ಪ್ರದರ್ಶನ ಅಷ್ಟಕಷ್ಟೆ. ಕಳೆದ ಆವೃತ್ತಿಯಲ್ಲಂತೂ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದೆ ಆರನೇ ಸ್ಥಾನವನ್ನು ಪಡೆದುಕೊಂಡಿತ್ತು.

3 / 7

ಇದೀಗ ರಿಕಿ ಪಾಂಟಿಂಗ್ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿರುವ ಬಗ್ಗೆ ಕಾರಣ ನೀಡಿರುವ ಫ್ರಾಂಚೈಸಿ, ತಂಡದ ಕಳಪೆ ಪ್ರದರ್ಶನವನ್ನು ಗಮದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಫ್ರಾಂಚೈಸಿಯ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ.

4 / 7

ಸೌರವ್ ಗಂಗೂಲಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅದರ ಸುಧಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳುವುದು ಅವರ ಕೆಲಸ.

5 / 7

ಪಾಂಟಿಂಗ್ ಮುಖ್ಯ ಕೋಚ್ ಆದ ನಂತರ, ತಂಡವು ಹೆಚ್ಚಿನ ಯಶಸ್ಸನ್ನು ಸಾಧಿಸಲಿಲ್ಲ. ಪಾಂಟಿಂಗ್ ಕೋಚ್ ಆದರೂ ಡೆಲ್ಲಿ ತಂಡವು ಸತತ ಮೂರನೇ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಜಿ ನಾಯಕನ ವಿರುದ್ಧ ಗಂಗೂಲಿ ಕ್ರಮ ಕೈಗೊಂಡಿದ್ದಾರೆ.

6 / 7

ಅಷ್ಟೇ ಅಲ್ಲದೆ ಇದೀಗ ರಿಕಿ ಪಾಂಟಿಂಗ್ ಅವರಿಂದ ತೆರವಾಗಿರುವ ಈ ಸ್ಥಾನವನ್ನು ಅಂದರೆ ಮುಖ್ಯ ಕೋಚ್ ಹುದ್ದೆಯನ್ನು ಸ್ವತಃ ಗಂಗೂಲಿ ಅವರೇ ನಿರ್ವಹಿಸಲಿದ್ದಾರೆ. ಫ್ರಾಂಚೈಸಿಯು ಪಾಂಟಿಂಗ್ ಅವರನ್ನು ತೆಗೆದುಹಾಕಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದು, ಪಾಂಟಿಂಗ್ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ.

7 / 7

ರಿಕಿ ಪಾಂಟಿಂಗ್ 7 ಸೀಸನ್​ಗಳಲ್ಲಿ ಈ ಜವಾಬ್ದಾರಿಯನ್ನು ನಿಭಾಯಿಸಿದ್ದು, ಇದರಲ್ಲಿ 2020 ರಲ್ಲಿ ಒಮ್ಮೆ ಮಾತ್ರ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಯಿತು. ಆದರೆ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋತಿತ್ತು. ಆ ನಂತರ ಇವರ ಅವಧಿಯಲ್ಲಿ ಡೆಲ್ಲಿ ತಂಡ ಮೊದಲ ಸೀಸನ್‌ನಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆ ನಂತರ ತಂಡ 2019, 2020 ಮತ್ತು 2021 ರಲ್ಲಿ ಪ್ಲೇ-ಆಫ್‌ಗೆ ಅರ್ಹತೆ ಪಡೆದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಅದರ ನಂತರ, 3 ಸೀಸನ್‌ಗಳಲ್ಲಿ ಪ್ಲೇ-ಆಫ್ ತಲುಪುವಲ್ಲಿ ಯಶಸ್ವಿಯಾಗಲಿಲ್ಲ.

Published On - 8:51 pm, Sat, 13 July 24

Loading...
Unable to load recommendations.
Follow Us