Sign In

By signing in or creating an account, you agree with Associated Broadcasting Company's Terms & Conditions and Privacy Policy.

James Anderson: ವಿಶ್ವ ದಾಖಲೆಗಳೊಂದಿಗೆ ವಿದಾಯ ಹೇಳಿದ ಜೇಮ್ಸ್ ಅ್ಯಂಡರ್ಸನ್

James Anderson Retirement: ಇಂಗ್ಲೆಂಡ್ ಪರ 188 ಟೆಸ್ಟ್ ಪಂದ್ಯಗಳನ್ನಾಡಿರುವ 41ರ ಹರೆಯದ ಜೇಮ್ಸ್ ಅ್ಯಂಡರ್ಸನ್ (ಜಿಮ್ಮಿ) ಒಟ್ಟು 40037 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 18627 ರನ್ ನೀಡುವ ಮೂಲಕ ಒಟ್ಟು 704 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 13, 2024 | 7:23 AM

ವಿಶ್ವ ಕ್ರಿಕೆಟ್ ಕಂಡಂತಹ ಅಪ್ರತಿಮ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್ (James Anderson) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಯುವ ಮೂಲಕ ಅ್ಯಂಡರ್ಸನ್ ತಮ್ಮ ವಿದಾಯ ಪಂದ್ಯವಾಡಿದರು. ಈ ಪಂದ್ಯದಲ್ಲಿ 26.4 ಓವರ್​ಗಳನ್ನು ಎಸೆದಿದ್ದ ಜಿಮ್ಮಿ ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದಾರೆ.

1 / 7
ಇನ್ನು ವಿದಾಯ ಪಂದ್ಯದಲ್ಲಿ ಜೇಮ್ಸ್ ಅ್ಯಂಡರ್ಸನ್​ ವಿಶೇಷ ವಿಶ್ವ ದಾಖಲೆಯನ್ನೂ ಸಹ ಬರೆದಿದ್ದಾರೆ. ಅದು ಸಹ ಯಾರಿಂದಲೂ ಸಾಧ್ಯವಾಗದ ಅಪರೂಪದ ದಾಖಲೆ ಎಂಬುದು ವಿಶೇಷ. ಹೀಗೆ ತಮ್ಮ 21 ವರ್ಷದ ಟೆಸ್ಟ್ ವೃತ್ತಿಜೀವನದಲ್ಲಿ ಜಿಮ್ಮಿ ಬರೆದ ಕೆಲ ಐತಿಹಾಸಿಕ ದಾಖಲೆಗಳ ಪಟ್ಟಿ ಇಲ್ಲಿದೆ...

2 / 7
40  ಸಾವಿರ ಬಾಲ್: ಟೆಸ್ಟ್ ಕ್ರಿಕೆಟ್'ನ ತಮ್ಮ ಕೊನೆಯ ಪಂದ್ಯದಲ್ಲಿ ಜೇಮ್ಸ್ ಅ್ಯಂಡರ್ಸನ್ 40 ಸಾವಿರ ಬಾಲ್ ಗಳನ್ನು ಪೂರೈಸಿದ್ದು ವಿಶೇಷ. ತಮ್ಮ ಕೆರಿಯರ್ ನಲ್ಲಿ ಒಟ್ಟು 40037 ಎಸೆತಗಳನ್ನು ಎಸೆಯುವ ಮೂಲಕ ಈ ಸಾಧನೆ ಮಾಡಿದ ಏಕೈಕ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

3 / 7
ಕ್ಲೀನ್ ಬೌಲ್ಡ್: ಈ ಪಂದ್ಯದಲ್ಲಿ ಜೇಮ್ಸ್ ಅ್ಯಂಡರ್ಸನ್ ಕ್ರೈಗ್ ಬ್ರಾಥ್​ವೈಟ್​ರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಕ್ಲೀನ್ ಬೌಲ್ಡ್ ಮಾಡಿದ ವೇಗಿ ಎಂಬ ವಿಶ್ವ ದಾಖಲೆಯನ್ನು ಜಿಮ್ಮಿ ನಿರ್ಮಿಸಿದ್ದಾರೆ. ಜೇಮ್ಸ್ ಅ್ಯಂಡರ್ಸನ್ ಒಟ್ಟು 137 ಬಾರಿ ಕ್ಲೀನ್ ಬೌಲ್ಡ್ ವಿಕೆಟ್ ಪಡೆದಿದ್ದಾರೆ.

4 / 7
ಕ್ರಿಕೆಟ್ ಕಾಶಿಯ ಕಿಂಗ್: ಲಾರ್ಡ್ಸ್ ಮೈದಾನದಲ್ಲಿ ಚೊಚ್ಚಲ ಪಂದ್ಯವಾಡುವ ಮೂಲಕ ಕೆರಿಯರ್ ಆರಂಭಿಸಿದ ಜೇಮ್ಸ್ ಅ್ಯಂಡರ್ಸನ್ ಅಂತಿಮ ಪಂದ್ಯದಲ್ಲಿ ಅದೇ ಮೈದಾನದಲ್ಲಿ ವಿಶ್ವ ದಾಖಲೆ ಬರೆದರು. ಕೊನೆಯ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಮೈದಾನದಲ್ಲಿ ಜಿಮ್ಮಿ ಒಟ್ಟು 123 ವಿಕೆಟ್ ಪಡೆದಿದ್ದಾರೆ.

5 / 7
ಕ್ಯಾಚ್ ಔಟ್: ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಔಟ್ ಮಾಡಿದ ಬೌಲರ್ ಎಂಬ ದಾಖಲೆ ಕೂಡ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದೆ. 188 ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಜಿಮ್ಮಿ ಒಟ್ಟು 468 ಬ್ಯಾಟ್ಸ್‌ಮನ್‌ ಗಳನ್ನು ಕ್ಯಾಚ್ ಔಟ್ ಮಾಡಿದ್ದಾರೆ.

6 / 7
ವಿಶ್ವದ ಮೊದಲ ವೇಗಿ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 700+ ವಿಕೆಟ್ ಪಡೆದ ಏಕೈಕ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್. 350 ಟೆಸ್ಟ್ ಇನಿಂಗ್ಸ್​ಗಳಿಂದ 704 ವಿಕೆಟ್ ಕಬಳಿಸಿ ಅಳಿಸಿ ಹಾಕಲಾಗದಂತಹ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಎಲ್ಲಾ ವಿಶ್ವ ದಾಖಲೆಗಳೊಂದಿಗೆ ಸ್ವಿಂಗ್ ಮಾಸ್ಟರ್ ತಮ್ಮ 41ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ.

7 / 7
Follow us
ಮದ್ಯವ್ಯಸನಿ ಮಗನಿಗೆ ಬೈಕ್ ಕೊಡಿಸಿದರೆ ಅಪಾಯ ತಪ್ಪಲ್ಲ ಅಂದುಕೊಂಡಿದ್ದ ತಂದೆ

ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ

ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!

ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ

ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ

‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​

15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್

ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ

Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ