IPL 2025: ನಾಲ್ಕು ತಂಡಗಳಿಗೆ ಡ್ವೇನ್ ಬ್ರಾವೊ ಮೆಂಟರ್

|

Updated on: Oct 06, 2024 | 10:30 AM

Dwayne Bravo: ಟಿ20 ಕ್ರಿಕೆಟ್​ನಲ್ಲಿ ಡ್ವೇನ್ ಬ್ರಾವೊ ಒಟ್ಟು 582 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 6970 ರನ್ ಕಲೆಹಾಕಿದರೆ, 631 ವಿಕೆಟ್​ಗಳನ್ನು ಸಹ ಕಬಳಿಸಿದ್ದಾರೆ. ಹಾಗೆಯೇ 275 ಕ್ಯಾಚ್​ಗಳನ್ನು ಸಹ ಹಿಡಿದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವ ಬ್ರಾವೊ ನಾಲ್ಕು ತಂಡಗಳೊಂದಿಗೆ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

1 / 5
ವೆಸ್ಟ್ ಇಂಡೀಸ್ ದಿಗ್ಗಜ ಡ್ವೇನ್ ಬ್ರಾವೊ (Dwayne Bravo) ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ನಿವೃತ್ತಿಯ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಐಪಿಎಲ್ 2025 ಕ್ಕೆ ಬ್ರಾವೊ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿಕೊಂಡಿದೆ. ಕಳೆದ ಸೀಸನ್​ನಲ್ಲಿ ವಿಂಡೀಸ್ ಆಲ್​ರೌಂಡರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

2 / 5
ಇದೀಗ ಡ್ವೇನ್ ಬ್ರಾವೊ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. ಅದು ಸಹ ನಾಲ್ಕು ತಂಡಗಳ ಮೆಂಟರ್ ಪೋಸ್ಟ್ ಆಫರ್ ನೀಡುವ ಮೂಲಕ ಎಂಬುದೇ ವಿಶೇಷ. ಅಂದರೆ ಬ್ರಾವೊ ಕೆಕೆಆರ್ ಫ್ರಾಂಚೈಸಿಯ ನಾಲ್ಕು ತಂಡಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

3 / 5
ನೈಟ್ ರೈಡರ್ಸ್ ಫ್ರಾಂಚೈಸಿಯ ಅಧೀನದಲ್ಲಿ ನಾಲ್ಕು ತಂಡಗಳಿವೆ. ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಹೊಂದಿರುವ ಕೆಕೆಆರ್, ಇಂಟರ್​ನ್ಯಾಷನಲ್ ಟಿ20 ಲೀಗ್ (ಯುಎಇ) ​ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ಹೊಂದಿದೆ.

4 / 5
ಹಾಗೆಯೇ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಮಾಲಕತ್ವವನ್ನು ಹೊಂದಿದೆ. ಇನ್ನು ವೆಸ್ಟ್ ಇಂಡೀಸ್​ನ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ಫ್ರಾಂಚೈಸಿಯನ್ನು ಹೊಂದಿದೆ. ಈ ನಾಲ್ಕು ತಂಡಗಳಿಗೂ ಡ್ವೇನ್ ಬ್ರಾವೊ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

5 / 5
ಈ ಮೂಲಕ ಡ್ವೇನ್ ಬ್ರಾವೊ ಟಿ20 ಕ್ರಿಕೆಟ್​ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಕೆಕೆಆರ್ ಫ್ರಾಂಚೈಸಿಯು ಬ್ರಾವೊ ಅವರನ್ನೇ ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ, ಕಳೆದ ಕೆಲ ವರ್ಷಗಳಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ಪರ ಆಡಿರುವುದು. ಹೀಗಾಗಿಯೇ ದಿಗ್ಗಜ ಕ್ರಿಕೆಟ್​ನಿಗೆ ಕೆಕೆಆರ್ ಫ್ರಾಂಚೈಸಿ ಹೊಸ ಜವಾಬ್ದಾರಿಯನ್ನು ವಹಿಸಿದೆ.