IPL 2025: ವಿದೇಶಿ ಆಟಗಾರರಿಗೆ ಬ್ಯಾನ್ ಬಿಸಿ ಮುಟ್ಟಿಸಲು ಪ್ಲ್ಯಾನ್ ರೆಡಿ

|

Updated on: Aug 03, 2024 | 10:30 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನವೇ ವಿದೇಶಿ ಆಟಗಾರರಿಗೆ ಬಿಸಿ ಮುಟ್ಟಿಸಲು ಐಪಿಎಲ್ ಫ್ರಾಂಚೈಸಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ಬಿಸಿಸಿಐಗೆ ಹೊಸ ನಿಯಮವನ್ನು ಜಾರಿಗೆ ತರುವಂತೆ ಮನವಿ ಮಾಡಿದೆ. ಈ ನಿಯಮದಂತೆ ಐಪಿಎಲ್​ಗೆ ಆಯ್ಕೆಯಾಗಿ ಕೈ ಕೊಡುವ ಆಟಗಾರರ ಮೇಲೆ 2 ವರ್ಷಗಳ ಕಾಲ ನಿಷೇಧ ಹೇರಲಾಗುತ್ತದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಮೆಗಾ ಹರಾಜಿನ ಕುರಿತಾಗಿ ಬಿಸಿಸಿಐ ಹಾಗೂ ಐಪಿಎಲ್ ಮಾಲೀಕರ ನಡುವೆ ಸಭೆ ನಡೆದಿದೆ. ಈ ಸಭೆಯಲ್ಲಿ​ ಫ್ರಾಂಚೈಸಿಗಳು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಡಿಮ್ಯಾಂಡ್​ಗಳಲ್ಲಿ ಮುಖ್ಯವಾದವು ಫಾರಿನ್ ಪ್ಲೇಯರ್ಸ್ ಬ್ಯಾನ್ ರೂಲ್ಸ್​.

2 / 6
ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡು ಆ ಬಳಿಕ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಕೆಲ ಫ್ರಾಂಚೈಸಿಗಳು ಪ್ರಸ್ತಾಪಿಸಿವೆ. ಇದಕ್ಕೆ ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇದೀಗ ಐಪಿಎಲ್ ಫ್ರಾಂಚೈಸಿಗಳು ಆಗ್ರಹಿಸಿದೆ.

3 / 6
ಅದರಂತೆ ಇದೀಗ ಗಾಯದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್​ನಿಂದ ಹಿಂದೆ ಸರಿದರೆ, ಅಂತಹ ಆಟಗಾರರನ್ನು 2 ವರ್ಷಗಳವರೆಗೆ ಬ್ಯಾನ್ ಮಾಡುವಂತೆ ತಿಳಿಸಲಾಗಿದೆ. ಈ ನಿಯಮವು ಈ ಬಾರಿಯ ಮೆಗಾ ಹರಾಜಿನ ವೇಳೆ ಜಾರಿಯಾಗುವ ಸಾಧ್ಯತೆಯಿದೆ.

4 / 6
ಐಪಿಎಲ್ 2022, 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಜೇಸನ್ ರಾಯ್ ಟೂರ್ನಿ ಆರಂಭಕ್ಕೂ ಕೆಲ ದಿನಗಳಿರುವಾಗ ಹಿಂದೆ ಸರಿದ್ದರು. ಹಾಗೆಯೇ ವನಿಂದು ಹಸರಂಗ (SRH), ಹ್ಯಾರಿ ಬ್ರೂಕ್ (DC), ಡೇವಿಡ್ ವಿಲ್ಲಿ (ಎಲ್​ಎಸ್​ಜಿ), ಗಸ್ ಅಟ್ಕಿಸನ್ (KKR), ಮಾರ್ಕ್​ ವುಡ್ (LSG) ಸೇರಿದಂತೆ ಕೆಲ ಆಟಗಾರರು ಕಳೆದ ಸೀಸನ್​ನಲ್ಲಿ ಕೈಕೊಟ್ಟಿದ್ದರು.

5 / 6
ನಾವು ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತೇವೆ. ಹೀಗೆ ಯೋಜನೆಯೊಂದಿಗೆ ಖರೀದಿಸಿದ ಆಟಗಾರರು ಕೊನೆಯ ಕ್ಷಣದಲ್ಲಿ ಕೈ ಕೊಡುವುದರಿಂದ ಅದು ತಂಡದ ಸಮತೋಲನ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಐಪಿಎಲ್​ಗೆ ಆಯ್ಕೆಯಾಗಿ ವಿನಾಕಾರಣ ಹಿಂದೆ ಸರಿಯುವ ಆಟಗಾರರ ಮೇಲೆ ಕೆಲ ವರ್ಷಗಳವರೆಗೆ ನಿಷೇಧ ಹೇರಬೇಕೆಂದು ಫ್ರಾಂಚೈಸಿಗಳು ಆಗ್ರಹಿಸಿದೆ.

6 / 6
ಐಪಿಎಲ್ ಫ್ರಾಂಚೈಸಿಗಳ ಈ ಮನವಿಗೆ ಬಿಸಿಸಿಐ ಕಡೆಯಿಂದಲೂ ಸಕರಾತ್ಮಕ ಸ್ಪಂದನೆ ದೊರೆತಿದೆ. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಆಯ್ಕೆಯಾದ ವಿದೇಶಿ ಆಟಗಾರರು, ವಿನಾಕಾರಣ ಟೂರ್ನಿಯಿಂದ ಹಿಂದೆ ಸರಿದರೆ 2 ವರ್ಷಗಳ ಬ್ಯಾನ್​ಗೆ ಒಳಗಾಗುವುದು ಬಹುತೇಕ ಖಚಿತ ಎನ್ನಬಹುದು.