IPL 2025: ಐಪಿಎಲ್ ಆಟಗಾರರ ರಿಟೈನ್ಗೆ ದಿನಾಂಕ ನಿಗದಿ
IPL 2025 Mega Auction: ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ನಾಲ್ಕರಿಂದ ಆರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಇನ್ನುಳಿದ ಆಟಗಾರರನ್ನು ತಂಡದಿಂದ ಬಿಡಬೇಕಾಗುತ್ತದೆ. ಹೀಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲು ದಿನಾಂಕ ನಿಗದಿಯಾಗಿದೆ.
1 / 5
IPL 2025: ಐಪಿಎಲ್ 2025ರ ಆವೃತ್ತಿಗಾಗಿ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳಿಗೆ ಕೆಲವು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಹೀಗೆ ರಿಟೈನ್ ಮಾಡಿಕೊಳ್ಳಲು ಕೆಲ ನಿಬಂಧನೆಗಳಿರುತ್ತವೆ. ಆ ನಿಬಂಧನೆಗಳೇನು ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.
2 / 5
ಈ ಹಿಂದೆ ಜುಲೈ ಅಂತ್ಯದಲ್ಲಿ ರಿಟೈನ್ ನಿಯಮವನ್ನು ಪ್ರಕಟಿಸಲಿದೆ ಎಂದು ಹೇಳಲಾಗಿತ್ತು. ಇದಾದ ಬಳಿಕ ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಐಪಿಎಲ್ ಹರಾಜು ನಿಯಮಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ವರದಿಗಳಾಗಿದ್ದವು. ಆದರೀಗ ಸೆಪ್ಟೆಂಬರ್ 29 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಮೆಗಾ ಹರಾಜು ನಿಯಮ ಘೋಷನೆಯಾಗಲಿದೆ ಎಂದು ತಿಳಿದು ಬಂದಿದೆ.
3 / 5
ಅಂದರೆ ಈ ತಿಂಗಳಾಂತ್ಯದ ವೇಳೆಗೆ ಐಪಿಎಲ್ ರಿಟೈನ್ ನಿಯಮ ಜಾರಿಯಾಗಲಿದೆ. ಇದಾದ ಬಳಿಕ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನವೆಂಬರ್ 15 ರವರೆಗೆ ಗಡುವು ನೀಡಲಾಗುತ್ತದೆ. ಅದರೊಳಗೆ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ ರಿಲೀಸ್ ಆದ ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
4 / 5
ಇಲ್ಲಿ ನವೆಂಬರ್ 15 ರೊಳಗೆ ರಿಟೈನ್ ಪಟ್ಟಿಯನ್ನು ಸಲ್ಲಿಸಬೇಕಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ಮೆಗಾ ಹರಾಜು ನಡೆಯುವುದು ಬಹುತೇಕ ಖಚಿತ ಎನ್ನಬಹುದು. ಅದರಂತೆ ವರ್ಷಾಂತ್ಯದೊಳಗೆ ಐಪಿಎಲ್ ಸೀಸನ್ 18ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಸಂಪೂರ್ಣ ಆಟಗಾರರ ಪಟ್ಟಿ ಕೂಡ ಹೊರಬೀಳಲಿದೆ.
5 / 5
ಇನ್ನು ಪ್ರಸ್ತುತ ಮಾಹಿತಿ ಪ್ರಕಾರ, ಐಪಿಎಲ್ ಮೆಗಾ ಹರಾಜಿಗೂ ಮುನ್ನ 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಅಂದರೆ ಇಲ್ಲಿ ನಾಲ್ವರನ್ನು ರಿಟೈನ್ ಮಾಡಿಕೊಂಡರೆ, ಇಬ್ಬರ ಮೇಲೆ ಆರ್ಟಿಎಂ ಆಯ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ವರದಿಗಳಾಗಿವೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ 4+2 ನಿಯಮ ಜಾರಿಗೆಯಾಗುವ ಸಾಧ್ಯತೆಯಿದೆ.