IPL 2025: ಐದನೇ ತಂಡದ ಪರ ಕಣಕ್ಕಿಳಿಯಲಿರುವ ಕೆಎಲ್ ರಾಹುಲ್
IPL 2025 KL Rahul: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಕೆಎಲ್ ರಾಹುಲ್ ಈವರೆಗೆ 132 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 4 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 4683 ರನ್ ಕಲೆಹಾಕಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿರುವ ರಾಹುಲ್ ಡಿಸಿ ಪರ ಹೊಸ ಇನಿಂಗ್ಸ್ ಆರಂಭಿಸುವ ವಿಶ್ವಾಸದಲ್ಲಿದ್ದಾರೆ.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಇತಿಹಾಸದಲ್ಲಿ ಕೆಎಲ್ ರಾಹುಲ್ ಈವರೆಗೆ 4 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಈ ನಾಲ್ಕು ತಂಡಗಳಲ್ಲಿ ಎರಡು ಟೀಮ್ಗಳ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ಕೆಎಲ್ಆರ್ 5ನೇ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
2 / 8
ಐಪಿಎಲ್ ಸೀಸನ್-18ರ ಮೆಗಾ ಹರಾಜಿನ ಮೂಲಕ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 14 ಕೋಟಿ ರೂ. ನೀಡಿ ಖರೀದಿಸಿದೆ. ಅದರಂತೆ ಮುಂದಿನ ಸೀಸನ್ನಲ್ಲಿ ಕನ್ನಡಿಗ ಡೆಲ್ಲಿ ಪರ ಬ್ಯಾಟ್ ಬೀಸಲಿದ್ದಾರೆ. ಇದಕ್ಕೂ ಮುನ್ನ ಕೆಎಲ್ ರಾಹುಲ್ ಆಡಿದ ತಂಡಗಳಾವುವು ಎಂದು ನೋಡುವುದಾದರೆ...
3 / 8
RCB: ಕೆಎಲ್ ರಾಹುಲ್ ತಮ್ಮ ಐಪಿಎಲ್ ಕೆರಿಯರ್ ಆರಂಭಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. 2013 ರಲ್ಲಿ ಆರ್ಸಿಬಿ 5 ಪಂದ್ಯಗಳನ್ನಾಡಿದ್ದಾರೆ.
4 / 8
SRH: ಐಪಿಎಲ್ 2014 ರಲ್ಲಿ ಕೆಎಲ್ ರಾಹುಲ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿತು. ಅದರಂತೆ 2014 ಮತ್ತು 2015 ರಲ್ಲಿ ಎಸ್ಆರ್ಹೆಚ್ ಪರ ಕಣಕ್ಕಿಳಿದ ರಾಹುಲ್ ಒಟ್ಟು 20 ಪಂದ್ಯಗಳನ್ನಾಡಿದ್ದಾರೆ.
5 / 8
RCB: 2016 ರ ಹರಾಜಿಗೂ ಮುನ್ನ ಆರ್ಸಿಬಿ ಟ್ರಾನ್ಸ್ಫರ್ ಆಯ್ಕೆಯ ಮೂಲಕ ಕೆಎಲ್ ರಾಹುಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದರಂತೆ ಎರಡು ಸೀಸನ್ಗಳಲ್ಲಿ (2016-17) ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಒಟ್ಟು 28 ಪಂದ್ಯಗಳನ್ನಾಡಿದ್ದಾರೆ.
6 / 8
PBKS: 2018 ರಲ್ಲಿ ಪಂಜಾಬ್ ಕಿಂಗ್ಸ್ ಪಾಲಾದ ಕೆಎಲ್ ರಾಹುಲ್ 4 ಸೀಸನ್ ಆಡಿದ್ದರು. ಈ ವೇಳೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿಯೂ ಕಾಣಿಸಿಕೊಂಡಿದ್ದರು. ಅದರಂತೆ 2018 ರಿಂದ 2021ರವರೆಗೆ ಪಂಜಾಬ್ ಪರ ರಾಹುಲ್ 55 ಪಂದ್ಯಗಳನ್ನಾಡಿದ್ದಾರೆ.
7 / 8
LSG: 2021 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಆಯ್ಕೆಯಾದ ಕೆಎಲ್ ರಾಹುಲ್ ಎಲ್ಎಸ್ಜಿ ಪರ ಒಟ್ಟು ಮೂರು ಸೀಸನ್ ಆಡಿದ್ದಾರೆ. ಈ ವೇಳೆ ಒಟ್ಟು 38 ಪಂದ್ಯಗಳನ್ನಾಡಿದ್ದಾರೆ.
8 / 8
DC: ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿರುವ ಕೆಎಲ್ ರಾಹುಲ್ ಐಪಿಎಲ್ 2025 ರಲ್ಲಿ ಬ್ಲೂ-ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಡಿಸಿ ಪರ ಹೊಸ ಇನಿಂಗ್ಸ್ ಆರಂಭಿಸಲು ರಾಹುಲ್ ಸಜ್ಜಾಗಿ ನಿಂತಿದ್ದಾರೆ.